ಮೂವರು ಪೊಲೀಸರು ಸೇರಿಕೊಂಡು ಮಾಡಿದ್ರು ಮಾಡಬಾರದ ಕೆಲಸ | ವೀಡಿಯೋ ವೈರಲ್ ಆಗುತ್ತಿದ್ದಂತೆ ಆದ್ರು ಅಮಾನತು!

ಪೊಲೀಸ್ ಅಂದರೇನೇ ಶಿಸ್ತುಗೆ ಬದ್ಧವಾಗಿರುವವರು. ಇನ್ನೊಬ್ಬರು ತಪ್ಪು ಕೆಲಸ ಮಾಡಿದಾಗ ಅದನ್ನ ತಿದ್ದಿ ಶಿಕ್ಷಿಸುವವರು ಅವರಾಗಿರುತ್ತಾರೆ. ಆದ್ರೆ, ಇಲ್ಲೊಂದು ಕಡೆ ಪೊಲೀಸರೇ ತಪ್ಪು ಹಾದಿ ಹಿಡಿದಿದ್ದಾರೆ.ಹೌದು. ಠಾಣೆಯಲ್ಲೇ ಮಾಡಬಾರದ ಕೆಲಸ ಮಾಡಿದ್ದಾರೆ.

ಇಂತಹ ಒಂದು ಪ್ರಕರಣ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಇಲ್ಲಿನ ಪೊಲೀಸ್ ಕಾನ್​ಸ್ಟೆಬಲ್​ಗಳಾದ ಚಲಪತಿ, ಮಂಜುನಾಥ್ ಹಾಗೂ ರಮೇಶ್ ಬಾಬು ಅವರನ್ನು ಕೋಲಾರ ಎಸ್​ಪಿ ಅಮಾನತುಗೊಳಿಸಿದ್ದಾರೆ. ಅಷ್ಟಕ್ಕೂ ಕರ್ತವ್ಯದಲ್ಲಿ ಅವರು ಮಾಡಿದ್ದೇನು ಗೊತ್ತಾ?

ಈ ಮೂವರು ಪೊಲೀಸ್ ಕಾನ್​ಸ್ಟೆಬಲ್​ಗಳು ಠಾಣೆಯಲ್ಲೇ ಮದ್ಯಪಾನ ಮಾಡಿದ್ದಾರೆ. ಅಷ್ಟೇ ಅಲ್ಲದೆ ಈ ವಿಡಿಯೋವನ್ನು ಕೂಡ ಮಾಡಿದ್ದರು. ಇದೀಗ ಆ ವಿಡಿಯೋ ವೈರಲ್​ ಆಗಿದ್ದು, ಪೊಲೀಸರ ನಡೆ ಸಾರ್ವಜನಿಕರಿಂದ ತೀವ್ರ ಟೀಕೆಗೂ ಗುರಿಯಾಗಿತ್ತು. ಮಾಡಬಾರದ ಕೆಲಸ ಮಾಡಿದ ತಪ್ಪಿಗೆ ಚಲಪತಿ, ಮಂಜುನಾಥ್ ಜತೆಗೆ ವಿಡಿಯೋ ಮಾಡಿದ್ದ ರಮೇಶ್ ಬಾಬುವನ್ನು ಕೂಡ ಅಮಾನತುಗೊಳಿಸಲಾಗಿದೆ.

ಆದ್ರೆ, ಇವರ ಬ್ಯಾಡ್ ಲಕ್ ಅಂದ್ರೆ, ಈ ವೀಡಿಯೋ ಇತ್ತೀಚೆದ್ದು ಅಲ್ಲ. ಬದಲಾಗಿ, ಒಂದೂವರೆ ವರ್ಷದ ಹಿಂದೆ ನಡೆದಿದ್ದ ಘಟನೆ. ಆದರೆ ಇಲ್ಲಿ ಆಗಿದ್ದು ಏನಂದ್ರೆ, ಆ ವಿಡಿಯೋ ವೈರಲ್​ ಮಾತ್ರ ಇತ್ತೀಚೆಗೆ ಆಗಿದೆ. ಹೀಗಾಗಿ, ಈ ಪೇದೆಗಳು ಈಗ ಸಸ್ಪೆಂಡ್ ಆಗುವಂತೆ ಆಗಿದೆ.

Leave A Reply

Your email address will not be published.