ಚಾಕಲೇಟ್ ಚಾಕಲೇಟ್‌..ಅದರಲ್ಲೂ ವೈಟ್ ಚಾಕಲೇಟ್ ತಿನ್ನಿ…ಯಾಕೆ ಅಂತೀರಾ ? ಇಲ್ಲಿದೆ ಉತ್ತರ

ಎಲ್ಲರ ಬಾಯಲ್ಲೂ ನೀರೂರಿಸುವ ಚಾಕೋಲೇಟ್ ಇಷ್ಟಪಡದೆ ಇರಲು ಹೇಗೆ ಸಾಧ್ಯ? ಚಿಕ್ಕವರಿಂದ ಹಿಡಿದು ವಯಸ್ಸಾದವರು ಕೂಡ ಮೆಚ್ಚುವ ಚಾಕೋಲೇಟ್ ಅನೇಕ ಪ್ರಯೋಜನಗಳನ್ನು ಒಳಗೊಂಡಿದೆ.

ಚಿಕ್ಕ ಮಕ್ಕಳು ಚಾಕಲೇಟ್ ತಿನ್ನಲು ನಾನಾ ರೀತಿಯ ಸರ್ಕಸ್ ಮಾಡಿ,ಅತಿ ಹೆಚ್ಚು ತಿಂದರೆ ಹಲ್ಲು ಹಾಳಾಗುತ್ತದೆ ಎಂದು ಪೋಷಕರು ಬೈದರೂ ಕೂಡ ಲೆಕ್ಕಿಸದೇ ಕದ್ದು ತಿನ್ನುವ ಮಕ್ಕಳಿಗೇನು ಕಡಿಮೆಯಿಲ್ಲ. ಇಂತಹ ಚಾಕಲೇಟ್ ನಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿದರೆ ನೀವು ಹುಬ್ಬೇರಿಸುವುದರಲ್ಲಿ ಸಂಶಯವಿಲ್ಲ.

ರಕ್ತದ ಒತ್ತಡ ನಿಯಂತ್ರಣ, ದೇಹದಲ್ಲಿ ಹಾರ್ಮೋನ್ ಬದಲಾವಣೆಯ ಸಮತೋಲನ, ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿ ಡಾರ್ಕ್ ಚಾಕಲೇಟ್ ನೆರವಾಗುತ್ತದೆ. ಅಲ್ಲದೇ, ದೇಹಕ್ಕೆ ಅಗತ್ಯವಾಗಿ ಬೇಕಾದ ಕೆಲವು ನೈಸರ್ಗಿಕ ರೂಪದ ಖನಿಜಾಂಶಗಳು ಕೂಡ ಸಿಗುತ್ತವೆ
ಕ್ಲಸ್ಟರ್-ಟೈಪ್ ಮತ್ತು ಟೆನ್ಶನ್-ಟೈಪ್ ತಲೆನೋವುಗಳನ್ನು ಶಮನಮಾಡಲು ವೈಟ್ ಚಾಕೋಲೇಟ್ ಸೇವನೆ ಮಾಡುವುದು ಒಳ್ಳೆಯದು. ಚಾಕೋಲೇಟ್ ತಿಂದ ನಂತರ ಬಿಡುಗಡೆಯಾಗುವ ಡೋಪಮೈನ್, ನರಮಂಡಲವನ್ನು ವಿಶ್ರಾಂತಿ ಮಾಡಿ ತಲೆನೋವು ಕಡಿಮೆಯಾಗಲು ಸಹಾಯ ಮಾಡುತ್ತದೆ.
ಪ್ರತಿ ದಿನ ಡಾರ್ಕ್ ಚಾಕಲೇಟ್ ಸೇವನೆ ಮಾಡುವ ಅಭ್ಯಾಸದಿಂದ ದೇಹದಲ್ಲಿ ಸಂತೋಷಕರ ಹಾರ್ಮೋನ್ ಎಂದು ಕರೆಸಿಕೊಳ್ಳುವ ಎಂಡಾರ್ಫಿನ್ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಹಾಗಾಗಿ ಪ್ರತಿದಿನ ಎದುರಾಗುವ ಮಾನಸಿಕ ಒತ್ತಡವನ್ನು ದೂರ ಇರಿಸುತ್ತದೆ. ಇಷ್ಟೇ ಅಲ್ಲದೆ ಈಗಾಗಲೇ ಸಂಶೋಧಕರು ಕಂಡುಹಿಡಿದಿರುವ ಹಾಗೆ ಡಾರ್ಕ್ ಚಾಕ್ಲೇಟ್ ಸೇವನೆಯಿಂದ ವಯಸ್ಸಾಗುವಿಕೆ ಪ್ರಕ್ರಿಯೆ ಕೂಡ ಬಹಳ ನಿಧಾನವಾಗುತ್ತದೆ

