ಪ್ರವಾಸಿಗರಿಗಾಗಿಯೇ ತಯಾರಾಗಿದೆ ಚಲಿಸುವ ಮನೆ!

ಪ್ರವಾಸ ಹೋಗೋರ ಸಂಖ್ಯೆ ಹೆಚ್ಚೆ ಇದೆ. ಆದ್ರೆ, ಹೆಚ್ಚಿನವರು ಹೋದ ಜಾಗದಲ್ಲಿ ನೆಲೆಯಲು ಏನು ವ್ಯವಸ್ಥೆ ಇರುತ್ತೋ ಏನೋ ಎಂದು ಹಿಂದೇಟು ಹಾಕುತ್ತಾರೆ. ಆದ್ರೆ, ಇನ್ಮುಂದೆ ಈ ಚಿಂತೆ ಇಲ್ಲ. ಯಾಕಂದ್ರೆ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಹೊಸ ಯೋಜನೆಯೊಂದನ್ನು ರೂಪಿಸಿದೆ.

ಹೌದು. ಪ್ರವಾಸಿಗರಿಗಾಗಿ ಚಲಿಸುವ ಮನೆಯೊಂದನ್ನು ರೂಪಿಸಿದೆ. ನೂತನ ಕ್ಯಾರಾವ್ಯಾನ್ ವಾಹನ ಪರಿಚಯಿಸಿದ್ದು, ಈ ಕ್ಯಾರಾವಾನ್ ಅನ್ನು ಸಿಎಂ ಬೊಮ್ಮಾಯಿ ಲೋಕಾರ್ಪಣೆ ಮಾಡಿದ್ದಾರೆ. ಪ್ರವಾಸಿಗರಿಗೆ ಬೇಕಾಗುವಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿದ್ದು, ಮನೆಯಲ್ಲಿರುವ ವ್ಯವಸ್ಥೆ ಎಲ್ಲವೂ ಇದರಲ್ಲಿದೆ. ಹೀಗಾಗಿ ಆರಾಮದಾಯಕವಾಗಿ ಪ್ರವಾಸ ಮುಗಿಸಿಕೊಂಡು ಬರಬಹುದು.

ವ್ಯಾನ್‌ನಲ್ಲಿ ಅಡುಗೆ ಮನೆ, ಬೆಡ್ ರೂಮ್, ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ಈ ಕ್ಯಾರಾವ್ಯಾನ್ ಬಳಕೆ ಮಾಡುವ ಪ್ರವಾಸಿಗರು ಇದರಲ್ಲೇ ಯಾವುದೇ ಪ್ರವಾಸಿ ತಾಣಕ್ಕೆ ಭೇಟಿ ನೀಡಿ, ರಾತ್ರಿ ಸಮಯದಲ್ಲಿ ವ್ಯಾನ್‌ನಲ್ಲಿ ತಂಗುವ ವ್ಯವಸ್ಥೆ ಮಾಡಲಾಗಿದೆ. ಖಾಸಗಿ ಕಂಪನಿ, ಪ್ರವಾಸಿಗರಿಗೆ ಅಭಿರುಚಿಗೆ ತಕ್ಕಂತೆ ಈ ಕ್ಯಾರಾವ್ಯಾನ್ ಡಿಸೈನ್ ಮಾಡಲಾಗಿದೆ.

2 ಮಾದರಿಯ ಕ್ಯಾರವಾನ್ ಗಳನ್ನು ವಿನ್ಯಾಸಗೊಳಿಸಿದೆ. ಬಸ್ ಮಾದರಿಯ ಕ್ಯಾರವಾನ್ ನಲ್ಲಿ ಅಡುಗೆ ಮನೆ, 2 ಬೆಡ್, 1 ಟೇಬಲ್, 4 ಕುರ್ಚಿ, ಶೌಚಾಲಯದ ವ್ಯವಸ್ಥೆಯಿದೆ. ಒಂದು ಬಾರಿಗೆ 5 ಮಂದಿ ಇದರಲ್ಲಿ ಆರಾಮವಾಗಿ ಪ್ರಯಾಣಿಸಬಹುದು. ಕೋವಿಡ್‌ನಿಂದಾಗಿ ಪ್ರವಾಸಿಗರು ಹೋಟೆಲ್‌ಗಳನ್ನು ಬಳಸಲು ಹಿಂದೇಟು ಹಾಕುತ್ತಿದ್ದರು. ಈ ಕ್ಯಾರಾವ್ಯಾನ್ ವ್ಯವಸ್ಥೆಯಿಂದಾಗಿ ಪ್ರವಾಸಿಗರಿಗೆ ಅನುಕೂಲವಾಗಲಿದೆ ಎನ್ನಲಾಗಿದೆ. ಅಲ್ಲದೆ, ರಾಜ್ಯದಲ್ಲಿರುವ ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್ ಆವರಣದಲ್ಲಿ ಈ ವ್ಯಾನ್‌ಗಳಿಗಾಗಿಯೇ ಕ್ಯಾರಾವ್ಯಾನ್ ಪಾರ್ಕಿಂಗ್ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗಿದೆ.

Leave A Reply

Your email address will not be published.