ನಿಮ್ಮ ಮೊಬೈಲ್ ನಲ್ಲಿ ಯಾವ ರೀತಿಯ ಡಿಸ್‌ಪ್ಲೇ ‌ಹಾಕಲಾಗಿದೆ ? ಹಾಗಾದರೆ ಹೀಗೆ ಮಾಡಿ!!!

ಎಲ್ಲೆಡೆಯೂ ಈಗ ಮೊಬೈಲ್ ನದ್ದೇ ಕಾರುಬಾರು. ಮೊಬೈಲ್ ಬಳಸದೇ ಇರುವವರೇ ವಿರಳ. ಮೊಬೈಲ್ ಬಳಕೆ ಹೆಚ್ಚಾದಂತೆ ಅದರ ಫೀಚರ್ಗಳು ಅಪ್ಡೇಟ್ ಆಗಿ ಜನ ಮೆಚ್ಚುವ ವಿಭಿನ್ನ ಶೈಲಿ, ಕ್ಯಾಮೆರಾ ಸೆಟ್ ಅಪ್ ನಲ್ಲಿ ಬದಲಾವಣೆಗಳನ್ನು ಮೊಬೈಲ್ ತಯಾರಿಕಾ ಕಂಪನಿಗಳು ಮಾಡುತ್ತಲೇ ಇರುತ್ತವೆ. ಟಚ್ ಮೊಬೈಲ್ ಗಳು ಕಂಪನಿಯ ಬ್ರಾಂಡ್ ಗೆ ಅನುಗುಣವಾಗಿ ವಿವಿಧ ಡಿಸ್ಪ್ಲೇ ವೈಶಿಷ್ಟ್ಯ ವನ್ನು ಒಳಗೊಂಡಿರುತ್ತದೆ.

ಎರಡು ಅತ್ಯಂತ ಜನಪ್ರಿಯ ಡಿಸ್ಪ್ಲೇ ವಿಭಾಗಗಳೆಂದರೆ AMOLED ಗಳು ಮತ್ತು LCD ಗಳು.

ಅಮೋಲೆಡ್: ಆಕ್ಟಿವ್ ಮ್ಯಾಟ್ರಿಕ್ಸ್ ಆರ್ಗಾನಿಕ್ ಲೈಟ್ ಎಮಿಟಿಂಗ್ ಡಯೋಡ್ಸ್ ಎಂದು ಕರೆಯಲ್ಪಡುವ ಈ ಡಿಸ್‌ಪ್ಲೇಗಳು ಓಎಲ್‌ಇಡಿ ಸ್ಕ್ರೀನ್‌ನಲ್ಲಿ ಹೆಚ್ಚಿನ ಬದಲಾವಣೆಯನ್ನು ಮಾಡಲಾಗಿದ್ದು, ಇಲ್ಲಿ ಎಲ್ಲ ಪಿಕ್ಸೆಲ್ ಗಳನ್ನು ಟ್ರಾನ್ಸಿಸ್ಟರ್ ಹಾಗೂ ಕೆಪಾಸಿಟರ್‌ಗೆ ಸಂಪರ್ಕ ಕಲ್ಪಿಸಲಾಗಿದ್ದು, ಎಲ್ಲ ಸಮಯದಲ್ಲೂ ಪಿಕ್ಸೆಲ್‌ಗಳನ್ನು ಒಂದೇ ತೆರನಾಗಿರುವಂತೆ ನೋಡಿಕೊಳ್ಳುತ್ತವೆ.

ಎಲ್‌ಸಿಡಿ ಅಥವಾ ಲಿಕ್ವಿಡ್ ಕ್ರಿಸ್ಟಲ್ ಡಿಸ್‌ಪ್ಲೆ ಸಾಮಾನ್ಯ ಬಳಕೆಯಲ್ಲಿರುವ ಫ್ಲಾಟ್ ಫ್ಯಾನೆಲ್ ಡಿಸ್‌ಪ್ಲೇ . ಈ ತಂತ್ರಜ್ಞಾನದಲ್ಲಿ ದ್ರವರೂಪದ ಸ್ಫಟಿಕ ಹಾಗೂ ಬ್ಯಾಕ್‌ಲೈಟ್ ಸಹಾಯದಿಂದ ಸ್ಕ್ರೀನ್‌ನಲ್ಲಿ ಚಿತ್ರ ಮೂಡುವಂತೆ ಮಾಡಲಾಗುತ್ತದೆ. ಥಿನ್ ಫಿಲಂ ಟ್ರಾನ್ಸಿಸ್ಟರ್( ಟಿಎಫ್‌ಟಿ) ಇದು ಎಲ್‌ಸಿಡಿ ಪ್ಯಾನೆಲ್‌ಗೆ ಸೇರಿಸಿರುವ ಹೆಚ್ಚುವರಿ ಟೆಕ್ನಾಲಜಿ. ಪ್ರತಿ ಪಿಕ್ಸೆಲ್‌ನಲ್ಲಿ ಕೆಲವು ಸಂಖ್ಯೆಯ ಎಲೆಕ್ಟ್ರೋಡ್‌ಗಳನ್ನು ಇವು ಹೊಂದಿರುವುದರಿಂದ ಸ್ಕ್ರೀನ್ ಮೇಲೆ ಚಿತ್ರ ಮೂಡುವಿಕೆ ಅತ್ಯುತ್ತಮವಾಗಿರುತ್ತದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ನವೀನ ಮಾದರಿಯ ವಿಭಿನ್ನ ಶೈಲಿಯ ಅನೇಕ ಟಚ್ ಮೊಬೈಲ್ ಗಳಿದ್ದು, ಅವುಗಳ ಸಾಮರ್ಥ್ಯದ ಅನುಸಾರ ಬ್ಯಾಟರಿ, ಸ್ಟೋರೇಜ್ ಹಾಗೂ ಡಿಸ್‌ಪ್ಲೇ ಮಾದರಿಗಳನ್ನು ಒಳಗೊಂಡಿದ್ದು, ಇತ್ತೀಚಿನ ಬಹುತೇಕ ಫೋನ್ ಗಳು LCD, OLED, Super AMOLED ಮತ್ತು AMOLED ಮಾದರಿಯ ಡಿಸ್‌ಪ್ಲೇ ಗಳನ್ನು ಒಳಗೊಂಡಿರುತ್ತವೆ.

