ಅಂತರ್ ಧರ್ಮೀಯ ಪ್ರೇಮ ವಿವಾಹ | ಹಿಂದೂ ಹೆಂಡತಿ ಬುರ್ಖಾ ಧರಿಸಿಲ್ಲವೆಂದು ಗಂಡ ಮಾಡಿದ್ದು ಘೋರ ಕೃತ್ಯ!!!

0 9

ಹಿಂದೂ ಯುವತಿಯನ್ನು ಪ್ರೀತಿಸಿ ಮದುವೆಯಾಗಿ ,3 ವರ್ಷ ಜೀವನ ನಡೆಸಿ , ಮುಸ್ಲಿಂ ಕಟ್ಟುಪಾಡುಗಳನ್ನು ಪಾಲಿಸಿಲ್ಲವೆಂದು ಹೆಂಡತಿಯನ್ನೇ ಭೂಪನೊಬ್ಬ ನಿರ್ದಾಕ್ಷಿಣ್ಯವಾಗಿ ಕೊಲೆಗೈದಿರುವ ಘಟನೆ ಮುಂಬೈನ ಚೆಂಬೂರ್ ಪ್ರದೇಶದಲ್ಲಿ ನಡೆದಿದೆ.

ಇಕ್ಬಾಲ್ ಮೊಹಮದ್‌ ಶೇಖ್ ಎಂಬ ವ್ಯಕ್ತಿ ರೂಪಾಲಿ ಎನ್ನುವ ಹಿಂದೂ ಯುವತಿಯನ್ನು ಕಳೆದ ಮೂರು ವರ್ಷದ ಹಿಂದೆ ಮದುವೆಯಾಗಿದ್ದು, ದಾಂಪತ್ಯ ಜೀವನದ ಪ್ರೀತಿಯ ಕಾಣಿಕೆಯಾಗಿ ಎರಡು ವರ್ಷದ ಮಗು ಕೂಡ ಇದ್ದು, ರೂಪಾಲಿ ತಮ್ಮ ಮುಸ್ಲಿಂ ಸಂಪ್ರದಾಯದ ಪ್ರಕಾರ ಬುರ್ಖಾ ಧರಿಸಲು ನಿರಾಕರಿಸಿದ್ದಕ್ಕಾಗಿ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಪ್ರೀತಿಸಿ ಅಂತರ್‌ ಜಾತಿ ವಿವಾಹವಾದ ಜೋಡಿಯು, ಪ್ರೀತಿಯ ಸಿಹಿ ಕೆಲ ದಿನಗಳ ಬಳಿಕ ರೂಪಾಲಿಗೆ ಕಹಿಯಾಗಿ ಪರಿಣಮಿಸಿ, ಇಕ್ಬಾಲ್‌ನ ಬಲವಂತದಿಂದ ಬೇಸತ್ತು ಕೆಲ ತಿಂಗಳಿನಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ. ಆದರೆ, ದುರದೃಷ್ಟವಶಾತ್ ವಿಚ್ಛೇದನಕ್ಕೂ ಮುನ್ನವೇ ಆರೋಪಿ ಆಕೆಯನ್ನು ಹತ್ಯೆ ಮಾಡಿ ಸಾವಿನ ಮನೆಗೆ ನೂಕಿದ ಆರೋಪಿ ಇಕ್ಬಾಲ್ ಪೊಲೀಸರ ಅತಿಥಿಯಾದ ಘಟನೆ ನಡೆದಿದೆ.

ಹಲವು ವರ್ಷಗಳ ಕಾಲ ಪ್ರೀತಿಸಿ ಮೂರು ವರ್ಷಗಳ ಹಿಂದೆ ರೂಪಾಲಿ ಹಾಗೂ ಇಕ್ಬಾಲ್‌ ಶೇಖ್‌ ವಿವಾಹವಾಗಿದ್ದರು. ಅದಾದ ಬಳಿಕ, ರೂಪಾಲಿ ಚೆಂಬೂರ್‌ ಪ್ರದೇಶದಲ್ಲಿದ್ದ ಇಕ್ಬಾಲ್‌ನ ಮನೆಯಲ್ಲಿಯೇ ವಾಸ ಮಾಡುತ್ತಿದ್ದಳು. ರೂಪಾಲಿ ಹಿಂದು ಆಗಿದ್ದರಿಂದ ಮದುವೆಯ ನಂತರ ಮುಸ್ಲಿಂ ಸಂಪ್ರದಾಯವನ್ನು ಅನುಕರಣೆ ಮಾಡದೆ ಇದ್ದುದ್ದರಿಂದ, ಇಕ್ಬಾಲ್‌ ಹಾಗೂ ಅವರ ಕುಟುಂಬ ರೂಪಾಲಿಗೆ ಪ್ರತಿ ದಿನವೂ ಚಿತ್ರಹಿಂಸೆ ನೀಡುತ್ತಿದ್ದರಲ್ಲದೆ, ರೂಪಾಲಿಗೆ ಬುರ್ಖಾ ಧರಿಸುವಂತೆ ಇಕ್ಬಾಲ್‌ ಹಾಗೂ ಆತನ ಕುಟುಂಬ ಪ್ರತಿನಿತ್ಯ ಒತ್ತಾಯ ಹೇರಿದರೂ ಕೂಡ ಆಕೆ ಧರಿಸದೆ ಇದ್ದುದ್ದರಿಂದ ಜಗಳವಾಗಿ ಪ್ರತ್ಯೇಕ ಮನೆಯಲ್ಲಿ ರೂಪಾಲಿ ಜೀವಿಸುತ್ತಿದ್ದಳು.

ಪ್ರತ್ಯೇಕವಾಗಿ ಇದ್ದರೂ ಕೂಡ ಫೋನಿನಲ್ಲಿ ಮಾತುಕತೆ ನಡೆಯುತ್ತಿದ್ದುದರಿಂದ, ರೂಪಾಲಿಯ ಜೊತೆ ಮಾತನಾಡಬೇಕೆಂದು ನೆಪ ಹೇಳಿ ಚೆಂಬೂರ್ ಪ್ರದೇಶದ ಪಿಎಲ್ ಲೋಖಂಡೆ ಮಾರ್ಗದಲ್ಲಿರುವ ನಾಗೇವಾಡಿಗೆ ರೂಪಾಲಿಯನ್ನು ಇಕ್ಬಾಲ್‌ ಕರೆದುಕೊಂಡಿದ್ದಾನೆ. ಆ ವೇಳೆ ಬುರ್ಖಾ ಮತ್ತಿತರ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಮತ್ತೆ ವಾಗ್ವಾದ ನಡೆದು ರೂಪಾಲಿ ವಿಚ್ಛೇದನದ ಬೇಡಿಕೆಯನ್ನು ಪುನರುಚ್ಚರಿಸಿದ್ದಾಳೆ . ಹೀಗಾಗಿ ಕೋಪಗೊಂಡ ಇಕ್ಬಾಲ್ ತನ್ನ ಜೇಬಿನಿಂದ ಚಾಕು ತೆಗೆದು ರೂಪಾಲಿ ಕುತ್ತಿಗೆಗೆ ಇರಿದು ಪರಾರಿಯಾಗಿದ್ದು, ರೂಪಾಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಅಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದು, ಮುಂಬೈ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Leave A Reply