ಪರೇಶ್‌ ಮೇಸ್ತ ಸಾವು ಪ್ರಕರಣ : ʼಸಿಬಿಐ ವರದಿಯನ್ನು ಒಪ್ಪಲ್ಲʼ – ಪ್ರಮೋದ್‌ ಮುತಾಲಿಕ್

2017ರ ಡಿಸೆಂಬರ್ 6ರಂದು ಹೊನ್ನಾವರದಲ್ಲಿ ನಡೆದ ಗಲಭೆಯೊಂದರಲ್ಲಿ ಮೀನುಗಾರ ಯುವಕ ಪರೇಶ್ ಮೇಸ್ತಾ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು, ಇದನ್ನು ಕೊಲೆ ಎಂದು ಬಿಂಬಿಸಲಾಗಿತ್ತು. ಈ ಸಾವಿನ ಪಟ್ಟವನ್ನು ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಅನ್ಯಕೋಮಿನವರ ತಲೆಗೆ ಕಟ್ಟಲಾಗಿತ್ತು. ಹಲವು ಬಗೆಯ ದೊಂಬಿಗಳು, ಬಂದ್‌ ಗಳು ಮುಂತಾದವು ಸಂಭವಿಸಿದ್ದವು.

ಆದರೆ 5 ವರ್ಷದ ಸುದೀರ್ಘ ತನಿಖೆಯ ಬಳಿಕ ಸಿ ಬಿ ಐ ʼಇದು ಕೊಲೆಯಲ್ಲ, ಆಕಸ್ಮಿಕ ಸಾವುʼ ಎಂದು ವರದಿ ನೀಡಿ ನ್ಯಾಯಾಲಯಕ್ಕೆ ಸಲ್ಲಿಸಿದೆ. ಈ ಕುರಿತು ಹಲವರು ಬಿಜೆಪಿ ವಿರೋಧಿಗಳು ಬಿಜೆಪಿಯನ್ನು ಮತ್ತು ಹಿಂದೂ ಪರ ಸಂಘಟನೆಗಳನ್ನು ವ್ಯಾಪಕ ಟೀಕೆಗೊಳಪಡಿಸುತ್ತಿದ್ದಾರೆ.

ಇದರ ಬೆನ್ನಲ್ಲೇ ಸಿ ಬಿ ಐ ನೀಡಿದ ವರದಿಯನ್ನು ಶ್ರೀ ರಾಮ ಸೇನೆಯ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಅಲ್ಲಗಳೆದಿದ್ದಾರೆ. ʼಪರೇಶ್ ಮೇಸ್ತ ನನ್ನು ನೂರಕ್ಕೆ ನೂರು ಕೊಲೆಗೆಯ್ಯಲಾಗಿದೆ. ಇದರಲ್ಲಿ ಅನುಮಾನವೇ ಇಲ್ಲ. ಕೇಂದ್ರ ಸರ್ಕಾರ ಈ ಕೇಸನ್ನು ಮರು ತೆರೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ʼಆ ಸಂದರ್ಭದಲ್ಲಿ ಅಧಿಕಾರದ ಗದ್ದುಗೆಯಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಪೂರಕ ಸಾಕ್ಷ್ಯಗಳನ್ನು ನಾಶ ಮಾಡಿದೆ. ಕೇಂದ್ರ ಸರ್ಕಾರ ಈ ಪ್ರಕರಣವನ್ನು ಮರು ತೆರೆಯಬೇಕು. ಸಿಬಿಐ ನೀಡಿದ ವರದಿ ಮೋಸದ ವರದಿ. ಇದನ್ನು ಒಪ್ಪಲ್ಲʼ ಎಂದೂ ಹೇಳಿದ್ದಾರೆ.

Leave A Reply

Your email address will not be published.