TRP : ಕನ್ನಡ ನ್ಯೂಸ್ ಚಾನೆಲ್ ನ ಬಾರ್ಕ್ ರೇಟಿಂಗ್ ಬಿಡುಗಡೆ, ಈ ಬಾರಿಯ ಟಾಪ್ ಚಾನೆಲ್ ಯಾವುದು?

ರಾಜ್ಯದ ಕನ್ನಡ ಸುದ್ದಿವಾಹಿನಿಗಳ 38ನೇ ವಾರದ ಬಾರ್ಕ್ ರೇಟಿಂಗ್ ಬಿಡುಗಡೆಯಾಗಿದೆ. ಕರ್ನಾಟಕದಲ್ಲಿ ಸುದ್ದಿವಾಹಿನಿಗಳ ರೇಟಿಂಗ್ ಬಂದಿದ್ದು ಆಯಾ ಚಾನಲ್ ಗಳ ರೇಟಿಂಗ್‌ನಲ್ಲಿ ಏರಿಳಿತ ಆಗಿರುವುದು ಕಂಡುಬಂದಿದೆ. ಬಾರ್ಕ್ ನೀಡುವ ರೇಟಿಂಗ್ ಮೇಲೆ ಸುದ್ದಿವಾಹಿನಿಗಳ ಏರುಪೇರು ತಿಳಿಯಲಿದೆ.

ಟಿಆರ್‌ಪಿ (Television rating point) ಬಿಡುಗಡೆಯಾಗಿದ್ದು, ಈ ಬಾರಿನೂ ನಂಬರ್ ಒನ್ ಸ್ಥಾನದಲ್ಲಿ ಟಿವಿ 9 ಕನ್ನಡ, ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿ ಪಾಲಾಗಿದೆ. ಇನ್ನು ಮೂರನೇ ಸ್ಥಾನ ಏಷ್ಯಾನೆಟ್ ಸುವರ್ಣ ನ್ಯೂಸ್ ಪಡೆದುಕೊಂಡಿದೆ. 4ನೇ ಸ್ಥಾನ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದ್ದರೂ, ನ್ಯೂಸ್ ಫಸ್ಟ್ ಕನ್ನಡ ತೀವ್ರ ಪೈಪೋಟಿಯನ್ನು ನೀಡುತ್ತಿದೆ ಎಂದರೆ ತಪ್ಪಾಗಲಾರದು.

ಕಳೆದ ವಾರದ ಬಾರ್ಕ್ ರೇಟಿಂಗ್ ಗಮನಿಸಿದಾಗ ಎಲ್ಲಾ ಚಾನಲ್ ಟಿಆರ್‌ಪಿ ಅಲ್ಪ ಪ್ರಮಾಣದ ಏರಿಳಿತವಾಗಿರುವುದು ಕಂಡು ಬಂದಿದೆ. ಬಾರ್ಕ್ ನೀಡುವ ರೇಟಿಂಗ್ ಚಾನೆಲ್ ಗಳ ಪಾಲಿಗೆ ಬಹಳ ಪ್ರಮುಖವಾಗಿದೆ.

BARC ಸಂಸ್ಥೆಯು ಪ್ರತಿವಾರಕ್ಕೊಮ್ಮೆ ರೇಟಿಂಗ್ ಅನ್ನು ಬಿಡುಗಡೆ ಮಾಡಲಿದೆ. ಈ ರೇಟಿಂಗ್ ಆಧಾರವಾಗಿ ಚಾನಲ್ ಗಳು ತಮ್ಮ ಅಸ್ತಿತ್ವ ವನ್ನು ಬಿಂಬಿಸಿಕೊಳ್ಳುತ್ತಿವೆ. ಬಾರ್ಕ್ ಸದ್ಯ ರೇಟಿಂಗ್ ನೀಡುತ್ತಿದ್ದು ಕರ್ನಾಟಕದ ಜನಪ್ರಿಯ ನ್ಯೂಸ್ ಚಾನಲ್ ಯಾವುದು, ಆ ನ್ಯೂಸ್ ಚಾನಲ್‌ನ ರೇಟಿಂಗ್ ಎಷ್ಟು ಎಂಬುದು ತಿಳಿಯಲಿದೆ. ಸುದ್ದಿಯ ಆಧಾರದಲ್ಲಿ ಕೆಲವೊಂದು ಚಾನಲ್ ಗ್ರೂಥ್ ಏರುಮುಖವಾಗಿರುತ್ತದೆ.

Leave A Reply

Your email address will not be published.