SBI ಗ್ರಾಹಕರಿಗೆ ಗುಡ್ ನ್ಯೂಸ್ | YONO ಅಪ್ಲಿಕೇಶನ್ ಮೂಲಕ ಬುಕ್ ಮಾಡಿ ರೈಲ್ವೆ ಟಿಕೆಟ್!
ಎಸ್ ಬಿ ಐ ಗ್ರಾಹಕರಿಗೆ ಹೊಸ ಹೊಸ ಸೌಲಭ್ಯ ನೀಡುವ ಮೂಲಕ ಗ್ರಾಹಕರರನ್ನು ತನ್ನತ್ತ ಸೆಳೆಯುತ್ತಲೇ ಬಂದಿದ್ದು, ಇದೀಗ ಮತ್ತೊಂದು ಗುಡ್ ನ್ಯೂಸ್ ನೀಡುವ ಮೂಲಕ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ.
ಹೌದು, ಎಸ್ ಬಿ ಐ, ಯೋನೋ ಅಪ್ಲಿಕೇಶನ್ ಮೂಲಕ ರೈಲು ಟಿಕೆಟ್ ಬುಕ್ ಮಾಡಲು ಅವಕಾಶ ನೀಡಿದೆ. ಎಸ್ ಬಿಐ ಅಧಿಸೂಚನೆಯ ಪ್ರಕಾರ, ಎಸ್ಬಿಐ ಯೋನೊ ಅಪ್ಲಿಕೇಶನ್ ಮೂಲಕ ಐಆರ್ಸಿಟಿಸಿ ಸೈಟ್ನಲ್ಲಿ ರೈಲು ಟಿಕೆಟ್ಗಳನ್ನು ಕಾಯ್ದಿರಿಸಲು ಅವಕಾಶ ಕಲ್ಪಿಸಿದೆ. ಯೋನೊ ಅಪ್ಲಿಕೇಶನ್ ಮೂಲಕ ರೈಲ್ವೆ ಟಿಕೆಟ್ಗಳನ್ನು ಅಗ್ಗವಾಗಿ ಪಡೆಯಬಹುದು ಎಂದು ಎಸ್ಬಿಐ ಹೇಳಿದೆ.
ಅಲ್ಲದೆ, ಗ್ರಾಹಕರಿಗೆ ಯಾವುದೇ ಗೇಟ್ ವೇ ಶುಲ್ಕಗಳು ಅನ್ವದಿಸುವುದಿಲ್ಲ ಎಂದು ಹೇಳಿದೆ. ಯೋನೊ ಆಪ್ ಮೂಲಕ ಟಿಕೆಟ್ ಖರೀದಿಸುವವರಿಗೆ ಗೇಟ್ವೇ ಶುಲ್ಕದಿಂದ ಸಂಪೂರ್ಣವಾಗಿ ವಿನಾಯಿತಿ ನೀಡಲಾಗುವುದು ಎಂದು ಎಸ್ ಬಿ ಐ ತಿಳಿಸಿದೆ. ಐಆರ್ಸಿಟಿಸಿ ವೆಬ್ಸೈಟ್ನಲ್ಲಿ ರೈಲು ಟಿಕೆಟ್ಗಳನ್ನು ಕಾಯ್ದಿರಿಸುವಾಗ, ಎಲ್ಲಾ ಗೇಟ್ವೇ ಕಂಪನಿಗಳು 30 ರೂ.ಗಳವರೆಗೆ ಶುಲ್ಕ ವಿಧಿಸುತ್ತಿವೆ. ಆದರೆ, ಎಸ್ಬಿಐ ಯೋನೊ ಅಪ್ಲಿಕೇಶನ್ ಮೂಲಕ ಯಾವುದೇ ಶುಲ್ಕ ನೀಡಬೇಕಿಲ್ಲ.
2017ರಲ್ಲಿ ಪ್ರಾರಂಭಗೊಂಡಿದ್ದ ಯೋನೊ 2.0 ಅನ್ನು ಪರಿಚಯಿಸಿತು. ಯೋನೋ ತನ್ನ ಗ್ರಾಹಕರಿಗೆ ಸಾಲದ ಅರ್ಜಿಗಳು, ನಗದು ವಹಿವಾಟುಗಳು, ಚೆಕ್ ಬುಕ್ ಮತ್ತು ಕಾರ್ಡ್ ಸಂಬಂಧಿತ ಸೇವೆಗಳನ್ನು ನೀಡುತ್ತಿದೆ. ಎಲ್ಲಾ ರೀತಿಯ ಬ್ಯಾಂಕಿಂಗ್ ಮತ್ತು ಇತರ ವಹಿವಾಟುಗಳನ್ನು ಒಂದೇ ಅಪ್ಲಿಕೇಶನ್ನಲ್ಲಿ ನೀಡುತ್ತಿದೆ.