Mobile offer : 5 G ಸ್ಮಾರ್ಟ್ ಫೋನ್ ಮೇಲೆ ಭರ್ಜರಿ ರಿಯಾಯಿತಿ | 12,000 ಕ್ಕೆ ದೊರಕಲಿದೆ ಈ ಫೋನ್

ಮೊಬೈಲ್ ಎಂಬ ಮಾಯಾವಿಯ ವೈಶಿಷ್ಟ್ಯ ಕ್ಕೆ ಮನಸೋಲದೆ ಇರುವವರೆ ಇಲ್ಲ .ಪ್ರತಿ ಕ್ಷಣವು ಸಂಗಾತಿಯಂತೆ ಬಿಟ್ಟಿರಲಾರದಷ್ಟು ಜನರು ಹಚ್ಚಿಕೊಂಡಿ ರುವುದರಿಂದ ದಿನದಿಂದ ದಿನಕ್ಕೆ ನವೀನ ಮಾದರಿಯಲ್ಲಿ ಮಾರುಕಟ್ಟೆ ತಲುಪಿ ಜನರ ಮನ ಸೆಳೆಯುವ ಪ್ರಯತ್ನವನ್ನೂ ಎಲ್ಲ ಮೊಬೈಲ್ ಕಂಪನಿಗಳು ನಡೆಸುತ್ತಿವೆ.

ಈ ನಡುವೆ ದೈತ್ಯ ಇಕಾಮರ್ಸ್ ಕಂಪನಿ ಅಮೆಜಾನ್ ಸ್ಮಾರ್ಟ್‌ಫೋನ್‌ಗಳ ಮೇಲೆ ಬಂಪರ್ ಡೀಲ್‌ಗಳನ್ನು ನೀಡುತ್ತಿದ್ದು, ಈ ಮೂಲಕ ಗ್ರಾಹಕರು ಆಕರ್ಷಕ ಆಫರ್ ಗಳನ್ನು ಪಡೆಯಬಹುದಾಗಿದೆ. ವಿನಿಮಯ ಕೊಡುಗೆಗಳು, ಬ್ಯಾಂಕ್ ಕೊಡುಗೆಗಳು, ಪ್ರಿಪೇಯ್ಡ್ ರಿಯಾಯಿತಿಯಂತಹ ಪ್ರಯೋಜನಗಳು ಲಭ್ಯವಿದೆ. ಇವುಗಳ ಜೊತೆಗೆ ಕೈಗೆಟಕುವ ಬೆಲೆಯಲ್ಲಿ ಉತ್ತಮ ಫೋನ್ ಕೂಡ ಖರೀದಿಸಬಹುದಾಗಿದೆ.

ರೆಡ್‌ಮಿ ಸ್ಮಾರ್ಟ್‌ಫೋನ್‌ನಲ್ಲಿ ಗಮನ ಸೆಳೆಯುವ ಕೊಡುಗೆ ಲಭ್ಯವಿದೆ. Redmi K50i ಸ್ಮಾರ್ಟ್‌ಫೋನ್‌ನಲ್ಲಿ ಭಾರಿ ರಿಯಾಯಿತಿ ಲಭ್ಯವಿದೆ. ಈ ಫೋನ್ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. 6 ಜಿಬಿ RAM, 128 ಜಿಬಿ ಮೆಮೊರಿ ಒಂದು ಮಾದರಿಯಲ್ಲಿ ಸಿಗಲಿದೆ. ಹಾಗೆಯೇ 8 GB RAM, 256 GB ಮೆಮೊರಿಯು ಮತ್ತೊಂದು ರೂಪಾಂತರವಾಗಿದೆ.

6 GB RAM ವೇರಿಯಂಟ್‌ನ ಆಫರ್ ಬಗ್ಗೆ ತಿಳಿಯುವುದಾದರೆ, ಈ ಫೋನಿನ ಮೂಲ ಬೆಲೆ 31,999 ರೂಪಾಯಿ ಆಗಿದ್ದು, ಮಾರಾಟದ ಭಾಗವಾಗಿ, ಈ ಫೋನ್ 24,999 ರೂಪಾಯಿಗೆ ಖರೀದಿಸಬಹುದು. ಗ್ರಾಹಕರಿಗೆ ಈ ಮೂಲಕ 7 ಸಾವಿರ ರಿಯಾಯಿತಿ ಬೆಲೆಯಲ್ಲಿ ಮೊಬೈಲ್ ಲಭ್ಯವಾಗುತ್ತದೆ.

