ಹೊಸ ಹೆಸರಿನೊಂದಿಗೆ ಶೋಭಾ ಕರಂದ್ಲಾಜೆ 2023 ರ ಚುನಾವಣಾ ಅಖಾಡಕ್ಕೆ | ಏನಿದು ಹೊಸ ಸುದ್ದಿ…

ಶೋಭಾ ಕರಂದ್ಲಾಜೆ ( Shobha Karandlaje)
ಅವರು 2023ರ ಚುನಾವಣೆಗೆ ತಮ್ಮ ಹೆಸರು ಬದಲಾಯಿಸುವ ಮೂಲಕ ರಾಜ್ಯ ರಾಜಕೀಯದಲ್ಲಿ ಮಹತ್ವದ ಹುದ್ದೆ ಅಲಂಕರಿಸುತ್ತಾರೆ ಎಂಬ ಊಹಾಪೋಹ ಸುದ್ದಿಗಳು ಕೇಳಿ ಬರುತ್ತಿದೆ. ಇದು ನಿಜಕ್ಕೂ ಒಂದಷ್ಟು ರಾಜಕೀಯ ನಾಯಕರಿಗೆ ಶಾಕ್ ನೀಡಿರುವುದಂತೂ ನಿಜ.

‘ಶೋಭಾ ಕರಂದ್ಲಾಜೆ ತಮ್ಮ ಹೆಸರನ್ನು ಶೋಭಾ ಗೌಡ ‘ ಅಂತ ಹೆಸರು ಬದಲಾಯಿಸಿಕೊಂಡು ರಾಜ್ಯರಾಜಕೀಯದಲ್ಲಿ ಮಹತ್ವದ ಹುದ್ದೆ ಅಲಂಕರಿಸುತ್ತಾರಾ? ಅನ್ನೋದು ಈಗ ಭಾರೀ ಚರ್ಚೆಗೆ ಗುರಿಯಾಗುತ್ತಿದೆ.

ಇದು ಬರಿ ವದಂತಿನಾ? ಬಿಜೆಪಿ ರಾಜಕೀಯದಲ್ಲಿನ ರೆಕ್ಕೆಪುಕ್ಕನಾ ? ಜ್ಯೋತಿಷ್ಯಗಳ ಸಲಹೆಯೋ? ಸಂಖ್ಯಾಶಾಸ್ತ್ರವೂ, ದೆಹಲಿ ಮೂಲಕ ನಾಯಕರ ಸಲಹೆನೋ? ಸರ್ ನೇಮ್ ಕರಂದ್ಲಾಜೆ ಬದಲಿಗೆ ಗೌಡ ಅಂತಾ ಸೇರಿಸಲು ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಶೋಭಾ ಅಪ್ತವಲಯದಿಂದ ಮಾಹಿತಿಯೊಂದು ಹರಿದಾಡುತ್ತಿದೆ.

ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಅಲ್ಲವೇ ? ಒಕ್ಕಲಿಗ ಟ್ರಂಪ್ ಕಾರ್ಡ್ ಬಳಕೆ ಮಾಡಲು ಹೈಕಮಾಂಡ್ ಸೂಚಿಸಿದೆಯೇ, ಅಥವಾ ಮುಂದಾಗಿದೆಯೇ ? ಶೋಭಾ ಗೌಡ ಎಂದು ಬದಲಾವಣೆ ಮಾಡುವ ಮೂಲಕ ರಾಜಕೀಯದಲ್ಲಿ ಬಿಗ್ ಪ್ಲಾನ್ ಮಾಡಲಾಗುತಿದೆ. ಹೊಸ ಹೆಸರಿನೊಂದಿಗೆ ಮಿಂಚಲು ರೆಡಿಯಾಗಿದ್ದಾರಾ ? ಕಾದು ನೋಡಬೇಕಾಗಿದೆ.

Leave A Reply

Your email address will not be published.