ಶಾಲಾ ಸಿಬ್ಬಂದಿಯ ನಿರ್ಲಕ್ಷ , 18 ಗಂಟೆಗಳ ಕಾಲ ಶಾಲಾ ರೂಮಿನಲ್ಲಿ ಲಾಕ್ ಆದ ಮಗು

ಲಕ್ನೋ : ಮಕ್ಕಳು ಎಂದರೆ ಹಸುಗೂಸುಗಳು,ಏನು ಅರಿಯದವರು, ಅದರೆ ಇಲ್ಲೊಬ್ಬ ಸಿಬ್ಬಂದಿ ತನ್ನ ಅಸಡ್ಡೆಯಿಂದಾಗಿ ಪರಿಶೀಲನೆ ನಡೆಸದೇ 1ನೇ ತರಗತಿ ವಿದ್ಯಾರ್ಥಿನಿಯನ್ನು ಶಾಲೆಯ ತರಗತಿಯೊಳಗೆ 18 ಗಂಟೆಗಳ ಕಾಲ ಲಾಕ್ ಮಾಡಿ ಮನೆಗೆ ಹೋಗಿರುವ ಘಟನೆ ಉತ್ತರಪ್ರದೇಶದ ಸಂಭಾಲ್‍ನಲ್ಲಿ ನಡೆದಿದೆ.

ಗುನ್ನೌರ್ ತಾಹಸಿಲ್‍ನ ಧನರಿ ಪಟ್ಟಿಯಲ್ಲಿರುವ ಪ್ರಾಥಮಿಕ ಶಾಲೆಯ 1 ನೇ ತರಗತಿಯಲ್ಲಿ ಓದುತ್ತಿದ್ದ 7 ವರ್ಷದ ಬಾಲಕಿ ಶಾಲಾ ಅವಧಿ ಮುಗಿದ ಬಳಿಕ ತರಗತಿಯ ಒಳಗೆಯೇ ಇದ್ದಳು. ಬುಧವಾರ ಬೆಳಗ್ಗೆ ಶಾಲೆ ತೆರೆದಾಗ ಘಟನೆ ಬೆಳಕಿಗೆ ಬಂದಿದ್ದು,

ಆದರೆ ಇಂದು ಬೆಳಗ್ಗೆ ಶಾಲೆ ತೆರೆದಾಗ ಆಕೆ ತರಗತಿಯಲ್ಲಿ ಪತ್ತೆಯಾಗಿದ್ದಾಳೆ ಮತ್ತು ಆರೋಗ್ಯವಾಗಿದ್ದಾಳೆ ಎಂದು ಶಿಕ್ಷಣಾಧಿಕಾರಿ ಪೋಪ್ ಸಿಂಗ್ ತಿಳಿಸಿದ್ದಾರೆ.

ಇದೊಂದು ಅಮಾನವೀಯ ಘಟನೆಯಾಗಿದ್ದು ವಿಧ್ಯಾರ್ಥಿಯು ಮಂಗಳವಾರ ಶಾಲೆ ಮುಗಿದ ಬಳಿಕ ಮನೆಗೆ ಬಾಲಕಿ ಹಿಂತಿರುಗದೇ ಇದ್ದಾಗ, ಆಕೆಯ ಅಜ್ಜಿ ಶಾಲೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಅಲ್ಲಿ ಯಾವುದೇ ಮಕ್ಕಳಿಲ್ಲ ಎಂದು ಸಿಬ್ಬಂದಿ ಹೇಳಿದ್ದ ಕಾರಣ ಆಕೆಯ ಚಿಕ್ಕಪ್ಪನಿಗೆ ವಿಷಯ ಮುಟ್ಟಿಸಿದ್ದಾರೆ. ನಂತರ ಮನೆಯವರೆಲ್ಲರೂ ಅರಣ್ಯ ಪ್ರದೇಶದಲ್ಲೆಡೆ ಹುಡುಕಾಟ ನಡೆಸಿದರೂ ಎಲ್ಲಿಯೂ ಬಾಲಕಿ ಪತ್ತೆಯಾಗಲಿಲ್ಲ. ಆದರೆ ಬುಧವಾರ ಬೆಳಗ್ಗೆ 8 ಗಂಟೆಗೆ ಶಾಲೆ ತೆರೆದಾಗ ಬಾಲಕಿ ರಾತ್ರಿಯಿಡೀ ಶಾಲಾ ಕೊಠಡಿಯಲ್ಲಿ ಬೀಗ ಹಾಕಿದ್ದರಿಂದ ತರಗತಿಯಲ್ಲಿಯೇ ಇದ್ದ ವಿಚಾರ ಬೆಳಕಿಗೆ ಬಂದಿದೆ.

ಶಾಲಾ ಅವಧಿ ಮುಗಿದರೂ ಶಿಕ್ಷಕರು ಹಾಗೂ ಇತರೆ ಸಿಬ್ಬಂದಿ ಕೊಠಡಿಗಳನ್ನು ಪರಿಶೀಲಿಸಿಲ್ಲ ಎಂದು ಬ್ಲಾಕ್ ಶಿಕ್ಷಣಾಧಿಕಾರಿ ಸಿಂಗ್ ತಿಳಿಸಿದ್ದಾರೆ. ಇದು ನಿರ್ಲಕ್ಷ್ಯದ ಪ್ರಕರಣವಾಗಿದ್ದು, ಎಲ್ಲಾ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

Leave A Reply