ಚಾಲಕನ ನಿಯಂತ್ರಣ ತಪ್ಪಿದ ಲಾರಿ-ಕಾರು ಬೈಕಿಗೆ ಡಿಕ್ಕಿ!!ಸ್ಥಳದಲ್ಲೇ ನಾಲ್ವರು ಮೃತ್ಯು!!

ಬೆಳಗಾವಿ: ಲಾರಿಯೊಂದು ಕಾರು ಮತ್ತು ಬೈಕಿಗೆ ಏಕಕಾಲಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಹಿತ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆಯೊಂದು ಜಿಲ್ಲೆಯ ಸವದತ್ತಿ ತಾಲೂಕಿನ ಬೂದಿಕೊಪ್ಪ ಕ್ರಾಸ್ ಬಳಿ ನಡೆದಿದೆ.

ಸಿಮೆಂಟ್ ತುಂಬಿಸಿಕೊಂಡು ಬರುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಬೆಳಗಾವಿ-ಬಾಗಲಕೋಟೆ ರಸ್ತೆಯ ಬೂದಿಕೊಪ್ಪ ಎಂಬಲ್ಲಿ ಬೈಕ್ ಮತ್ತು ಕಾರಿಗೆ ಡಿಕ್ಕಿಯಾಗಿ ಘಟನೆ ಸಂಭವಿಸಿದೆ ಎನ್ನಲಾಗಿದ್ದು, ಕಾರಿನಲ್ಲಿದ್ದ ಮೂವರ ಸಹಿತ ಬೈಕಿನಲ್ಲಿದ್ದ ವೃದ್ಧೆ ಸ್ಥಳದಲ್ಲೇ ಅಸುನಿಗಿದ್ದಾರೆ.

ಮೃತರನ್ನು ಬೆಳಗಾವಿ ನಿವಾಸಿ ರುಕ್ಮಿಣಿ ಹಳಕಿ(48), ಅಕ್ಷತಾ ಹಳಕಿ(22), ಕಾರು ಚಾಲಕ ಕದಂ(24), ಹಾಗೂ ಹನುಮವ್ವ ಎಂದು ಗುರುತಿಸಲಾಗಿದೆ. ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಪಘಾತದ ಬಳಿಕ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಪೊಲೀಸರು ಆಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Leave A Reply