PUC ವಿದ್ಯಾರ್ಥಿಗಳಿಗೆ ಮಧ್ಯಂತರ ರಜೆ ಯಾವಾಗ? ಸಿಗುವ ಒಟ್ಟು ರಜೆಗಳೆಷ್ಟು?

ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿ ಅರ್ಧವಾರ್ಷಿಕ ಪರೀಕ್ಷೆಗಳು ನಡೆಯುತ್ತಿವೆ. ಸೆಪ್ಟೆಂಬರ್ 19, 2022 ರಿಂದ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಮಧ್ಯವಾರ್ಷಿಕ ಪರೀಕ್ಷೆಗಳು ಆರಂಭವಾಗಿದೆ. ಈ ಪರೀಕ್ಷೆ ಸೆಪ್ಟೆಂಬರ್ 30, 2022 ರಂದು ಮುಕ್ತಾಯವಾಗಲಿವೆ.

ಜೂನ್ 9 ರಿಂದ 2022-23 ನೇ ಸಾಲಿನ, ಪ್ರಥಮ ಹಾಗು ದ್ವಿತೀಯ ಪಿಯುಸಿ ತರಗತಿಗಳು ವೇಳಾಪಟ್ಟಿಯಂತೆ ತರಗತಿಗಳು ಆರಂಭವಾಗಿದ್ದವು. 2022-23ನೇ ಶೈಕ್ಷಣಿಕ ಮೊದಲ ಅವಧಿ ಜೂನ್ 9 ರಿಂದ ಸೆಪ್ಟೆಂಬರ್ 30 ರ ವರೆಗೆ ನಡೆಯಲಿದೆ. ಎರಡನೇ ಅವಧಿ ಪದವಿ ಪೂರ್ವ ಶಿಕ್ಷಣ ಇಲಾಖೆ ಮಾರ್ಗಸೂಚಿಗಳನ್ವಯ ಅಕ್ಟೋಬರ್ 13 ರಿಂದ ಮಾರ್ಚ್ 23, 2023 ರವರೆಗೆ ನಿಗದಿಪಡಿಸಲಾಗಿದೆ.

ಸೆಪ್ಟೆಂಬರ್ 30, 2022 ಕ್ಕೆ ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳ ಮಧ್ಯವಾರ್ಷಿಕ ಪರೀಕ್ಷೆ ಮುಕ್ತಾಯವಾಗಲಿದ್ದು, ಪದವಿ ಪೂರ್ವ ಶಿಕ್ಷಣ ಇಲಾಖೆ ಮಾರ್ಗಸೂಚಿಗಳ ಅನ್ವಯ ಅಕ್ಟೋಬರ್ 1, 2022 ರಿಂದ ಅಕ್ಟೋಬರ್ 13, 2022 ಮಧ್ಯಂತರ ರಜೆ ನಿಗದಿಪಡಿಸಲಾಗಿತ್ತು.

ಆದರೆ ಇತ್ತೀಚೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಅಕ್ಟೋಬರ್ 1, 2022 ರಿಂದ ಅಕ್ಟೋಬರ್ 13, 2022 ಮಧ್ಯಂತರ ರಜೆ ನಿಗದಿಯಾಗಿದ್ದ ಮಧ್ಯಂತರ ರಜೆಯನ್ನು ಒಂದು ದಿನ ಹೆಚ್ಚುವರಿಯಾಗಿ ರಜೆಯನ್ನು ವಿಸ್ತರಿಸಲಾಗಿದೆ. ಹೀಗಾಗಿ ಎಲ್ಲಾ ಪದವಿ ಪೂರ್ವ ಕಾಲೇಜುಗಳನ್ನು ದಿನಾಂಕ 14 10-2022 ರಿಂದ ಪುನರಾರಂಭಿಸೋದಕ್ಕೆ ಸೂಚಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಈ ಬಾರಿ ಒಟ್ಟು 13 ದಿನ ಮಧ್ಯಂತರ ರಜೆ ದೊರಕಲಿವೆ.

ಮಧ್ಯಂತರ ರಜೆ ಮುಗಿದ ಮೇಲೆ, ಎರಡನೇ ಅವಧಿ ಅಕ್ಟೋಬರ್ 14 ರಿಂದ ಮಾರ್ಚ್ 23, 2023 ರವರೆಗೆ ನಿಗದಿಪಡಿಸಲಾಗಿದೆ. 12-01-2023 ರಿಂದ 21-01 2023 ರವರೆಗೆ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿವೆ. 23 01-2023 ರಿಂದ 04-02-2023 ರವರೆಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪೂರ್ವಸಿದ್ಧತಾ ಪರೀಕ್ಷೆಗಳು , 06-02-2023 ರಿಂದ 18-02-2023 ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿವೆ.

ಅದರಂತೆ 20-02-2023 ರಿಂದ 04-03-2023 ರವೆರೆಗೆ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ. 31-03-2023 ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಣೆಯಾಗಲಿದ್ದು, ಇದು ಕೊನೆಯ ಕಾರ್ಯನಿರತ ದಿನ ವಾಗಿರಲಿದೆ. ಏಪ್ರಿಲ್ 1, 2023 ರಿಂದ ಬೇಸಿಗೆ ರಜೆ ಆರಂಭವಾಗಲಿದೆ.

ಇನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ 20-03 2023 ರಿಂದ 15-04-2023 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿವೆ. ಈ ಎಲ್ಲಾ ದಿನಾಂಕಗಳು ಪದವಿ ಪೂರ್ವ ಶಿಕ್ಷಣ ಇಲಾಖೆ ಹೊರಡಿಸಿರುವ 2022-23ನೇ ಸಾಲಿನ ದಾಖಲಾತಿ ಮಾರ್ಗಸೂಚಿ ಅನ್ವಯ ಇವೆ.

Leave A Reply

Your email address will not be published.