ಮಗನಿಗೆ ಹೆಣ್ಣು ಸಿಗುತ್ತಿಲ್ಲ ಎಂದು ಪೂಜೆ ಮಾಡಿದ ಅರ್ಚಕನಿಗೆ ಹಿಗ್ಗಾಮುಗ್ಗ ಥಳಿತ !!!

ಪೂಜೆ ಎಂದಾಗ ಅದರದ್ದೇ ಆದ ವಿಧಿ ವಿಧಾನಗಳು ರೂಢಿ ಸಂಪ್ರದಾಯಗಳು ಇದ್ದೇ ಇದೆ. ಪೂಜಾ ವಿಧಾನಗಳು ಮಂತ್ರಗಳು ಕೆಲವೊಂದು ಕಡೆ ಬೇರೆಯಾದರು ಸಹ ಉದ್ದೇಶ ಒಂದೇ ಆಗಿರುತ್ತದೆ. ಹಾಗೆಯೇ ಪೂಜೆ ಮಾಡುವ ಬ್ರಾಹ್ಮಣ ವ್ಯಕ್ತಿಗಳನ್ನು ಸಹ ಅಪಾರ ಗೌರವ ಹಾಗೂ ಸತ್ಕಾರ ಮಾಡುವುದು ರೂಢಿ. ಆದರೆ ಇಲ್ಲೊಂದು ಕಡೆ ಸತ್ಯನಾರಾಯಣ ಪೂಜೆ ನಡೆಸಿದ ಧಾರ್ಮಿಕ ಕ್ರಿಯೆಗಳು ಸರಿಯಾಗಿರಲಿಲ್ಲ ಎಂದು ಪೂಜೆ ಮಾಡಿಸಿದ ಮನೆಯವರು ಹಲ್ಲೆ ನಡೆಸಿದ ಪ್ರಸಂಗ ನಡೆದಿದೆ.


Ad Widget

Ad Widget

Ad Widget

Ad Widget
Ad Widget

Ad Widget

ರಾಜಸ್ಥಾನದಲ್ಲಿನ ಕೋಟಾ ನಿವಾಸಿಯಾಗಿರುವ ಅರ್ಚಕ ಕುಂಜ್‌ಬಿಹಾರಿ ಶರ್ಮಾ ಅವರನ್ನು ಕಾರ್ಯಕ್ರಮದ ಆಯೋಜಕರು ಮತ್ತು ಅವರ ಇಬ್ಬರು ಪುತ್ರರು ಗುರುವಾರ ರಾತ್ರಿ ಥಳಿಸಿದ್ದಾರೆ.


Ad Widget

ಲಕ್ಷ್ಮಿಕಾಂತ್ ಶರ್ಮಾ ಎಂಬುವರ ಮನೆಯಲ್ಲಿ ಪೂಜೆ ಮಾಡಿಸಲು ಅರ್ಚಕರನ್ನು ಆಹ್ವಾನಿಸಲಾಗಿತ್ತು. ಸರಾಗವಾಗಿ ಪೂಜಾ ಕಾರ್ಯಕ್ರಮ ಮುಗಿದ ನಂತರ ಅವರು ಮನೆಗೆ ತೆರಳಿದ್ದರು. ತಡರಾತ್ರಿ ವೇಳೆ ಲಕ್ಷ್ಮಿಕಾಂತ್ ಶರ್ಮಾ ಮತ್ತು ಅವರ ಮಕ್ಕಳಾದ ವಿಪುಲ್ ಮತ್ತು ಅರುಣ್ ಎಂಬವರು ಅರ್ಚಕರ ಮನೆಗೆ ಹೋಗಿ ಅರುಣ್‌ಗೆ ಮದುವೆಯಾಗಲು ತಕ್ಕ ಹೆಣ್ಣು ಸಿಗುತ್ತಿಲ್ಲ ಎಂಬ ಕಾರಣದ ಕೋಪದಿಂದ ಮನ ಬಂದಂತೆ ಹೊಡೆದಿದ್ದಾರೆ. ವಿಪುಲ್ ಎಂಬವನು ಅರ್ಚಕರ ಕಿವಿಯನ್ನು ಕಚ್ಚಿ ತೀವ್ರ ಘಾಸಿ ಮಾಡಿದ್ದಾನೆ.

ಆರೋಪಿ ಅರುಣ್‌ಗೆ ಮದುವೆಯಾಗಲು ತಕ್ಕ ಹೆಣ್ಣು ಸಿಗುತ್ತಿಲ್ಲ ಎಂಬ ಕಾರಣಕ್ಕೆ ಅರ್ಚಕರನ್ನು ಸತ್ಯನಾರಾಯಣ ಪೂಜೆ ಮಾಡಿಸಲು ಆಹ್ವಾನಿಸಿದ್ದರು.ಪೂಜೆ ನಡೆದ ನಂತರ ತಪ್ಪಾದ ರೀತಿಯಲ್ಲಿ ಪೂಜೆ ಆಚರಣೆಗಳನ್ನು ನಡೆಸಿದ್ದು ಅಲ್ಲದೆ ಅರುಣ್ ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸಿದ್ದ ಎಂದು ಪೂಜೆ ನಡೆಸಿದ ಮನೆಯವರು ಅರ್ಚಕರನ್ನು ಆರೋಪಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಅರುಣ್ ಮತ್ತು ವಿಪುಲ್ ಅವರು ಅರ್ಚಕರನ್ನು ಥಳಿಸುವ ವೇಳೆಯಲ್ಲಿ ಗದ್ದಲ ಕೇಳಿ ಅರ್ಚಕರನ್ನು ನೆರೆಹೊರೆಯವರು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದರು. ಲಕ್ಷ್ಮೀಕಾಂತ್ ಶರ್ಮಾ ಮತ್ತು ಅವರ ಮಕ್ಕಳಾದ ವಿಪುಲ್ ಮತ್ತು ಅರುಣ್ ಅವರನ್ನು ಬಂಧಿಸಲಾಗಿದೆ.

ದೇವರ ಸೇವೆ ಮಾಡುವ ಅರ್ಚಕರನ್ನು ಸಹ ಗೌರವಿಸದವರು ಇನ್ನೂ ದೇವರು ಮುಂದೆ ಬಂದರೆ ಏನು ಗತಿ!

error: Content is protected !!
Scroll to Top
%d bloggers like this: