Coconut Milk : ತೆಂಗಿನ ಹಾಲನ್ನು ಬಳಸಿ ದಪ್ಪ ಮತ್ತು ಉದ್ದ ಕೂದಲು ಪಡೆಯಿರಿ

ಸೌಂದರ್ಯ ಕಾಪಾಡಿಕೊಳ್ಳಲು ಎಲ್ಲರೂ ಹರಸಾಹಸ ಪಡುವುದು ಸಾಮಾನ್ಯ. ಮಿರಿ ಮಿರಿ ಮಿಂಚುವ ಕೂದಲನ್ನು ಪಡೆಯಲು ನಾನಾ ರೀತಿಯ ಎಣ್ಣೆ, ಶಾಂಪೂ ಬಳಕೆ ಮಾಡುವುದೂ ಸಹಜ. ಮನೆಯಲ್ಲಿ ದಿನನಿತ್ಯ ಬಳಸುವ ತೆಂಗಿನ ಕಾಯಿಯ ಹಾಲಿನಿಂದ ಕೂದಲ ಆರೈಕೆ ಮಾಡಬಹುದು ಎಂದರೆ ಅಚ್ಚರಿಯಾದರೂ ನಿಜ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಹಾಗೂ ಡ್ಯಾಂಡ್ರಫ್ ಸಮಸ್ಯೆ ಹೆಚ್ಚುತ್ತಿದ್ದು, ಅದಕ್ಕೆ ಪರಿಹಾರ ಕಂಡುಕೊಳ್ಳಲು ಸಾಕಷ್ಟು ಪ್ರಯಾಸ ಪಡುವವರು ಕೂಡ ಇದ್ದಾರೆ.ಒಂದು ಸಾಧಾರಣ ತೆಂಗಿನಕಾಯಿಯಿಂದ ತಯಾರಾಗುವ ಹಲವಾರು ಪದಾರ್ಥಗಳು ನಮಗೆ ಆರೋಗ್ಯಕರ ಲಾಭಗಳನ್ನು ತಂದು ಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ. ತೆಂಗಿನ ಹಾಲನ್ನು ಹಬ್ಬ-ಹರಿದಿನಗಳಲ್ಲಿ ಬಳಕೆ ಮಾಡುವುದೂ ಸಾಮಾನ್ಯ.ತೆಂಗಿನ ಹಾಲಿನಲ್ಲಿ ನಮ್ಮ ಚರ್ಮವನ್ನು ಮಾಯಿಸ್ಚರೈಸರ್ ಮಾಡುವ ಗುಣ ಲಕ್ಷಣಗಳು ಅಡಗಿವೆ. ತೆಂಗಿನ ಎಣ್ಣೆಗೂ ಮತ್ತು ತೆಂಗಿನ ಹಾಲಿಗೆ ಸಾಕಷ್ಟು ವ್ಯತ್ಯಾಸವಿದ್ದು, ತೆಂಗಿನ ಹಾಲಿನಲ್ಲಿ ಹಾಲಿನ ರೀತಿ ಬೆಳ್ಳಗಿನ ಪದಾರ್ಥ ಅಡಗಿದ್ದು, ಇದು ತೆಂಗಿನ ಎಣ್ಣೆಯ ರೀತಿ ಜಿಡ್ಡು ಜಿಡ್ಡಾಗಿ ಕಂಡು ಬರುವುದಿಲ್ಲ. ತೆಂಗಿನ ಹಾಲನ್ನು ಕೂದಲಿಗೆ ಬಳಸುವ ವಿಧಾನ ಜೊತೆಗೆ ಪ್ರಯೋಜನದ ಬಗ್ಗೆ ಮಾಹಿತಿ: ಒಣ ತೆಂಗಿನಕಾಯಿಯ ಬಿಳಿ ಭಾಗದಿಂದ ತೆಂಗಿನ ಹಾಲನ್ನು ಹೊರ ತೆಗೆದು ಅದನ್ನು ಕೂದಲಿಗೆ ಹಾಕಿದರೆ, ಇದರಲ್ಲಿರುವ ಕೊಬ್ಬು ಮತ್ತು ಮಾಯಿಶ್ಚರೈಸಿಂಗ್ ಅಂಶವು ಕಾರ್ಯ ನಿರ್ವಹಿಸಿ ಕೂದಲನ್ನು ಮೃದುವಾಗಿಸುತ್ತದೆ. ಟ್ಯಾಂಗ್ಲಿಂಗ್ ಸಮಸ್ಯೆ ತೆಗೆದು ಹಾಕುವುದರ ಜೊತೆಗೆ ಮುಖದ ಕೂದಲಿನ ಸಮಸ್ಯೆ ತೊಡೆದು ಹಾಕಲು ಇದು ಸಹಾಯಕವಾಗಿದೆ. ಬಿಸಿಲಿನ ಝಳದಿಂದ ಚರ್ಮದ ಕಾಂತಿ ಕುಗ್ಗಿದಾಗ ತೆಂಗಿನ ಹಾಲಿನ ಆರೈಕೆ ಸೂಕ್ತವಾಗಿದೆ. ಇದಕ್ಕಾಗಿ ಬಿಸಿಲಿಗೆ ಒಡ್ಡಿದ್ದ ಚರ್ಮದ ಎಲ್ಲಾ ಭಾಗಗಳಿಗೂ ರಾತ್ರಿ ಮಲಗುವ ಮುನ್ನ ಮೊದಲು ತಣ್ಣೀರಿನಿಂದ ತೊಳೆದು ತೆಂಗಿನ ಹಾಲಿನಲ್ಲಿ ಮುಳುಗಿಸಿದ ಹತ್ತಿಯುಂಡೆಯನ್ನು ಒರೆಸಿಕೊಳ್ಳಬಹುದು. ಬೆಳಿಗ್ಗೆದ್ದ ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಂಡರೆ ಚರ್ಮ ಕಪ್ಪಾಗುವುದು ಕಡಿಮೆಯಾಗುತ್ತದೆ.ಕೂದಲಿಗೆ ತೆಂಗಿನ ಹಾಲಿನಿಂದ ಮಸಾಜ್ ಮಾಡಬಹುದಾಗಿದ್ದು, ಕೂದಲನ್ನು ತೊಳೆಯಬಹುದು. ನೀರು ಮತ್ತು ಎಣ್ಣೆಯನ್ನು ಇದು ಒಳಗೊಂಡಿದೆ. ತೆಂಗಿನ ಹಾಲು ಕೂದಲು ಮತ್ತು ನೆತ್ತಿಯ ಆರೋಗ್ಯ ಕಾಪಾಡುತ್ತದೆ. ಕೂದಲಿನ ಬೆಳವಣಿಗೆ ಉತ್ತೇಜಿಸಲು ಸಹಾಯ ಮಾಡುತ್ತದೆ. ವಿಟಮಿನ್‌, ಪ್ರೋಟೀನ್‌, ಸತು ಮತ್ತು ಕಬ್ಬಿಣದಂಶಗಳಿಂದ ತೆಂಗಿನ ಹಾಲು ಸಮೃದ್ಧವಾಗಿದೆ. ಇದನ್ನು ಅನೇಕ ರೀತಿಯ ಶಾಂಪೂ ಮತ್ತು ಸೋಪ್ ತಯಾರಿಕೆಯಲ್ಲಿ ಬಳಸುತ್ತಾರೆ.ಮೂರು ದೊಡ್ಡ ಚಮಚ ತೆಂಗಿನ ಹಾಲು, ಒಂದು ಚಿಟಿಕೆ ಕಸ್ತೂರಿ, ಒಂದು ದೊಡ್ಡ ಚಮಚ ಜೇನು ಮತ್ತು ಒಂದು ದೊಡ್ಡ ಚಮಚ ಗಂಧದ ಪುಡಿ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ, ಈ ಲೇಪವನ್ನು ತಣ್ಣೀರಿನಿಂದ ತೊಳೆದುಕೊಂಡ ಮುಖಕ್ಕೆ ಹಚ್ಚಿ ಹದಿನೈದು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಂಡರೆ ತಕ್ಷಣವೇ ಚರ್ಮದ ಕಾಂತಿ ಹೆಚ್ಚುತ್ತದೆ.ಕೂದಲು ಬೆಳವಣಿಗೆಗೆ ತೆಂಗಿನ ಹಾಲು ಮಾಸ್ಕ್ ತಯಾರಿಸಬಹುದು. ತೆಂಗಿನ ಹಾಲನ್ನು ಲಘುವಾಗಿ ಬೆಚ್ಚಗಾಗಿಸಿ ಮತ್ತು ಸುಮಾರು 15 ನಿಮಿಷ ಕೂದಲಿಗೆ ಮತ್ತು ನೆತ್ತಿಗೆ ಮಸಾಜ್ ಮಾಡಿ ನಂತರ ಕೂದಲನ್ನು ಶವರ್ ಕ್ಯಾಪ್ನಿಂದ ಮುಚ್ಚಿಕೊಳ್ಳಬೇಕು. ಒಂದು ಗಂಟೆಯ ನಂತರ ಶಾಂಪೂವಿನಿಂದ ಕೂದಲು ತೊಳೆಯಬೇಕು.ಐದು ಚಮಚ ತೆಂಗಿನ ಹಾಲು, ಒಂದು ಚಮಚ ಮೊಸರು, ನಾಲ್ಕನೇ ಒಂದು ಚಮಚ ಕರ್ಪೂರ ಪುಡಿ ಬಳಸಿ, ಎಲ್ಲಾ ಪದಾರ್ಥಗಳನ್ನು ಬಟ್ಟಲಿನಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಮಿಶ್ರಣವನ್ನು ಕೂದಲಿನ ಬುಡದಿಂದ ತುದಿಯವರೆಗೆ ಚೆನ್ನಾಗಿ ಹಚ್ಚಿ ಒಂದು ಗಂಟೆಯ ನಂತರ ಶಾಂಪೂವಿನಿಂದ ಕೂದಲು ತೊಳೆಯಬೇಕು.