ಬಳಸುವ ಸ್ಮಾರ್ಟ್ ಫೋನಿನ ಡಿಸ್‌ಪ್ಲೇ ಯಾವ ಮಾದರಿಯದ್ದು ಎಂಬುದನ್ನು ತಿಳಿದುಕೊಳ್ಳಲು, ಬಳಕೆದಾರರು ಫೋನ್ ನ ಫೀಚರ್ ಸ್ ಗಳನ್ನು ನೋಡುವ ಮೂಲಕ ಡಿಸ್‌ಪ್ಲೇ ಯ ಬಗ್ಗೆ ತಿಳಿಯಬಹುದು. ಇದಲ್ಲದೇ ಸ್ಕ್ರೀನ್ ಯಾವ ಮಾದರಿಯದ್ದು, ಎಂಬುದನ್ನು ತಿಳಿಯಲು ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳು ಮೂಲಕ ಇಲ್ಲವೇ ಬಳಕೆದಾರರು ಬಳಸುವ ಮೊಬೈಲ್ ಕಂಪನಿಯ ವೆಬ್ಸೈಟ್ ಮೂಲಕವೂ ತಿಳಿಯಬಹುದು.

ಡಿಸ್‌ಪ್ಲೇ ಬಗ್ಗೆ ಥರ್ಡ್ ಪಾರ್ಟಿ ಆ್ಯಪ್ ಮೂಲಕ ತಿಳಿಯಲು ಮೊದಲು ಪ್ಲೇ ಸ್ಟೋರ್ ನಿಂದ Display Tester ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿದ ನಂತರ ಅದನ್ನು ತೆರೆದು, ‘Tests’ ವಿಭಾಗದ ಮೇಲೆ ಟ್ಯಾಪ್ ಮಾಡಬೇಕು. ಈ ಪ್ರಕ್ರಿಯೆಯ ಬಳಿಕ Defective pixel detection ಆಯ್ಕೆ ಮೇಲೆ ಟ್ಯಾಪ್ ಮಾಡಿದರೆ, ಸ್ಕ್ರೀನ್ ಮೇಲೆ ವಿವಿಧ ಬಣ್ಣ ಕಾಣಿಸುತ್ತದೆ. ಕಪ್ಪು ಬಣ್ಣವನ್ನು ಬರುವವರೆಗೂ ಸ್ಕ್ರಾಲ್ ಮಾಡಬೇಕು.

ಡಿಸ್ಪ್ಲೇಯು ತುಂಬಾ ಪ್ರಕಾಶಮಾನವಾಗಿದೆಯೇ ಅಥವಾ ಅದು ಆಫ್ ಆಗಿರುವಂತೆ ಗೋಚರಿಸುತ್ತದೆಯೇ ಎಂದು ಪರಿಶೀಲನೆ ನಡೆಸಬೇಕು. ಡಿಸ್‌ಪ್ಲೇ ಆಫ್ ಆಗಿರುವಂತೆ ಕಂಡು ಬಂದರೆ ಫೋನ್ AMOLED ಅಥವಾ OLED ಪ್ಯಾನೆಲ್ ಅನ್ನು ಹೊಂದಿರುವ ಸಾಧ್ಯತೆ ಇದೆ.
ಪ್ರತಿ ಮೊಬೈಲ್ ಅದರದ್ದೇ ಆದ ವಿಶೇಷತೆಯನ್ನೂ ಒಳಗೊಂಡಿರುತ್ತದೆ. ಜನರ ಅಭಿರುಚಿಗೆ ತಕ್ಕಂತೆ ಕ್ಯಾಮರಾ , ಬ್ಯಾಟರಿ, ಡಿಸ್‌ಪ್ಲೇ ಸೆಟ್ಟಿಂಗ್ ನಲ್ಲೂ ಬದಲಾವಣೆಗಳನ್ನೂ ಮೊಬೈಲ್ ತಯಾರಿಕಾ ಕಂಪನಿಗಳು ಮಾಡುತ್ತ ಜನರ ಮನದಲ್ಲಿ ಸ್ಥಾನ ಪಡೆದಿದೆ.

Leave A Reply

Your email address will not be published.