White/Yellow Stripes: ರೈಲು ಕೋಚ್‌ : ಬಿಳಿ ಅಥವಾ ಹಳದಿ ಪಟ್ಟಿಗಳ ಅರ್ಥವೇನು?

ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುತ್ತಾ, ದೂರ ಪ್ರಯಾಣ ಮಾಡುವ ರೈಲು ಪ್ರಯಾಣವೆಂದರೆ ಒಂದು ಹಿತವಾದ ನವಿರಾದ ಅನುಭವ. ಬೇರೆ ಬೇರೆ ಊರಿನ ಹೆಸರು, ಜನರನ್ನು ನೋಡಿಕೊಂಡು ಸಾಗುವ ಪಯಣವೇ ಒಂದು ವೈಶಿಷ್ಟ್ಯ ಅನುಭೂತಿ ನೀಡುತ್ತದೆ. ಹೆಚ್ಚಿನ ಸ್ಥಳಾವಕಾಶ ಕೂಡ ದೊರೆತು ಆರಾಮವಾಗಿ ಪಯಣಿಸುವ ಅವಕಾಶ ಎಂದಿಗೂ ನೆನೆಪಿನ ಬುತ್ತಿಯಲ್ಲಿ ಮರೆಯಲಾಗದ ಸವಿ ಕ್ಷಣಗಳನ್ನು ಕಲೆ ಹಾಕಲು ಪ್ರೇರೆಪಿಸುತ್ತದೆ. ಹಾಗೆನೇ ರೈಲಿನಲ್ಲಿ
ಪ್ರಯಾಣಿಸುವಾಗ ರೈಲ್ವೇ ಗುರುತುಗಳು ಹಾಗೂ ಚಿಹ್ನೆಗಳನ್ನು ಕಂಡಿರುತ್ತೇವೆ. ಈ ಚಿಹ್ನೆ ಹಾಗೂ ಗುರುತುಗಳಲ್ಲಿ ಕೆಲವು ತುಂಬಾ ಪ್ರಾಮುಖ್ಯತೆ ಹೊಂದಿದ್ದು, ಇವುಗಳ ಬಗ್ಗೆ ತಿಳಿದಿರುವುದು ಅವಶ್ಯ.

ರೈಲಿನಲ್ಲಿ ನೀಲಿ ICF (ಇಂಟಿಗ್ರಲ್ ಕೋಚ್ ಫ್ಯಾಕ್ಟ್ರಿ) ಯಲ್ಲಿ ಪ್ರಯಾಣಿಸುತ್ತಿದ್ದರೆ, ಕೊನೆಯ ಕಿಟಕಿಯ ಮೇಲೆ ಹಳದಿ ಅಥವಾ ಬಿಳಿ ಬಣ್ಣದ ಪಟ್ಟಿಯನ್ನು ನೋಡಿರಬಹುದು. ಬಿಳಿ ಬಣ್ಣವು ಕಾಯ್ದಿರಿಸದೇ ಇರುವ ದ್ವಿತೀಯ ದರ್ಜೆಯ ಕೋಚ್‌ಗಳನ್ನು ಸೂಚಿಸುತ್ತದೆ. ಪ್ಲಾಟ್‌ಫಾರ್ಮ್‌ನಲ್ಲಿ ರೈಲಿಗಾಗಿ ಕಾಯುತ್ತಿರುವ ಪ್ರಯಾಣಿಕರಿಗಾಗಿ ಸಾಮಾನ್ಯ (ಜನರಲ್) ಕೋಚ್ ಅನ್ನು ಹುಡುಕುವುದು ಕಷ್ಟವಾಗುತ್ತದೆ. ಹಾಗಾಗಿ ರೈಲು ಸ್ಟೇಶನ್‌ಗೆ ಆಗಮಿಸಿದಾಗ ಈ ಗುರುತಿನ ಆಧಾರದಲ್ಲಿ ಸುಲಭವಾಗಿ ಜನರಲ್ ಕೋಚ್ ಅನ್ನು ಕಂಡುಹಿಡಿಯಬಹುದಾಗಿದೆ.

ನೀಲಿ ಹಾಗೂ ಕೆಂಪು ಕೋಚ್‌ಗಳಲ್ಲಿ ಬಿಡಿಸಿರುವ ನೇರ ರೇಖೆಯ ಹಳದಿ ಪಟ್ಟಿಗಳನ್ನು ಕಂಡಲ್ಲಿ ಈ ಬೋಗಿಯು ದೈಹಿಕವಾಗಿ ಅಂಗವಿಕಲರಿಗೆ, ಅನಾರೋಗ್ಯಕ್ಕೊಳಗಾದ ಪ್ರಯಾಣಿಕರಿಗೆ ಮೀಸಲು ಎಂಬುದನ್ನು ಸೂಚಿಸುತ್ತದೆ. ಇದರಿಂದ ಅಂಗವಿಕಲರು, ಇಲ್ಲವೇ ದೈಹಿಕ ನ್ಯೂನತೆ ಉಳ್ಳವರು, ಕೋಚ್‌ಗಳನ್ನು ಸುಲಭವಾಗಿ ಗುರುತಿಸಬಹುದಾಗಿದೆ.
ಬೂದು ಬಣ್ಣದ ಕೋಚ್‌ನಲ್ಲಿ ಹಸಿರು ಹಾಗೂ ಕೆಂಪು ಪಟ್ಟಿಗಳನ್ನು ಕಾಣಬಹುದು. ಹಸಿರು ಪಟ್ಟಿಯು ಮಹಿಳೆಯರಿಗೆ ಮೀಸಲಿರುವ ಕೋಚ್ ಅನ್ನು ತಿಳಿಸಿದರೆ, ಕೆಂಪು ಪಟ್ಟಿಯು ನಿರ್ದಿಷ್ಟವಾಗಿ ಮುಂಬೈ ರೈಲು ನಿಲ್ದಾಣಗಳಲ್ಲಿ EMU/MEMU ರೈಲುಗಳಲ್ಲಿರುವ ಪ್ರಥಮ ದರ್ಜೆ ಕ್ಯಾಬಿನ್‌ಗಳನ್ನು ಸೂಚಿಸುತ್ತದೆ.

ಈ ಮಾಹಿತಿಗಳನ್ನು ಪ್ರತಿಯೊಬ್ಬ ನಾಗರಿಕನು ಅರಿತುಕೊಂಡಿರುವುದು ಮುಖ್ಯವಾಗಿದ್ದು, ಇದರಿಂದ ಕೊನೆಯ ಕ್ಷಣದಲ್ಲಿ ಉಂಟಾಗುವ ಗೊಂದಲಗಳನ್ನು ನಿವಾರಿಸಿಕೊಳ್ಳಬಹುದು ಅಂತೆಯೇ ಯಾವ ಬಣ್ಣದ ಪಟ್ಟಿಯು ಏನನ್ನು ಸೂಚಿಸುತ್ತದೆ ಎಂಬುದು ಅರಿತಿರುವುದು ಅವಶ್ಯಕವಾಗಿದೆ. ರೈಲ್ವೇ ಸ್ಟೇಷನ್ ಗೆ ತಡವಾಗಿ ಬಂದರೂ ಕೂಡ ಈ ಮಾಹಿತಿಗಳು ತಿಳಿದಿದ್ದರೆ ಸುಲಭವಾಗಿ ಬೇಕಾದ ಕೋಚ್ ಕಂಡುಹಿಡಿಯಬಹುದು.

Leave A Reply

Your email address will not be published.