ಗಂಡನ ರಾಸಲೀಲೆ : ಹೋಟೆಲ್ ನಲ್ಲಿ ಇನ್ನೊಬ್ಬಳ ತೆಕ್ಕೆಯಲ್ಲಿದ್ದಾಗಲೇ ಪತ್ನಿಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ ಕಾಮಾಂಧ ಪತಿ

ಮದುವೆಯ ನಂತರ ಗಂಡ ಇನ್ನೋರ್ವಳ ಜೊತೆ ಅನೈತಿಕ ಸಂಬಂಧ ಇಡ್ಕೊಂಡಿರುವುದು ಅಥವಾ ಹೆಂಡತಿ ಗಂಡನ ಜೊತೆ ಸಂಬಂಧ ಇಟ್ಕೊಂಡಿರುವ ಘಟನೆಯ ಕುರಿತು ವರದಿಯಾಗುವ ಬಗ್ಗೆ ನಾವು ಕೇಳಿದ್ದೀವಿ. ಈಗ ಅಂತಹುದೇ ಒಂದು ಘಟನೆಯೊಂದು ನಡೆದಿದೆ. ಹೌದು, ಗಂಡ ಬೇರೊಬ್ಬಳು ಹೆಣ್ಣಿನ ಜೊತೆ ಇದ್ದುದನ್ನು ಹೆಂಡತಿ ರೆಡ್ ಹ್ಯಾಂಡ್ ಆಗಿ ಹಿಡಿದು ಹಿಗ್ಗಾಮುಗ್ಗ ಥಳಿಸಿದ ಘಟನೆಯೊಂದು ನಡೆದಿದೆ.


Ad Widget

Ad Widget

ತನಗೆ ತಾಳಿ ಕಟ್ಟಿದ ಪತಿ ಹೋಟೆಲ್ ಕೋಣೆಯೊಂದರಲ್ಲಿ ಮತ್ತೊಬ್ಬ ಮಹಿಳೆಯೊಂದಿಗೆ ಅಶ್ಲೀಲ ಭಂಗಿಯಲ್ಲಿರುವುದನ್ನು ಕಂಡ ಪತ್ನಿ ಕೆಂಡಾಮಂಡಲವಾಗಿ, ಪಾದರಕ್ಷೆಯಿಂದ ಪತಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಆಗ್ರಾದ ದೆಹಲಿ ಗೇಟ್ ಸಮೀಪ ನಡೆದಿರುವುದಾಗಿ ವರದಿ ತಿಳಿಸಿದೆ.


Ad Widget

ತಂದೆಗೆ ಚಪ್ಪಲಿಯಿಂದ ಹೊಡೆಯುತ್ತಿರುವ ದೃಶ್ಯವನ್ನು ಮಗಳು ಸೆರೆಹಿಡಿದಿದ್ದಾಳೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಹಿಳೆ ( ಹೆಂಡತಿ) ನೀಲಂ ಎಂದು ಗುರುತಿಸಲಾಗಿದ್ದು, ಪತಿ ದಿನೇಶ್ ಗೋಪಾಲ್ ಎಂದು ಗುರುತಿಸಲಾಗಿದೆ.

ತನ್ನ ಪತಿ ದೀರ್ಘಕಾಲದಿಂದಲೂ ಇದೇ ರೀತಿ ವರ್ತಿಸುತ್ತಿರುವುದಾಗಿ ನೀಲಂ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ. ನಮಗೆ 16 ವರ್ಷದ ಮಗಳು ಮತ್ತು ಒಂಬತ್ತು ವರ್ಷದ ಮಗನಿದ್ದಾನೆ. ಮಕ್ಕಳಿಗೂ ಕೂಡಾ ತಂದೆಯ ಕೆಟ್ಟ ಚಾಳಿ ಬಗ್ಗೆ ತಿಳಿದಿದೆ ಎಂದು ದೂರಿದ್ದಾರೆ.

Ad Widget

Ad Widget

Ad Widget

ತಂದೆಯ ಈ ಕೆಟ್ಟಚಾಳಿಯಿಂದ ರೋಸಿ ಹೋಗಿರುವ ಮಗಳು ಕೂಡಾ ತಂದೆ ಎಂದು ಕರೆಯಲು ಹಿಂದೇಟು ಹಾಕುತ್ತಿದ್ದಾಳೆ. ಹೀಗಾಗಿ ತಂದೆಯನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಬೇಕೆಂದು ಪತ್ನಿ ಮತ್ತು ಮಗಳು ಹಿಂಬಾಲಿಸಿಕೊಂಡು ಬಂದಿದ್ದು ಹೋಟೆಲ್ ನಲ್ಲಿ ಮತ್ತೊಬ್ಬ ಮಹಿಳೆ ಜೊತೆ ತಂದೆ ಚಕ್ಕಂದವಾಡುತ್ತಿರುವ ದೃಶ್ಯವನ್ನು ಮಗಳು ವಿಡಿಯೋ ರೆಕಾರ್ಡ್ ಮಾಡಿರುವುದಾಗಿ ನೀಲಂ ಹೇಳಿದ್ದಾರೆ.

ಪತ್ನಿ ಹೋಟೆಲ್ ಕೋಣೆಯೊಳಗೆ ನುಗ್ಗಿದ್ದು, ಪತಿ ಹಾಗೂ ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ತನ್ನನ್ನು ಕ್ಷಮಿಸಿಬಿಡು ಎಂದು ಪತಿ ಗೋಗರೆಯುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಘಟನೆ ಬಗ್ಗೆ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿರುವುದಾಗಿ ವರದಿಯಾಗಿದೆ.

error: Content is protected !!
Scroll to Top
%d bloggers like this: