ಸೌದಿ ಅರೇಬಿಯಾದ ವಿಶ್ವವಿದ್ಯಾನಿಲಯಗಳಲ್ಲಿ ಇಂದು ಯೋಗ ತರಬೇತಿ

ರಿಯಾದ್: 03 ಅಕ್ಟೋಬರ್ 2022:- ಗಲ್ಫ್ ರಾಷ್ಟ್ರವಾದ ಸೌದಿ ಅರೇಬಿಯಾ ಸರಕಾರವು ಸೌದಿ ವಿಶ್ವವಿದ್ಯಾನಿಲಯಗಳ ಕ್ರೀಡಾ ಒಕ್ಕೂಟದ (SUSF) ಸಹಕಾರದೊಂದಿಗೆ ದೇಶಾದ್ಯಂತ ಎಲ್ಲಾ ವಿಶ್ವವಿದ್ಯಾನಿಲಯದ ಪ್ರತಿನಿಧಿಗಳಿಗೆ ಇಂದು (ಸೋಮವಾರ) ಯೋಗದ ಉಪನ್ಯಾಸವನ್ನು ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಮಾಧ್ಯಮ ಮೂಲಗಳು ತಿಳಿಸಿವೆ.

ʼಯೋಗ ಫಾರ್ ಯುನಿವರ್ಸಿಟಿ ಸ್ಟೂಡೆಂನ್ಟ್ಸ್ ಆಫ್ ಬೋತ್ ಜೆಂಡರ್ಸ್ʼ ಎಂಬ ಶೀರ್ಷಿಕೆಯಡಿಯಲ್ಲಿ ಈ ಕಾಯ್ರಕ್ರಮವನ್ನು ಯೋಜಿಸಿದ್ದು, ಭಾರತ ಮೂಲದ ಸಾಂಪ್ರದಾಯಿಕ ಪದ್ಧತಿಯಾದ ಯೋಗಕ್ಕೆ ಅರಬ್ ದೇಶಗಳಲ್ಲಿ ಹೊಸ ಮುನ್ನುಡಿಯ ಮೂಲಕ ಮಾನ್ಯತೆ ಲಭಿಸಿದೆ ಎಂದು ವರದಿಗಳು ತಿಳಿಸಿವೆ.

ಈ ಉಪನ್ಯಾಸವು ಸೌದಿ ವಿಶ್ವವಿದ್ಯಾನಿಲಯದ ಪ್ರತಿನಿಧಿಗಳಿಗೆ ಯೋಗ ಮತ್ತು ಯೋಗಾಸನ ಸಂಬಂಧಿತ ಕ್ರೀಡೆಗಳನ್ನು, ಅದರ ಮಹತ್ವವನ್ನು ಪರಿಚಯಿಸುವ ಗುರಿಯನ್ನು ಹೊಂದಿದೆ. ವಿಶ್ವವಿದ್ಯಾನಿಲಯದ ಕ್ಯಾಂಪಸ್ ವಿದ್ಯಾರ್ಥಿಗಳಿಗೆ ಯೋಗವನ್ನು ಅಭ್ಯಾಸ ಮಾಡಿಸುವ ಮೂಲಕ ಅವರ ಮಾನಸಿಕ ಮತ್ತು ದೈಹಿಕ ಸ್ಥಿರತೆಯನ್ನು ಕಾಪಾಡುವ ಪ್ರಯತ್ನಕ್ಕೆ ಸರಕಾರ ಮುಂದಾಗಿದೆ ಎಂದು ಸೌದಿ ಗೆಜೆಟ್ ವರದಿ ಮಾಡಿದೆ.

ಇದರ ಮುಂದುವರಿದ ಭಾಗವಾಗಿ ನಿರ್ದಿಷ್ಟ ವೃತ್ತಿಪರ ಯೋಗಾಸನ ಕ್ರೀಡಾ ತರಬೇತಿಯ ಕೋರ್ಸನ್ನು ಸ್ಥಾಪಿಸಿ, ಸ್ಥಳೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಗಳಲ್ಲಿ ಭಾಗೀದಾರರಾಗಲು ಯೋಜನೆ ರೂಪಿಸುವ ಕಾರ್ಯಕ್ಕೆ ಸೌದಿ ಸರಕಾರ ಮುಂದಾಗಿದೆ ಎಂದೂ ಸೌದಿ ಗೆಜೆಟ್ ವರದಿ ಮಾಡಿದೆ.

Leave A Reply

Your email address will not be published.