ಬರೋಬ್ಬರಿ 300 ಚಕ್ರಗಳ ಮ್ಯಾರಥಾನ್ ಉದ್ದದ ಈ ಬೃಹತ್ ಲಾರಿಯ ಮೈಲೇಜ್ ಕೇಳಿದ್ರೆ ನೀವ್ ಸುಸ್ತಾಗ್ತೀರಿ!

ವಿಶ್ವದ ಬೃಹತ್ ಉದ್ದವಾಗಿರುವ ಟ್ರೈಲರ್ ನ ವಿಚಾರ ಇದೀಗ ಬಾರಿ ಟ್ರೆಂಡಿಂಗ್ ನಲ್ಲಿದ್ದು, ಈ ಅದ್ಭುತ ದೈತ್ಯ ವಾಹನವನ್ನು ನೋಡಲು ಜನ ಮುಗಿಬೀಳುತ್ತಿದ್ದಾರೆ.
ಅತಿ ಉದ್ದದ ಟ್ರಕ್ ಎಂದಾಗ ನೀವು ಊಹಿಸಲು ಹೊರಟರೆ, ಜಾಸ್ತಿ ಎಂದರೆ ಒಂದು 10ಲಾರಿಗಳನ್ನು ನಿಲ್ಲಿಸಿದಾಗ ಇರುವಷ್ಟು ದೊಡ್ಡದಾಗಿರಬಹುದೆಂದು ನೀವು ಯೋಚಿಸುತ್ತಿರಬಹುದು. ಆದರೆ, ವಿಶಾಲವಾದ ಇಡೀ ರಸ್ತೆಯನ್ನೇ ಆವರಿಸುವಂತಿರುವ ಈ ದೈತ್ಯ ವಾಹನದ ಉದ್ದ ಕೇಳಿದರೆ ನೀವು ನಿಬ್ಬೆರಗಾಗುವುದರಲ್ಲಿ ಸಂದೇಹವಿಲ್ಲ.

 

ಸಾಮಾನ್ಯವಾಗಿ ಅತಿ ದೊಡ್ದ ವಾಹನಗಳಿಗೆ ಹೆಚ್ಚೆಂದರೆ 16- 18ಚಕ್ರಗಳಿರುವುದನ್ನು ನೀವು ಗಮನಿಸಿರಬಹುದು. ಆದರೆ ಈ ದೈತ್ಯ ವಾಹನ ಬರೋಬ್ಬರಿ 300 ಟೈರುಗಳನ್ನು ಹೊಂದಿದೆ. 300ಟೈರುಗಳೆಂದರೆ ಅದೆಷ್ಟು ಸ್ಥಳವನ್ನು ಈ ಟ್ರಕ್ ಆಕ್ರಮಿಸಿರಬಹುದು!!..ಅಷ್ಟೆ ಅಲ್ಲ 1ಕಿ. ಮೀ. ಚಲಾಯಿಸಲು 3 ಲೀಟರ್ ಡೀಸೆಲ್ ನ ಮೈಲೇಜ್ ನೀಡುತ್ತದೆ. ಅಷ್ಟೆ ಅಲ್ಲದೆ ಈ ಯಂತ್ರವನ್ನು ವಿಶ್ವದ ಅತಿ ಉದ್ದದ ಟ್ರೈಲರ್ ಎಂದು ಗುರುತಿಸಲಾಗಿದೆ.

ಈ ಯಂತ್ರವು ವಾಸ್ತವವಾಗಿ ವಿದ್ಯುತ್ ಉತ್ಪಾದನೆಯಲ್ಲಿ ಬಳಸುವ ಸಲಕರಣೆಗಳ ಒಂದು ಭಾಗವಾಗಿದ್ದು, ಹಲವಾರು ಟ್ರಕ್‌ಗಳು ಮತ್ತು 256 ಟೈರ್‌ಗಳೊಂದಿಗೆ ಚಲಿಸಲು ಹಾಸಿಗೆಯನ್ನು ಕೂಡ ರಚಿಸಲಾಗಿದೆ. ಗಾತ್ರ ಮತ್ತು ತೂಕದಲ್ಲಿ ದೈತ್ಯಾಕಾರವಾಗಿರುವುದರಿಂದ 1 ಕಿ.ಮೀ ಪ್ರಯಾಣಿಸಲು 4 ಲೀಟರ್ ಇಂಧನದ ಅವಶ್ಯಕತೆಯಿದ್ದು, ಸಾರಿಗೆಯಲ್ಲಿ ತೊಡಕಾಗದಂತೆ 28 ಮಂದಿ ಸಿಬ್ಬಂದಿ ಮೇಲ್ವಿಚಾರಣೆಯ ಜವಾಬ್ಧಾರಿ ವಹಿಸಿದ್ದಾರೆ.

ಈ ಯಂತ್ರವನ್ನು ಅದರ ಗಮ್ಯಸ್ಥಾನಕ್ಕೆ ಸಾಗಿಸುವ ಜವಾಬ್ದಾರಿಯನ್ನು ನಿರ್ವಾಹಕರು ಹೊಂದಿದ್ದು, ಸದ್ಯ ಹರಿದ್ವಾರದಿಂದ ಗುಜರಾತ್‌ನ ಕಾಂಡ್ಲಾ ಬಂದರು ಎಂಬ ಸ್ಥಳಕ್ಕೆ ಪ್ರಯಾಣಿಸುತ್ತದೆ. ವಿದ್ಯುತ್ ಸ್ಥಾವರವನ್ನು ಆರಂಭಿಸಲು ಬೇಕಾದ ಸಲಕರಣೆಗಳ ಒಂದು ಭಾಗ ವಾಗಿದ್ದು,ಯಂತ್ರಕ್ಕೆ ಟ್ರಕ್‌ಗಳನ್ನು ಮೊದಲ ಮತ್ತು ಕೊನೆಯ ಭಾಗದಲ್ಲಿ ಜೋಡಿಸಲಾಗಿದ್ದು, ಇದು ಈ ಎಲ್ಲಾ ಟ್ರಕ್‌ಗಳ ಸಂಯೋಜನೆಯಾಗಿದ್ದಾಗ ಮಾತ್ರ ಚಲಿಸಲು ಸಾದ್ಯವಾಗುತ್ತದೆ. ಹಾಗಾಗಿ ಇದು ಯಂತ್ರವಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಕುಸುಮ್ ಗೋಯತ್ ಅವರ ಯೂಟ್ಯೂಬ್ ಚಾನೆಲ್‌ನಿಂದ ಸದ್ದು ಮಾಡುತ್ತಿರುವ ಈ ಟ್ರಕ್ ಕೆಲಸ ಕಾರ್ಯಗಳನ್ನ ಸುಲಲಿತ ಗೊಳಿಸುವ ನಿಟ್ಟಿನಲ್ಲಿ ರೂಪಿಸಲಾಗಿದೆ.

Leave A Reply

Your email address will not be published.