ಅಬ್ಬಬ್ಬಾ…ಶಾಕಿಂಗ್ ನ್ಯೂಸ್ | ಈತನ ಹೊಟ್ಟೆಯಲ್ಲಿತ್ತು ಬರೋಬ್ಬರಿ 63 ಚಮಚ !!! ಅಷ್ಟಕ್ಕೂ ಈತ ಇದನ್ನು ನುಂಗಿದ್ದು ಹೇಗೆ ಗೊತ್ತಾ?

ಚಿಕ್ಕ ಮಕ್ಕಳು ಚಾಕಲೇಟ್ ಅನ್ನು ಮನೆಯವರ ಕಣ್ಣು ತಪ್ಪಿಸಿ ಬೇಕಾಬಿಟ್ಟಿ ತಿನ್ನುವುದುಂಟು ಹಾಗೆಯೇ ದೊಡ್ಡವರು ಕೂಡ ವಯಸ್ಸಿನ ಮಿತಿ ಇಲ್ಲದೆ ಸಿಹಿ ಪದಾರ್ಥಗಳನ್ನು ಸಕ್ಕರೆ ಖಾಯಿಲೆ ಇದ್ದರೂ ಪರಿಗಣಿಸದೆ ಸೇವಿಸುವುದು ಸಾಮಾನ್ಯ. ಹೀಗೆಯೇ, ಚಮಚಗಳನ್ನು ತಿನ್ನುವವರನ್ನು ಎಲ್ಲಾದರೂ ಕಂಡಿದ್ದೀರಾ??


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಒಬ್ಬೊಬ್ಬರಿಗೆ ಒಂದೊಂದು ರೀತಿಯ ಹವ್ಯಾಸಗಳು ರೂಢಿಯಾಗಿ, ಕೆಲವರಿಗೆ ಕಾಫಿ ಕುಡಿಯುವ ,ಇನ್ನೂ ಕೆಲವರಿಗೆ ಮಧ್ಯಪಾನ, ಸಿಗರೇಟ್ ಸೇವನೆ, ಅತಿಯಾಗಿ ಸಿಹಿ ತಿನ್ನುವ ಹೀಗೆ ನಾನಾ ರೀತಿಯ ಅಭ್ಯಾಸಗಳಿರುತ್ತವೆ .ಆದರೆ, ಚಮಚ ತಿನ್ನುವ ಅಭ್ಯಾಸ ಇರುವವರನ್ನು ನೋಡಿರಲಿಕ್ಕಿಲ್ಲ.


Ad Widget

ಉತ್ತರ ಪ್ರದೇಶದ ಮುಜಾಫರ್‌ನಗರದ ವಿಚಿತ್ರ ಪ್ರಕರಣ ಪತ್ತೆಯಾಗಿದ್ದು, ವೈದ್ಯರು ರೋಗಿಯೊಬ್ಬನ ಹೊಟ್ಟೆಯಲ್ಲಿದ್ದ 63 ಸ್ಟೀಲ್ ಸ್ಪೂನ್‌ಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದಿದ್ದು, ಅಲ್ಲಿನ ಜಿಲ್ಲಾ ಖಾಸಗಿ ಆಸ್ಪತ್ರೆಯಲ್ಲಿ ಈ ಆಪರೇಷನ್ ನಡೆದಿದೆ.

Ad Widget

Ad Widget

Ad Widget

ರೋಗಿ ವಿಜಯ್ ಮಾದಕ ವ್ಯಸನಿಯಾಗಿದ್ದು, ಡಿ-ಅಡಿಕ್ಷನ್ ಸೆಂಟರ್‌ಗೆ ದಾಖಲಾಗಿದ್ದಾರೆ. ವಿಜಯ್ ಒಂದು ವರ್ಷದಿಂದ ಚಮಚ ತಿನ್ನುವ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ ಎಂಬುದು ತಿಳಿದಿದೆ. ಸತತ 2 ಗಂಟೆಗಳ ಕಾಲ ನಡೆದ ಆಪರೇಷನ್ ನಲ್ಲಿ 63 ಚಮಚಗಳನ್ನು ವೈದ್ಯರು ಹೊರತೆಗೆದಿದ್ದು, ಪ್ರಸ್ತುತ ರೋಗಿಯು ಐಸಿಯುನಲ್ಲಿದ್ದಾರೆ.

ವೈದ್ಯರು ಅಚ್ಚರಿಯಾಗಿ, ಚಮಚಗಳನ್ನು ರೋಗಿಯೆ ತಿಂದಿದ್ದಾರಾ ಎಂಬ ಅನುಮಾನ ವ್ಯಕ್ತಪಡಿಸಿದಾಗ , ರೋಗಿ ವಿಜಯ್ ,ತಾನೇ ಸೇವಿಸುವುದಾಗಿ ಹೇಳಿಕೊಂಡಿದ್ದಾನೆ. ಆದರೆ ಮನೆಯವರು ಬಲವಂತವಾಗಿ ಯಾರೋ ಚಮಚಗಳನ್ನು ತಿನ್ನಿಸಿರುವುದಾಗಿ ಆರೋಪಿಸಿದ್ದಾರೆ.

ವಿಜಯ್ ಅವರನ್ನು ಆರೋಗ್ಯ ಹದಗೆಟ್ಟ ನಂತರ ಆಸ್ಪತ್ರೆಗೆ ಕರೆತರಲಾಗಿದ್ದು, ಆತನಿಗೆ ಶಸ್ತ್ರಚಿಕಿತ್ಸೆ ನಡೆಸಿದಾಗ ಹೊಟ್ಟೆಯಲ್ಲಿ 63 ಸ್ಟೀಲ್ ಸ್ಪೂನ್‌ಗಳು ಪತ್ತೆಯಾಗಿದ್ದು, ವೈದ್ಯರು ಎಲ್ಲಾ ಚಮಚಗಳನ್ನು ತೆಗೆದಿದ್ದಾರೆ. ಸದ್ಯ ವಿಜಯ್ ಅರೋಗ್ಯ ಸ್ಥಿತಿ ಹದಗೆಟ್ಟು ಗಂಭೀರವಾಗಿದೆ. ಹಾಗಾಗಿ ಐಸಿಯುನಲ್ಲಿದ್ದು ವೈದ್ಯರು ಹೆಚ್ಚಿನ ನಿಗಾ ವಹಿಸುತ್ತಿದ್ದಾರೆ.

error: Content is protected !!
Scroll to Top
%d bloggers like this: