ಇತ್ತೀಚೆಗಷ್ಟೇ ಕೇಂದ್ರ ಪಾಪ್ಯುಲರ್ ಫ್ರಂಟ್ ಇಂಡಿಯಾವನ್ನು (PFI) 5 ವರ್ಷ ನಿಷೇಧಗೊಳಿಸಿ ಆದೇಶ ಹೊರಡಿಸಿತ್ತು. PFI ನಿಷೇಧದ ಬಳಿಕ SDPI ಅನ್ನೂ ನಿಷೇಧಿಸಬೇಕು ಎಂಬ ಊಹಾಪೋಹಗಳಿಗೆ ಚುನಾವಣಾ ಆಯೋಗ ಇಂದು ತೆರೆ ಎಳೆದಿದೆ. PFI ಜೊತೆ SDPI ಗೆ ಯಾವುದೇ ಸಂಬಂಧವಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ನಿಷೇಧಿತ ಪಿಎಫ್‌ಐ (PFI) ಸಂಘಟನೆಯೊಂದಿಗೆ ಎಸ್ಬಿಪಿಐ (SDPI) ಯಾವುದೇ ಸಂಬಂಧ ಹೊಂದಿಲ್ಲ ಎಂದು ಮುಖ್ಯ ಚುನಾವಣಾ ಆಯೋಗ (Election Commission) ಸ್ಪಷ್ಟನೆ ನೀಡಿದೆ.
ಪಾಪ್ಯುಲರ್ ಫ್ರೆಂಟ್ ಇಂಡಿಯಾ (PFI) ನಿಷೇಧದ ಬಳಿಕ SDPI ಅನ್ನೂ ನಿಷೇಧಿಸಬೇಕು ಎಂಬ ಊಹಾಪೋಹಗಳಿಗೆ ಚುನಾವಣಾ ಆಯೋಗ ಇಂದು ತೆರೆ ಎಳೆದಿದೆ. PFI ಜೊತೆ SDPIಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಪಪಡಿಸಿದೆ.
ಸೆಪ್ಟೆಂಬರ್ 28ರಂದು ಕೇಂದ್ರ ಸರ್ಕಾರ ಪಿಎಫ್‌ಐ (PFI) ಸಂಘಟನೆಯನ್ನು ನಿಷೇಧಿಸಿತು. ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವಿಕೆ ಕಾಯ್ದೆ (UAPA) ಅಡಿಯಲ್ಲಿ ಪಿಎಫ್‌ಐ ಹಾಗೂ ಅದರ 8 ಅಂಗ ಸಂಸ್ಥೆಗಳನ್ನು ನಿಷೇಧಿಸಿತ್ತು.
ಎಸ್ಡಿಪಿಐ ಎಲ್ಲಾ ರೀತಿಯ ಅಗತ್ಯ ದಾಖಲೆ ಸಲ್ಲಿಸಿದ್ದು, ಈವರೆಗೂ ಪಿಎಫ್‌ಐನೊಂದಿಗೆ ಯಾವುದೇ ಸಂಪರ್ಕ ಹೊಂದಿಲ್ಲ ಎಂದು ಹೇಳಿದ್ದಾರೆ. SDPI ಸ್ಪಷ್ಟನೆ ಇದೇ ವಿಚಾರವಾಗಿ ನೀಡಿದೆ. 2009 ರ ಜೂನ್ 21ರಂದು ಎಸ್ಡಿಪಿಐ ಅಸ್ತಿತ್ವಕ್ಕೆ ಬಂದಿದ್ದು, 2010 ಏಪ್ರಿಲ್ 13ರಂದು ಭಾರತದ ಚುನಾವಣಾ ಆಯೋಗದಲ್ಲಿ ನೋಂದಾಯಿಸಿಕೊಂಡಿದೆ.