Big Boss season-9 | ಸೆ.24 ರಂದು ಆರಂಭವಾಗುವ ಶೋ ಗೆ ಯಾರೆಲ್ಲ ಎಂಟ್ರಿ ಕೊಡ್ತಿದ್ದಾರೆ ಗೊತ್ತಾ?

Big boss show : ಕಿಚ್ಚ ಸುದೀಪ್ ಸಾರಥ್ಯದ ಬಿಗ್ ಬಾಸ್ ರಿಯಾಲಿಟಿ ಶೋ ಪ್ರಾರಂಭ ಸೆಪ್ಟೆಂಬರ್ 24ರಂದು 6ಗಂಟೆ ಗೆ ಕಲರ್ಸ್ ಕನ್ನಡ ವಾಹಿನಿ ಪ್ರಸಾರ ವಾಗಲಿದೆ. ಇದೀಗ ಪ್ರೊಮೊ ಸಖತ್ ಸೌಂಡ್ ಮಾಡಿ ಗಮನಸೆಳೆಯುತ್ತಿದೆ. ಓ ಟಿ ಟಿ ಸೀಸನ್ ಮೂಲಕ ವೀಕ್ಷಕರ ಮೆಚ್ಚುಗೆಗೆ ಪಾತ್ರ ಬಿಗ್ ಬಾಸ್ ಶೋ ಇದೀಗ ದೂರದರ್ಶನ ವೀಕ್ಷಕರಿಗೆ ಮನೋರಂಜನೆ ನೀಡಲು ಸಜ್ಜಾಗಿದೆ.

ಸೀಸನ್9 ರ ಸ್ಪರ್ಧಿಗಳು ಯಾರು ಇರಬಹುದು ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮನೆ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಹಲವು ಹೆಸರು ಕೇಳಿಬರುತ್ತಿದೆ. ಸರಿಗಮ ಶೋನ ಆಶಾಭಟ್, ಮಜಾಭಾರತ ಶೋವಿನ ರಾಘವೇಂದ್ರ ಮತ್ತು ಚಂದ್ರಪ್ರಭ, ಚಿತ್ರ ನಟಿ ಪ್ರೇಮ ಕೂಡ ದೊಡ್ಮನೆಗೆ ಕಾಲಿಡುತ್ತಿದ್ದಾರೆ ಎಂಬುದಾಗಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕಮಲಿ ಧಾರವಾಹಿ ನಟಿ ಅಮೂಲ್ಯ, ಮುದ್ದುಮಣಿಗಳು ಧಾರಾವಾಹಿ ಖ್ಯಾತಿಯ ಸಮೀಕ್ಷಾ, ಅತೀ ಹೆಚ್ಚು ಹುಟ್ಟುಹಬ್ಬ ಗೀತೆ ಮೂಲಕ ಜನರ ಮೋಡಿ ಮಾಡಿದ ಕಾಫಿನಾಡಿ ಚಂದ್ರು , ಗಿಚ್ಚಿ ಗಿಲಿಗಿಲಿ ಶೋ ಪ್ರಿಯಾಂಕ ಕಾಮತ್, ದಿವ್ಯಾ ವಸಂತ, ಕೂಡ ಬರಲಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

ಓ ಟಿ ಟಿ ಸೀಸನ್ ವಿಜೇತರ ರೂಪೇಶ್ ಶೆಟ್ಟಿ , ಸಾನ್ಯ ಅಯ್ಯರ್, ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ ಓ ಟಿ ಟಿ ಸೀಸನ್ ಮೂಲಕ ಪ್ರೇಕ್ಷಕರ ಮನ ಗೆದ್ದವರು ಇದೀಗ ಬಿಗ್ ಬಾಸ್ ಸೀಸನ್ 9 ಬರುವುದು ಪಕ್ಕ ಆಗಿದೆ. ಯಾರೆಲ್ಲಬರಬಹುದೆಂದು ಸೆಪ್ಟೆಂಬರ್ 24 ರಂದು ಕಾದುನೋಡಬಹುದು. ಬಿಗ್ ಬಾಸ್ 9 ರಿಯಾಲಿಟಿ ಶೋ ಓಪನಿಂಗ್ ಸಂಜೆ 6ಗಂಟೆಗೆ ಪ್ರಾರಂಭವಾಗುತ್ತದೆ. ಪ್ರತಿದಿನ 9:30 ವೀಕ್ಷಕರ ಮುಂದೆ ಬರಲು ಸಜ್ಜಾಗಿದೆ.

error: Content is protected !!
Scroll to Top
%d bloggers like this: