ಭೂಗತ ಲೋಕದ ಡಾನ್ ಚಕ್ರವರ್ತಿ ಕ್ರಿಸ್ಟೋಫರ್ ಸ್ಥಿತಿ ಗಂಭೀರ

0 9

ಬೆಂಗಳೂರಿನ ಭೂಗತ ಲೋಕದ ಡಾನ್ ಎಂಬುದಾಗಿಯೇ ಕರೆಸಿಕೊಂಡಿದ್ದ ಬಿಬಿಎಂಪಿಯ ಮಾಜಿ ಸದಸ್ಯ ಚಕ್ರವರ್ತಿ ಕ್ರಿಸ್ಟೋಫರ್ ಗೆ ಬ್ರೈನ್ ಸ್ಟ್ರೋಕ್ ಆಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಸ್ಥಿತಿ ಗಂಭೀರ ಎಂಬುದಾಗಿ ತಿಳಿದು ಬಂದಿದೆ.

ಒಂದು ಕಾಲದಲ್ಲಿ ಬೆಂಗಳೂರಿನ ಭೂಗತ ಪಾತಕ ಲೋಕದಲ್ಲಿ ಬಹುದೊಡ್ಡ ಹೆಸರು ಮಾಡಿದ್ದ ಚಕ್ರವರ್ತಿ ಕ್ರಿಸ್ಟೋಫರ್ ಆಲಿಯಾಸ್ ಚಕ್ರೆ ಈ ಬಳಿಕ ಭೂಗತಲೋಕದಿಂದ ಹೊರಬಂದು, ರಾಜಕಾರಣಕ್ಕೆ ಧುಮುಕಿದ್ದರು. ಬಿಬಿಎಂಪಿಯ ಸದಸ್ಯರಾಗಿಯೂ ಆಯ್ಕೆಯಾಗಿದ್ದರು.

ಇದೀಗ ಚಕ್ರೆಗೆ ಬ್ರೈನ್ ಸ್ಟ್ರೋಕ್ ಆಗಿರುವುದಾಗಿ ತಿಳಿದು ಬಂದಿದೆ. ಅವರನ್ನು ಯಶವಂತಪುರದ ಬಳಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಐಸಿಯುನಲ್ಲಿ ಚಕ್ರವರ್ತಿ ಕ್ರಿಸ್ಟೋಫರ್ ಅಲಿಯಾಸ್ ಚಕ್ರೆಗೆ ಚಿಕಿತ್ಸೆ ಮುಂದುವರೆಸಿರುವ ವೈದ್ಯರು, ಸದ್ಯ ಸ್ಥಿತಿ ಚಿಂತಾಜನಕವಾಗಿರುವುದಾಗಿ ತಿಳಿದು ಬಂದಿದೆ.

Leave A Reply