Flipkart annual Big Billion Days sale 2022 | ಭಾರೀ ರಿಯಾಯಿತಿಯಲ್ಲಿ ನಡೆಯುವ ಸೇಲ್ ನಲ್ಲಿ ನೀವೂ ಪಾಲ್ಗೊಳ್ಳಿ!

ಫ್ಲಿಪ್‌ಕಾರ್ಟ್ (Flipkart) ಗ್ರಾಹಕರಿಗೆ ಹೊಸ ಆಫರ್ ನೀಡುವುದರ ಮೂಲಕ ರಿಯಾಯಿತಿ ದರದಲ್ಲಿ ಮಾರಾಟ ನಡೆಸುತ್ತಾ ಗ್ರಾಹಕರನ್ನು ತನ್ನತ್ತ ಸೆಳೆಯುತ್ತ ಬಂದಿದೆ. ಇದೀಗ  ಫ್ಲಿಪ್‌ಕಾರ್ಟ್ ವಾರ್ಷಿಕ ಬಿಗ್ ಬಿಲಿಯನ್ ಡೇಸ್ ಸೇಲ್ 2022ನ್ನು ಪ್ರಾರಂಭಿಸಿದ್ದು, ಭಾರೀ ರಿಯಾಯಿತಿಯಲ್ಲಿ ಉತ್ಪನ್ನಗಳು ದೊರೆಯಲಿದೆ.

ಈ ಸೇಲ್ ಸೆಪ್ಟೆಂಬರ್‌ 23 ರಂದು ಲೈವ್ ಆಗಲಿದ್ದು, ಸೆಪ್ಟೆಂಬರ್ 30 ರವರೆಗೆ ನಡೆಯಲಿದೆ. ಫ್ಲಿಪ್‌ಕಾರ್ಟ್ ಪ್ಲಸ್ ಬಳಕೆದಾರರಿಗೆ ಒಂದು ದಿನ ಮುಂಚಿತವಾಗಿ ಸೇಲ್‌ ಪ್ರಾರಂಭವಾಗಲಿದೆ. ಈ ಬಾರಿ ಕೂಡ ಹಲವು ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿ ನೀಡುವುದಾಗಿ ತಿಳಿಸಿರುವ ಫ್ಲಿಪ್​ಕಾರ್ಟ್​,  ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಾನಿಕ್ಸ್, ವಸ್ತುಗಳು, ಫ್ಯಾಶನ್ ಮತ್ತು ಗೃಹ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿ ದೊರೆಯಲಿದೆ.

ಸೇಲ್‌ ಸಂದರ್ಭದಲ್ಲಿ ಖರೀದಿದಾರರು ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್‌ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳಲ್ಲಿ ಭರ್ಜರಿ ರಿಯಾಯಿತಿಯನ್ನು ಪಡೆಯಬಹುದು. ಅಲ್ಲದೆ, ಐಫೋನ್‌ 13 ಮತ್ತು ಐಫೋನ್‌ 12 ಮೇಲೆ ಆಕರ್ಷಕ ಡಿಸ್ಕೌಂಟ್‌ ನಿರೀಕ್ಷಿಸಬಹುದು. ನ್ನು ಬ್ಯಾಂಕ್‌ ಆಫರ್‌ಗಳ ಜೊತೆಗೆ ನೋ ಕಾಸ್ಟ್‌ ಇಎಂಐ ಮತ್ತು ಸ್ಮಾರ್ಟ್‌ಫೋನ್‌ ಎಕ್ಸ್‌ಚೇಂಜ್‌ ಆಫರ್‌ ಕೂಡ ಪಡೆದುಕೊಳ್ಳಬಹುದಾಗಿದೆ.

ಫ್ಲಿಪ್​ಕಾರ್ಟ್​ ಸೇಲ್​ನಲ್ಲಿ ಎಲೆಕ್ಟ್ರಾನಿಕ್ಸ್, ಪರಿಕರಗಳು, ಟಿವಿಗಳು ಮತ್ತು ಉಪಕರಣಗಳ ಮೇಲೆ ಖರೀದಿದಾರರು 80% ವರೆಗೆ ರಿಯಾಯಿತಿ ಪಡೆಯಬಹುದು ಹೇಳಲಾಗುತ್ತಿದೆ. ಜೊತೆಗೆ ಕಿಚನ್ ಅಥವಾ ಅಡುಗೆ ಸಾಮಾಗ್ರಿಗಳ ಮೇಲೆ ಪ್ಲಿಪ್​ಕಾರ್ಟ್ ಶೇ 85ರಷ್ಟು ರಿಯಾಯಿತಿ ನೀಡಲಿದೆ ಎಂದು ಹೇಳಲಾಗುತ್ತಿದೆ.

ಇನ್ನು ಇಂಟೆಲ್–ಚಾಲಿತ ಲ್ಯಾಪ್‌ಟಾಪ್‌ಗಳ ಮೇಲೆ ಆಕರ್ಷಕ ರಿಯಾಯಿತಿ ಇರಲಿದೆಯಂತೆ. ಇದರ ಜೊತೆಗೆ ಹಲವು ಬ್ರಾಂಡ್‌ಗಳು, ಕಿಚನ್‌ ಪ್ರಾಡಕ್ಟ್‌ಗಳು, ಗೃಹೋಪಯೋಗಿ ವಸ್ತುಗಳು, ರೆಫ್ರಿಜರೇಟರ್‌ಗಳು ಮತ್ತು ಹೆಚ್ಚಿನವುಗಳಿಂದ ಸ್ಮಾರ್ಟ್ ಟಿವಿಗಳ ಮೇಲೂ ಸಮಾರು 80% ರಿಯಾಯಿತಿ ನೀಡಬಹುದು. ಫ್ಲಿಪ್‌ಕಾರ್ಟ್ ಜೊತೆ ಬಹುತೇಕ ಎಲ್ಲಾ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್ ಕಂಪೆನಿಗಳು ಒಪ್ಪಂದ ಮಾಡಿಕೊಂಡಿದ್ದು, ಈ ಮಾರಾಟದ ಸಮಯದಲ್ಲಿ ಬ್ಯಾಂಕ್ ಕೊಡುಗೆಗಳ ಜೊತೆಯಲ್ಲಿ ಎಲ್ಲಾ ಬ್ರ್ಯಾಂಡ್ ಸ್ಮಾರ್ಟ್‌ಫೋನ್‌ಗಳ ಮೇಲೆ ಶೇ. 10 ಪರ್ಸೆಂಟ್​ಗಿಂತ ಹೆಚ್ಚು ಡಿಸ್ಕೌಂಟ್ಸ್ ಸಿಗಲಿದೆ ಎಂದು ಹೇಳಲಾಗಿದೆ. ಬೋಟ್ ಸೌಂಡ್‌ಬಾರ್‌ಗಳು ಮತ್ತು ಹೆಡ್‌ಫೋನ್‌ಗಳ ಮೇಲೆ 80% ರಿಯಾಯಿತಿ ನೀಡುತ್ತದೆ.

ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ನಲ್ಲಿ ರಿಯಲ್‌ಮಿ C33 ಫೋನ್ ಅತ್ಯುತ್ತಮ ಆಫರ್ ಪಡೆದಿದ್ದು, 6,999 ರೂ.ಗಳಿಂದ ಖರೀದಿಗೆ ಲಭ್ಯ. ಅಂತೆಯೆ ರಿಯಲ್‌ಮಿ C35 ಫೋನ್ 9,999 ರೂ. ಗಳ ಆಫರ್‌ ಬೆಲೆಯಲ್ಲಿ ಖರೀದಿಗೆ ಸಿಗಲಿದೆ. ರಿಯಲ್‌ಮಿ 9 (6GB+128GB) ಆಫರ್‌ಗಳನ್ನು ಒಳಗೊಂಡಂತೆ 12,999 ರೂ.ಗಳಿಗೆ ದೊರೆಯಲಿದೆ. ರಿಯಲ್‌ಮಿ C30 ಫೋನ್ 5,799 ರೂ.ಗಳಲ್ಲಿ ಆಕರ್ಷಕ ಪ್ರೈಸ್‌ ಟ್ಯಾಗ್‌ನಲ್ಲಿ ಲಭ್ಯವಾಗಲಿದೆ. ರಿಯಲ್‌ಮಿ 9i ಫೋನ್ 10,999ರೂ.ಗಳ ಪ್ರಾರಂಭ ಬೆಲೆಯಲ್ಲಿ ಸಿಗಲಿದೆ. ಇನ್ನೂ ಹಲವು ಪಕರಣಗಳು ರಿಯಾಯಿತಿ ದರದಲ್ಲಿ ಸಿಗಲಿದ್ದು ಗ್ರಾಹಕರಿಗೆ ಇದೊಂದು ಉತ್ತಮವಾದ ಅವಕಾಶವಾಗಿದೆ.

Leave A Reply

Your email address will not be published.