Good News : ಇನ್ಮುಂದೆ ಟ್ರಾಫಿಕ್ ಕಿರಿಕಿರಿ ಇಲ್ಲ ಹೆಲಿಕಾಪ್ಟರ್ ನಲ್ಲೇ ಹಾರುವ ಅವಕಾಶ ಜನತೆಗೆ!!!

ಸಿಲಿಕಾನ್‌ ಸಿಟಿಯಲ್ಲಿ ಮೆಟ್ರೋ ಶುರುವಾದ್ರೂ, ಇನ್ನೂ ಟ್ರಾಫಿಕ್‌ ಕಿರಿಕಿರಿ ತಪ್ಪಿಲ್ಲ. ಒಂದೆಡೆಯಿಂದ ಇನ್ನೊಂದೆಡೆ ಸಂಚಾರ ಮಾಡೋದಕ್ಕೆ ಹರಸಾಹಸ ಪಡೆಬೇಕಾದ ಪರಿಸ್ಥಿತಿ ನಿರ್ಮಾಣ ಆಗುವುದು ಸಹಜ. ಇವುಗಳಿಗೆ ಬ್ರೇಕ್‌ ಹಾಕೋದಕ್ಕೆ ಇದೀಗ  ಹೊಸ ಪ್ಲ್ಯಾನ್‌ ಮಾಡಲಾಗಿದೆ. ಹಾರುವ ಮೂಲಕ ಸಂಚಾರ ಮಾಡಬಹುದು ಅರೇ ಏನಿದು ಅಂತಾ ಯೋಚಿಸಿದ್ದೀರಾ? ಇಲ್ಲಿದೆ ಓದಿ

ಟ್ರಾಫಿಕ್ ಕಿರಿಕಿರಿ ದೂರ ಉಳಿಯಬಹುದು  ಬಸ್ ಮೆಟ್ರೋ ದಲ್ಲಿ ಓಡಾಡುತ್ತಿದ ಜನರಿಗೆ ಇನ್ಮುಂದೆ  ಹೆಲಿಕಾಪ್ಟರ್ ಪ್ರಯಾಣಿಸುವ  ಅವಕಾಶ ಸಿಗಲಿವೆ.
ಈ ಅವಕಾಶವನ್ನು ಬ್ಲೇಡ್ ಸಂಸ್ಥೆ ನೀಡುತ್ತಿವೆ

ಹೆಲಿಕಾಪ್ಟರ್ ಸೇವೆಯು ವಾರದಲ್ಲಿ  5ದಿನ ಈ ಸೇವೆ ಲಭ್ಯವಿದ್ದು, ಬೆಳಿಗ್ಗೆ 9 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ಎಚ್‌ಎ ಎಲ್ ಮತ್ತು ಸಂಜೆ 4.15 ಕ್ಕೆ ಅದೇ ಮಾರ್ಗದಲ್ಲಿ ವಿಮಾನ ಹಿಂತಿರುಗಲಿದೆ.

ಪ್ರತಿ ಪ್ರಯಾಣಿಕರಿಗೆ 3250ರೂ ಟಿಕೆಟ್ ದರ ಆನ್ ಲೈನ್ ಮೂಲಕ ಬುಕ್ ಮಾಡಬಹುದಾಗಿದೆ. ಅಕ್ಟೊಬರ್ 10ರಿಂದ ಬೆಂಗಳೂರು ವಿಮಾನ ನಿಲ್ದಾಣ ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಡುವೆ ನಗರದಲ್ಲಿ ಹೆಲಿಕಾಪ್ಟರ್ ಸೇವೆಗಳನ್ನು ಪ್ರಾರಂಭಿಸಲು ಸಜ್ಜಾಗಿದೆ.ಶೀಘ್ರದಲ್ಲೇ ಬೆಂಗಳೂರಿನಲ್ಲಿ ತನ್ನ ಅಂತರ್-ನಗರ ಸೇವೆಗಳನ್ನು ಪ್ರಾರಂಭಿಸಲಿದೆ.

Leave A Reply

Your email address will not be published.