ಗಮನಿಸಿ: ಗ್ರಾಮಪಂಚಾಯಿತಿ ಗಳಲ್ಲಿ `ಗ್ರಾಮ್ ಒನ್ ಸೇವಾ ಕೇಂದ್ರ’ ಆರಂಭಕ್ಕೆ ಅರ್ಜಿ ಆಹ್ವಾನ: ಇಲ್ಲಿದೆ ಮಾಹಿತಿ

ಗ್ರಾಮ ಪಂಚಾಯತಿಗಳಲ್ಲಿ ಪ್ರಾಂಚೈಸಿ ಆಧಾರದಲ್ಲಿ 32 ಗ್ರಾಮ ಒನ್ ಸೇವಾ ಕೇಂದ್ರ ಆರಂಭಿಸಲು ಆಸಕ್ತರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.


Ad Widget

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸೇವಾಸಿಂಧು ಯೋಜನೆಯಡಿ ಸುಮಾರು 750ಕ್ಕೂ ಹೆಚ್ಚು ನಾಗರಿಕ ಸೇವೆಗಳನ್ನು ಪಡೆಯಲು ಈ ಕೇಂದ್ರಗಳಲ್ಲಿ ಅರ್ಜಿಗಳನ್ನು ಸ್ವೀಕರಿಸಲಾಗುವುದು. ವಾರದ ಎಲ್ಲಾ ದಿನ ಬೆಳಿಗ್ಗೆ 8 ರಿಂದ ರಾತ್ರಿ 8ರವರೆಗೆ ಕೇಂದ್ರಗಳ ಕಾರ್ಯನಿರ್ವಹಿಸಲಿವೆ.

ಗ್ರಾ.ಪಂ.ಗಳ ವಿವರ: ಬ್ಯಾಡಗಿ ತಾಲೂಕಿನ ಕಾಗಿನೆಲೆ, ಹಾನಗಲ್ ತಾಲೂಕಿನ ಸೋಮಸಾಗರ, ಹಿರೆಕಣಗಿ, ಕರಗುದರಿ, ಹುಲ್ಲತ್ತಿ, ಹಾವೇರಿ ತಾಲೂಕಿನ ಹೊಂಬರಡಿ, ಹಾಂವಶಿ, ಹೊಸರಿತ್ತಿ, ಕರ್ಜಗಿ, ಹಿರೇಕೆರೂರು ತಾಲೂಕು ಚಿಕ್ಕೇರೂರು, ರಾಣೇಬೆನ್ನೂರು ತಾಲೂಕು ಕೋಡಿಯಾಲ, ಬೆನಕನಕೊಂಡ, ಮುದೇನೂರು, ಕಮದೋಡ, ರಟ್ಟಿಹಳ್ಳಿ ತಾಲೂಕು ಕೋಡಮಗ್ಗಿ, ಸವಣೂರ ತಾಲೂಕಿನ ಕಳಸೂರ,ಕಡಕೋಳ,ತೆಗ್ಗಿಹಳ್ಳಿ, ಕಾರಡಗಿ,ಕುರಬರಮಲ್ಲೂರ, ಹೆಸರೂರ, ಹತ್ತಿಮತ್ತೂರ, ಶಿಗ್ಗಾಂವ ತಾಲೂಕಿನ ಎನ್.ಎಂ.ತಡಸ, ದುಂಡಶಿ, ಕುಂದೂರ, ಶಿಶುವಿನಹಾಳ, ವನಹಳ್ಳಿ, ಹುಲಗುರ, ಹಿರೇಮಣಕಟ್ಟಿ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಒನ್ ಕೇಂದ್ರ ಆರಂಭಕ್ಕೆ ಅರ್ಜಿ ಆಹ್ವಾನಿಸಲಾಗಿದೆ.


Ad Widget

ಆಸಕ್ತರು 30-09-2022 ರೊಳಗೆ https://www.karnataka.gov.in/ public/ gramaoneFranchisee ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಂಯೋಜಕ ದಾದಾಪೀರ ಮೊ.86600 65904 ಸಂಪರ್ಕಿಸಬಹುದೆಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Ad Widget
error: Content is protected !!
Scroll to Top
%d bloggers like this: