ಜನರೇ ಗಮನಿಸಿ : online ವಂಚನೆಯಾದರೆ ಗಾಬರಿಬೇಡ ; ನಿಮಗಿದೇ Golden Hour ಇದನ್ನು ಅನುಸರಿಸಿ!!!

ದಿನಂಪ್ರತಿ ಒಂದಿಲ್ಲೊಂದು ಆನ್ಲೈನ್ ವಂಚನೆ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಜನ ಸರಾಗವಾಗಿ ಮೋಸ ಹೋಗಿ ಹಣ ಕಳೆದುಕೊಳ್ಳುವ ಪ್ರಸಂಗಗಳು ಹೆಚ್ಚಾಗಿ ಕಂಡುಬರುತ್ತಿವೆ. ಸಾಮಾನ್ಯ ಜನರಿಗೆ ಕರೆ ಮಾಡಿ ಲಕ್ಕಿ ಡ್ರಾ ಆಗಿದೆ, ಅಕೌಂಟ್ ಬ್ಲಾಕ್ ಆಗಿದೆಯೆಂದು ಮರುಳು ಮಾಡಿ, ಒ ಟಿ ಪಿ ಕೇಳಿ ಖಾತೆಯ ಹಣದೋಚುವ ತಂತ್ರ ನಡೆಯುತ್ತಿದೆ. ಹೀಗೆ ಎಗ್ಗಿಲ್ಲದೆ ಸಾಗುತ್ತಿರುವ ಆನ್ಲೈನ್ ವಂಚನೆಯ ಪ್ರಕರಣ ಭೇದಿಸಲು ಪೋಲಿಸ್ ಪಡೆ ಸದಾ ಸಿದ್ಧವಾಗಿರುವ ಸಂಗತಿ ಎಲ್ಲರಿಗೂ ತಿಳಿದಿದೆ.

ಉಡುಪಿಯಲ್ಲಿ ನಡೆದ ಆನ್ಲೈನ್ ವಂಚನೆ ಪ್ರಕರಣದಲ್ಲಿ ಅಪರಾಧಿಯನ್ನು ಬಂಧಿಸುವಲ್ಲಿ ಉಡುಪಿಯ ಸೈಬರ್ ಕ್ರೈಮ್ ನ ಖಾಕಿ ಪಡೆ ಯಶಸ್ವಿಯಾಗಿದೆ. ಉಡುಪಿ ಜಿಲ್ಲೆಯ ಮಂದಾರ್ತಿ ಮೂಲದ ಉದ್ಯಮಿ ಪ್ರಮೋದ್ ಯುರೋಬಾಂಡ್ ಕಂಪನಿಯ ಡೀಲರ್ ಆಗಿದ್ದಾರೆ.

ಯುರೋಬಾಂಡ್ ಕಂಪನಿಯ ಮಾಲೀಕನ ಸೋಗಿನಲ್ಲಿ ಪ್ರಮೋದ್ ಗೆ ಅನಾಮಿಕನೊಬ್ಬ ಕರೆ ಮಾಡಿದ್ದು, ಮಗನಿಗೆ ಅಪಘಾತವಾಗಿರುವುದರಿಂದ ತಕ್ಷಣ ಏರ್ ಲಿಫ್ಟ್ ಮಾಡಿ ಎ.ಜೆ.ಆಸ್ಪತ್ರೆಗೆ ದಾಖಲಿಸಲು 12 ಲಕ್ಷ ನಗದು ತನ್ನ ಬಳಿಯಿದ್ದು, ಏರ್ ಲಿಫ್ಟ್ ಮಾಡಲು ಇನ್ನೂ 3 ಲಕ್ಷ ಬೇಕಾಗಿದ್ದು, ತಾನು ಮಂಗಳೂರಿಗೆ ಬರುವುದಾಗಿ ಜೊತೆಗೆ ಈಗ ಖಾತೆಗೆ ಹಣ ವರ್ಗಾಯಿಸುವಂತೆ ಒತ್ತಾಯಿಸಿದ್ದಾನೆ.

ಅನಾಮಿಕನ ಮಾತನ್ನು ನಂಬಿ ಮಾನವೀಯ ದೃಷ್ಟಿಯಿಂದ ಉದ್ಯಮಿ ಪ್ರಮೋದ್ ತನ್ನ ಖಾತೆಯಿಂದ 50,000, ಸ್ನೇಹಿತರಿಂದ ಎರಡೂವರೆ ಲಕ್ಷ ರೂಪಾಯಿ ಸಂಗ್ರಹಿಸಿ ಹಣ ವರ್ಗಾಯಿಸಿದ್ದಾರೆ. ಹಣ ರವಾನಿಸಿದ ಬಳಿಕ , ಮಂಗಳೂರಿನ ಎಜೆ ಆಸ್ಪತ್ರೆ ಆವರಣದಲ್ಲಿ ಯುರೋ ಬಾಂಡ್ ಕಂಪನಿಯ ಮಾಲೀಕ ಎಂದು ಹೇಳಿಕೊಂಡ ಅನಾಮಿಕ ವ್ಯಕ್ತಿಗಾಗಿ ಕಾದು ಸುಸ್ತಾದ ಪ್ರಮೋದ್ ಗೆ ಮೋಸ ಹೋಗಿರುವುದು ಅರಿವಾಗಿ, ವಂಚನೆಯಾಗಿದ್ದು ಗೊತ್ತಾಗುತ್ತಿದ್ದಂತೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ದೂರು ದಾಖಲಿಸಿದ್ದಾರೆ.

ಆನ್ ಲೈನ್ ವಂಚನೆ ಪ್ರಕರಣಗಳಲ್ಲಿ ಈ ತಕ್ಷಣದ ದೂರು ದಾಖಲಾತಿಯನ್ನು ಗೋಲ್ಡನ್ ಅವರ್(Golden hour) ಎಂದು ಪರಿಗಣಿಸಲಾಗುತ್ತದೆ. ದೂರು ದಾಖಲಾದ ಬೆನ್ನಲ್ಲೇ ಆರೋಪಿಯ ಪತ್ತೆಗೆ ಹುಡುಕಾಟ ನಡೆಸಿದ ಉಡುಪಿಯ ಸೈಬರ್ ಕ್ರೈಂ ಪೋಲಿಸ್ ಪಡೆ ಮಹಾರಾಷ್ಟ್ರ, ಗುಜರಾತ್ ನಲ್ಲಿ ಕಾರ್ಯಾಚರಣೆ ನಡೆಸಿ , ಮೂರು ಮಂದಿ ವಂಚಕರನ್ನು ಸೆರೆಹಿಡಿದು, ತನಿಖೆ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉಡುಪಿಯ ಉದ್ಯಮಿ ಪ್ರಮೋದ್ ಗೋಲ್ಡನ್ ಅವರ್ ಅಲ್ಲಿ ದೂರು ದಾಖಲಿಸಿ, ಹಣ ಸುರಕ್ಷಿತವಾಗಿರುವ ನಿಟ್ಟಿನಲ್ಲಿ ಖುಷಿಯಾಗಿದ್ದು , ಇವರು ರವಾನಿಸಿದ 50,000 ಮೊತ್ತವು ಫ್ರೀಜ್ ಆಗಿರುವುದರಿಂದ ನ್ಯಾಯಾಲಯದ ಮುಖೇನ ಪಡೆಯಬೇಕಾಗಿದೆ. ಉಳಿದ ಮೊತ್ತವನ್ನು ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡಿರುವ ಖಾಕಿ ಪಡೆ, ಪ್ರಮೋದ್ ಗೆ ಹಣವನ್ನು ಮರಳಿಸಿದ್ದಾರೆ.

ಆನ್ಲೈನ್ ಮೂಲಕ ವಂಚನೆಯಾದ ಕೂಡಲೇ ಪೊಲೀಸರಿಗೆ ದೂರು ನೀಡಿದರೆ, ನ್ಯಾಷನಲ್ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್ ಮಾಹಿತಿ ಪಡೆದು, ವಂಚನೆ ಮಾಡಿದ ವ್ಯಕ್ತಿಯ ಹಾಗೂ ಹಣ ರವಾನಿಸಿದ ಖಾತೆಯನ್ನು ಫ್ರೀಜ್ ಮಾಡಲಾಗುತ್ತದೆ. ಹೀಗಾಗಿ ಹಣ ರವಾನಿಸಿದ ವ್ಯಕ್ತಿಯ ಹಣ ಸುರಕ್ಷಿತವಾಗಿರುತ್ತದೆ.

Leave A Reply

Your email address will not be published.