ತೆಂಗಿನ ಹಾಲು ಮತ್ತು ಆಲಿವ್ ಎಣ್ಣೆ ಮಾಸ್ಕ್ ಬಳಸಿ ನಾಲ್ಕು ಚಮಚ ತೆಂಗಿನ ಹಾಲು, ಒಂದು ಚಮಚ ಆಲಿವ್ ಎಣ್ಣೆ, ಒಂದು ಚಮಚ ಜೇನುತುಪ್ಪ ಬಳಸಿ ಬಂದರೆ, ಬಟ್ಟಲಿನಲ್ಲಿ ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿಕೊಂಡು ಉಗುರು ಬೆಚ್ಚಗಾಗಿಸಿ ಮತ್ತು ನೆತ್ತಿ ಮತ್ತು ಕೂದಲಿಗೆ ಹಾಕಬೇಕು. ಒಂದು ಗಂಟೆಯ ನಂತರ ಸಾಮಾನ್ಯ ಶಾಂಪೂ ಬಳಸಿ ಕೂದಲನ್ನು ತೊಳೆದರೆ, ಕೂದಲು ಕಾಂತಿ ಹೆಚ್ಚುವುದು .ನಾಲ್ಕು ಚಮಚ ತೆಂಗಿನ ಹಾಲು, ಎರಡು ಚಮಚ ಜೇನುತುಪ್ಪ ಬಳಸಿ ಬಟ್ಟಲಿನಲ್ಲಿ ಮಿಶ್ರಣ ಮಾಡಿಕೊಂಡು ಮಿಶ್ರಣವನ್ನು ನೆತ್ತಿಯ ಮೇಲೆ ಮತ್ತು ಕೂದಲಿನ ಮೇಲೆ ಚೆನ್ನಾಗಿ ಅನ್ವಯಿಸಬೇಕು. ಎರಡು ಗಂಟೆಗಳ ನಂತರ ಶಾಂಪೂ ಹಾಕಿ ಕೂದಲನ್ನು ತೊಳೆದರೆ ಕೂದಲು ಕಾಂತಿ ಹೆಚ್ಚುತ್ತದೆ.ಕೂದಲಿನ ಮೃದುತ್ವವನ್ನು ಕಾಪಾಡಲು ತೆಂಗಿನ ಹಾಲಿನ ಬಳಕೆಯನ್ನು ನಿಯಮಿತವಾಗಿ ಮಾಡಿಕೊಳ್ಳಬಹುದು.ಇದಲ್ಲದೆ, ವೃದ್ಧಾಪ್ಯದ ಚಿಹ್ನೆಗಳಾದ ನೆರಿಗೆ, ಸೂಕ್ಷ್ಮ ಗೆರೆಗಳು, ಚುಕ್ಕೆಗಳು ಮೊದಲಾದವನ್ನು ನಿವಾರಿಸಲು ತೆಂಗಿನ ಹಾಲು ಅತ್ಯುತ್ತಮವಾಗಿದೆ. ಇದರಲ್ಲಿ ಹೇರಳವಾಗಿರುವ ವಿಟಮಿನ್ ಸಿ ಮತ್ತು ಇ ತ್ವಚೆಗೆ ಅಗತ್ಯವಾದ ಆರ್ದ್ರತೆಯನ್ನು ಒದಗಿಸಿ ಚರ್ಮದ ಸೆಳೆತವನ್ನು ಹೆಚ್ಚಿಸುತ್ತದೆ. ಇದರಿಂದ ವೃದ್ಧಾಪ್ಯದ ಚಿಹ್ನೆಗಳು ಇಲ್ಲವಾಗುತ್ತವೆ.ತೆಂಗಿನ ಹಾಲು ಮಾತ್ರವಲ್ಲದೇ, ತೆಂಗಿನ ನೀರನ್ನು ಕೂದಲಿಗೆ ಬಳಸುವುದರಿಂದಲೂ ಕೂಡ ಕೂದಲು ಚೆನ್ನಾಗಿ ಬೆಳೆಯುತ್ತದೆ. ಅದು ಕೂದಲನ್ನು ಹೈಡ್ರೇಟ್ ಮಾಡಿ ಕಿರುಚೀಲಗಳನ್ನು ಪೋಷಿಸುತ್ತದೆ ಜೊತೆಗೆ ನೆತ್ತಿಯಿಂದ ಬ್ಯಾಕ್ಟೀರಿಯಾವನ್ನು ನಿವಾರಿಸುತ್ತದೆ. ತೆಂಗಿನ ಹಾಲಿನಿಂದ ಅನೇಕ ಪ್ರಯೋಜನಗಳಿದ್ದು, ಕೂದಲಿನ ಮೃದುತ್ವದ ಜೊತೆಗೆ ಚರ್ಮದ ರಕ್ಷಣೆಗೆ ಕೂಡ ನೆರವಾಗುತ್ತವೆ.

Leave A Reply

Your email address will not be published.