ದೇಹದಲ್ಲಿ ರಕ್ತದ ಹರಿವನ್ನು ಹೆಚ್ಚಿಸುವ ಮೂಲಕ ಯಕೃತ್ತಿನ ಆರೋಗ್ಯವನ್ನು ಸುಧಾರಿಸುವ ಗುಣಗಳನ್ನು ವೈಟ್ ಚಾಕೋಲೇಟ್ ಹೊಂದಿದೆ. ಅದಲ್ಲದೆ ಗಾಯಗೊಂಡ ಅಂಗಾಂಶಗಳ ಚೇತರಿಕೆಯನ್ನು ಹೆಚ್ಚಿಸಲು ಕೂಡ ಸಹಾಯ ಮಾಡುತ್ತದೆ. ನೈಸರ್ಗಿಕ ಸಿಹಿಯ ಅಂಶ ಡಾರ್ಕ್ ಚಾಕ್ಲೇಟ್ ನಲ್ಲಿನ ಕಹಿಯನ್ನು ಹೋಗಲಾಡಿಸುತ್ತದೆ. ಇದರ ಜೊತೆಗೆ ಕಬ್ಬಿಣದ ಅಂಶ, ಮೆಗ್ನೀಷಿಯಂ, ಕಾಪರ್, ಮ್ಯಾಂಗನೀಸ್, ಪೊಟ್ಯಾಶಿಯಂ, ಪಾಸ್ಪರಸ್ ಮತ್ತು ಸೆಲೆನಿಯಂ ಅಂಶಗಳು ಇದರಲ್ಲಿ ಸಿಗುತ್ತವೆ. ಆದರೆ ಕೊಬ್ಬಿನ ಅಂಶ ಇರುವ ಕಾರಣ ಇತಿಮಿತಿಯಲ್ಲಿ ಸೇವನೆ ಮಾಡಬೇಕು.

ವೈಟ್ ಚಾಕೋಲೇಟ್ ತಿನ್ನುವುದರಿಂದ ಹದಗೆಟ್ಟ ಮನಸ್ಥಿತಿಯನ್ನು ಸರಿದೂಗಿಸಬಹುದು. ಯಾಕೆಂದರೆ ಈ ಚಾಕೋಲೇಟ್ ಮನಸ್ಥಿತಿಯನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಅದಲ್ಲದೆ ವೈಟ್ ಚಾಕೋಲೇಟ್’ನಲ್ಲಿ (White Chocolates) ಕೋಕೋ ಬೆಣ್ಣೆಯ ಅಂಶಗಳಿರುವುದರಿಂದ ಚರ್ಮದ ಆರೋಗ್ಯವನ್ನು ಸುಧಾರಿಸುವ ಜೈವಿಕ ಅಂಶಗಳನ್ನು ಒದಗಿಸುತ್ತದೆ.
ಚಾಕೋಲೆಟ್ ನಲ್ಲಿ ಅತಿ ಹೆಚ್ಚು ಪೌಷ್ಟಿಕ ಸತ್ವಗಳು ಸಿಗುತ್ತವೆ. ಅದರಲ್ಲೂ ಡಾರ್ಕ್ ಚಾಕೋಲೆಟ್ನಲ್ಲಿ ಕೋಕೋ ಅಂಶವಿದೆ ಇದರ ಜೊತೆಗೆ ಅಪಾರ ಪ್ರಮಾಣದ ಖನಿಜಾಂಶಗಳು ಮತ್ತು ಕರಗುವ ನಾರಿನ ಅಂಶ ಸಿಗುತ್ತದೆ. ಡಾರ್ಕ್ ಚಾಕಲೇಟ್ ನಲ್ಲಿ ಜಿಂಕ್ ಅಂಶ ಅಪಾರ ಪ್ರಮಾಣದಲ್ಲಿ ಸಿಗುತ್ತದೆ. ದೇಹದಲ್ಲಿ ಮೆಟಬಾಲಿಸಂ ಪ್ರಕ್ರಿಯೆಯನ್ನು ಚುರುಕುಗೊಳಿಸುವ ಅದ್ಭುತ ಗುಣಲಕ್ಷಣ ಇದರಲ್ಲಿ ನಾವು ಕಾಣಬಹುದು.
ಮಧ್ಯವಯಸ್ಸಿನಲ್ಲಿ ಹೃದಯಘಾತ ಸಮಸ್ಯೆ ಅಥವಾ ಪಾರ್ಶ್ವವಾಯು ಸಮಸ್ಯೆ ಎದುರಾಗದಂತೆ ಸೇವಿಸುವ ಡಾರ್ಕ್ ಚಾಕಲೇಟ್ ಕೆಲಸ ನಿರ್ವಹಿಸುತ್ತದೆ. ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಿ ಆರೋಗ್ಯಕರ ರಕ್ತಸಂಚಾರ ಏರ್ಪಾಡು ಮಾಡುತ್ತದೆ.

ರಕ್ತದ ಒತ್ತಡ ಮಾತ್ರವಲ್ಲದೆ ರಕ್ತಸಂಚಾರಕ್ಕೆ ಸಂಬಂಧಪಟ್ಟಂತೆ ಮತ್ತು ಹೃದಯಕ್ಕೆ ಸಂಬಂಧಪಟ್ಟಂತೆ ಇರುವ ಎಲ್ಲಾ ಬಗೆಯ ಕಾಯಿಲೆಗಳು ದೂರ ಆಗುತ್ತದೆ. ಚಾಕಲೇಟ್ ನಲ್ಲಿ ಇರುವಂತಹ ಕೆಲವೊಂದು ಅಂಶಗಳು ಚರ್ಮಕ್ಕೆ ಮೊಶ್ಚಿರೈಸ್ ಮಾಡುವುದು ಮತ್ತು ಕಾಂತಿಯುತವಾಗಿ ಕಾಣುವಂತೆ ಮಾಡುವುದು.
ಚಾಕ್ಲೇಟ್ ನಲ್ಲಿ ಕಂಡುಬರುವ ಕೋಕೋ ಅಂಶ ಸಾಕಷ್ಟು ದೀರ್ಘಾವಧಿ ಕಾಯಿಲೆಗಳನ್ನು ದೂರ ಮಾಡುವ ಗುಣಲಕ್ಷಣ ಪಡೆದಿದೆ.

Leave A Reply

Your email address will not be published.