ಇದಲ್ಲದೆ, ಬ್ಯಾಂಕ್ ಗ್ರಾಹಕರಿಗೂ ಕೂಡ ಹೆಚ್ಚುವರಿ 3 ಸಾವಿರ ರೂಪಾಯಿ ರಿಯಾಯಿತಿ ಲಭ್ಯವಾಗಲಿದೆ. ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮೂಲಕ ಈ ಫೋನ್ ಖರೀದಿಸಿದರೆ, ಕೊಂಚ ಮಟ್ಟಿಗೆ ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಈಗ ಫೋನ್ ಮೇಲೆ 10 ಸಾವಿರ ರೂಪಾಯಿ ಡಿಸ್ಕೌಂಟ್ ಲಭ್ಯವಿದ್ದು, ಇದಲ್ಲದೆ, ಕೂಪನ್ ರಿಯಾಯಿತಿ ಸಹ ಲಭ್ಯವಿದೆ. 1000 ರಿಯಾಯಿತಿ ಪಡೆಯಬಹುದು.

ಅಂದರೆ ಈಗ ಫೋನ್ ಮೇಲಿನ ರಿಯಾಯಿತಿ 11 ಸಾವಿರ ರೂಪಾಯಿ ತಲುಪಿದ್ದು, ಎಕ್ಸ್ ಚೇಂಜ್ ಆಫರ್ ಕೂಡ ಇದೆ. 23 ಸಾವಿರದವರೆಗೆ ರಿಯಾಯಿತಿ ಪಡೆಯಬಹುದು. ಗ್ರಾಹಕರ ಸ್ಮಾರ್ಟ್‌ಫೋನ್ ಮಾದರಿಯನ್ನು ಆಧರಿಸಿ ವಿನಿಮಯ ಕೊಡುಗೆಯು ಬದಲಾಗುತ್ತದೆ. ಇದು ಫೋನ್‌ನ ಸ್ಥಿತಿಯನ್ನು ಸಹ ಅವಲಂಬಿಸಿರುತ್ತದೆ. ಆದ್ದರಿಂದ ಎಲ್ಲಾ ಫೋನ್‌ಗಳು ಒಂದೇ ರೀತಿಯ ವಿನಿಮಯ ಮೌಲ್ಯವನ್ನು ಪಡೆಯುವುದಿಲ್ಲ.

ಕೆಲವು ಕಡಿಮೆ ಮೌಲ್ಯದ್ದಾಗಿರಬಹುದು.ಹಾಗೆಯೇ 8 ಜಿಬಿ RAM ಫೋನ್ ಖರೀದಿಸಿದರೆ ರೂ.12 ಸಾವಿರದವರೆಗೆ ರಿಯಾಯಿತಿ ಸಿಗಲಿದೆ. ಇದರ ಬೆಲೆ 35,999 ರೂಪಾಯಿ ಆದರೆ 27,999 ರೂಪಾಯಿ ಲಭ್ಯವಿದೆ. ಈ ಬೆಲೆಯು ಬ್ಯಾಂಕ್ ಮತ್ತು ಕೂಪನ್ ರಿಯಾಯಿತಿಯನ್ನು ಒಳಗೊಂಡಿರುತ್ತದೆ.

ಈ ಫೋನಿನ ಎಕ್ಸ್ ಚೇಂಜ್ ಆಫರ್ ರೂ.26 ಸಾವಿರ. ಆದರೆ ಈ ಫೋನ್ ಅದೇ ವೈಶಿಷ್ಟ್ಯಗಳನ್ನು ಹೊಂದಿದೆ. 5G, 144 Hz ಲಿಕ್ವಿಡ್ FFS ಡಿಸ್​ಪ್ಲೇ, ಅಲೆಕ್ಸಾ ಬಿಲ್ಟ್ ಇನ್, ಮೀಡಿಯಾ ಟೆಕ್ ಡಿಮೆನ್ಶಿಯಾ 8100 ಪ್ರೊಸೆಸರ್, 64 MP ಟ್ರಿಪಲ್ ರಿಯರ್ ಕ್ಯಾಮೆರಾ, ಆಂಡ್ರಾಯ್ಡ್ 12 ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ನೀವು ಕೂಡ ಹಳೆ ಮೊಬೈಲ್ ಬದಲಾಯಿಸಿ ಹೊಸ ಮೊಬೈಲ್ ತೆಗೆದುಕೊಳ್ಳುವ ಯೋಜನೆಯಲ್ಲಿ ಇದ್ದರೆ ಅಮೆಜಾನ್ ವೆಬ್ ಸೈಟ್ಗೆ ಲಾಗಿನ್ ಆಗಿ ನಿಮಗಿಷ್ಟವಾದ ಮೊಬೈಲ್ ಖರೀದಿಸಿ , ಆಫರ್ ಗಳನ್ನು ನಿಮ್ಮದಾಗಿಸಿಕೊಳ್ಳಿ.

Leave A Reply

Your email address will not be published.