ಸ್ಪಂದನ ಮೈಸೂರು ವತಿಯಿಂದ ಪರಿಸರ ಸ್ನೇಹಿ ಗಣಪನ ಪ್ರತಿಷ್ಟಾಪನೆ-ವಿಸರ್ಜನೆ!!

ಸ್ಪಂದನ ವತಿಯಿಂದ” ಪರಿಸರ ಗಣಪ ” ಚಂದನ ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿ 12 ದಿವಸಗಳ ಕಾಲ ಪೂಜೆ ಸಲ್ಲಿಸಿ ಗಂಡ ಬೇರುಂಡ ಉದ್ಯಾನ ವನದಲ್ಲಿ ವಿಸರ್ಜಿಸಲಾಯಿತು.
“ಪರಿಸರ ಸ್ನೇಹಿ ” ಗಣಪನ ಸ್ಪರ್ಧೆಯನ್ನು ಕಳೆದು ಎರಡು
ವರ್ಷದಿಂದಲೂ ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಣೆ ಮಾಡುತ್ತಿರುವುದು ಸರಿಯಷ್ಟೆ. ಸ್ಪಂದನದಿಂದ ಪರಿಸರ ಜಾಗೃತಿ ಮೂಡಿಸಲು ಇದೊಂದು ಪ್ರಯತ್ನವಷ್ಟೆ.

ಗಂಡ-ಬೇರುಂಡ ಉದ್ಯಾನ ವನದಲ್ಲಿ ಈ ಬಾರಿಯು ಗಣಪತಿ ಮೂರ್ತಿಯನ್ನು ವಿಸರ್ಜಿಸಲಾಯಿತು .
ವಿಸರ್ಜಿಸಿದ ನೀರನ್ನು ಗಿಡಗಳಿಗೆ ಹಾಕಲಾಯಿತು
ಈ ಶುಭಸಂದರ್ಭದಲ್ಲಿ ಮೂವರಿಗೆ ಗಾಲಿ ಕುರ್ಚಿಗಳನ್ನು
ಜೆಎಸ್ ಎಸ್ ‌ ಅಂಗವಿಕಲರ ಪಾಲಿಟೆಕ್ನಿಕ್ ‌ನಲ್ಲಿ ವ್ಯಾಸಂಗ ಮಾಡುತ್ತಿರುವ ಶ್ರೀರಾಚಪ್ಪ, ಶ್ರೀ ಕೃಷ್ಣಮೂರ್ತಿ, ಶ್ರೀ ಸಂಜಯ್ ವಿಕಲಚೇಚನರಿಗೆ ವಿತರಿಸಲಾಯಿತು.
ಮುಖ್ಯಅತಿಥಿಗಳಾಗಿ ಡಾ.ಪ್ರಭುಲಿಂಗಸ್ವಾಮಿ,ಡಾ.ದಿನೇಶ್
ಭಾಗವಹಿಸಿದ್ದರು.

ವಿಶೇಷ ಆಹ್ವಾನಿತರಾಗಿ ಡಾ. ಅಮೂಲ್ಯ
ಡಾ.ದೀಪು ಚೆಂಗಪ್ಪ ಚಾಮರಾಜನಗರದ ಮುಖಂಡರಾದ ಶ್ರೀ‌ಸ್ವಾಮಿ , ‌ಸಮಾಜ ಮುಖಿಗಾಳಾದ ಶ್ರೀ ಗಂಗರಾಜು ,ಹಿರಿಯರಾದ ಶ್ರೀ ರಾಜಣ್ಣ , ಚಂದ್ರಪ್ಪ, ಡಾ.ಕೃಷ್ಣಮೂರ್ತಿ, ಲಕ್ಷ್ಮಣ್ ,ನರಸಿಂಹ ಮೂರ್ತಿ,ಪ್ರಕಾಶ್, ನಾಗರಾಜ್,ಪ್ರಸಾದ್,ಗಂಗಾದರ್
ವಿನಯ್,ನಿರಂಜನ್,ಜಗದೀಶ್ ಮುಂತಾದ ಗಣ್ಯರು ಮಕ್ಕಳು ಭಾಗವಹಿಸಿದ್ದರು.

ಗಾಲಿ ಕುರ್ಚಿ ಪ್ರಯೋಜಕರು
ಡಾ.ಮರುಳ ಸಿದ್ದಪ್ಪ
ಡಾ. ಮಂಜುಳ ಪಾಟಿಲ್
ಶ್ರೀ ರವೀಶ್
‌ಈ ಸಂಧರ್ಭದಲ್ಲಿ ಡಾ.ಮರುಳಸಿದ್ದಪ್ಪ
ಅವರಿಗೆ ವೈದ್ಯಕೀಯ ಸೇವೆಯನ್ನು ಪರಿಗಣಿಸಿ ಸನ್ಮಾಸಿಲಾಯಿತು. ಪ್ರಾರಂಭದಲ್ಲಿ ಗಂಡ -ಭೇರುಂಡ
ಉದ್ಯಾನವನದಲ್ಲಿ ಗಿಡಗಳಿಗೆ ನೀರುಣಿಸಿ
ಬೆಳಸಿದ ಕೃಷ್ಣಪ್ಪರವರಿಗೂ ಸಹ ಸನ್ಮಾಸಲಾಯಿತು.
ಪಾಲ್ಗೊಂಡ ಭಕ್ತರಿಗೆ ಪ್ರಸಾದ ನೀಡುವುದರೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

Leave A Reply

Your email address will not be published.