ನರೇಂದ್ರ ಮೋದಿ ಪ್ರಬಲ ಪ್ರಧಾನಿ, ದೇಶಕ್ಕೆ ದುರ್ಬಲ ಪ್ರಧಾನಿಯ ಅಗತ್ಯವಿದೆ – ಅಸಾದುದ್ದೀನ್ ಓವೈಸಿ ಹೇಳಿಕೆ

ಮುಂದಿನ ಲೋಕಸಭಾ ಚುನಾವಣೆಯಲ್ಲಿ ದೇಶಕ್ಕೆ ದುರ್ಬಲ ಪ್ರಧಾನಿ ಮತ್ತು ಕಿಚಡಿ – ಬಹು ಪಕ್ಷ ಸರ್ಕಾರದ ಅಗತ್ಯವಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಶನಿವಾರ ಹೇಳಿದ್ದಾರೆ. ಆ ಮೂಲಕ ಓವೈಸಿ ಅವರು ಪ್ರಧಾನಿ ಮೋದಿಯವರನ್ನು ದೇಶದ ಪ್ರಬಲ ಪ್ರಧಾನಿ ಎಂದು ಒಪ್ಪಿಕೊಂಡಂತೆ ಆಗಿದೆ.

ಪ್ರಬಲ ಪ್ರಧಾನ ಮಂತ್ರಿ ಕೇವಲ ಪ್ರಬಲ ಜನರಿಗೆ ಮಾತ್ರ ಸಹಾಯ ಮಾಡುತ್ತಾರೆ, ದುರ್ಬಲ ವರ್ಗದವರು ಪ್ರಧಾನಿಯಾದರೆ, ಆ ವರ್ಗದವರಿಗೆ ಅನುಕೂಲವಾಗಲಿದೆ ಎಂದರು. ಆದುದರಿಂದ ದೇಶಕ್ಕೆ ದುರ್ಬಲ ಪ್ರಧಾನಿ ಬೇಕಾಗಿದೆ ಎಂದಿದ್ದಾರೆ. ಓವೈಸಿ ಅವರ ‘ ದುರ್ಬಲ ಪ್ರಧಾನಿ ‘ ಹೇಳಿಕೆ ಈಗ ಟ್ರೊಲ್ ಆಗ್ತಿದೆ.


Ad Widget

Ad Widget

Ad Widget

Ad Widget

Ad Widget

Ad Widget

ಬಿಲ್ಕಿಸ್ ಬಾನೊ ಪ್ರಕರಣದ ಆರೋಪಿಗಳ ಬಿಡುಗಡೆ ವಿಚಾರದಲ್ಲಿ ಮೌನವಾಗಿದ್ದ ಆಮ್ ಆದ್ಮಿ ಪಕ್ಷ ಗುಜರಾತ್ ನಲ್ಲಿನ ಆಡಳಿತಾರೂಢ ಬಿಜೆಪಿ ಪಕ್ಷಕ್ಕಿಂತ ಭಿನ್ನವಾಗಿಲ್ಲ ಎಂದು ವಾಗ್ದಾಳಿ ನಡೆಸಿದರು. ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಎಐಎಂಐಎಂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಅವರು ಮಾಹಿತಿ ನೀಡಿದರು.

ಜವಹರ್ ಲಾಲ್ ನೆಹರು ನಂತರ ಪ್ರಧಾನಿ ಮೋದಿ ಪ್ರಬಲ ಪ್ರಧಾನಿ. ಅವರು ನಿರುದ್ಯೋಗ, ಹಣದುಬ್ಬರ, ಚೀನಾದ ಆಕ್ರಮಣ, ಉದ್ಯಮಿಗಳಿಗೆ ಬ್ಯಾಂಕ್ ಸಾಲ ಮನ್ನಾ ಬಗ್ಗೆ ಪ್ರಶ್ನಿಸಿದಾಗ ವ್ಯವಸ್ಥೆಯನ್ನು ದೂರುತ್ತಾರೆ. ಪ್ರಬಲ ಪ್ರಧಾನಿ ಏನು ಅಂತಾ ನಾವು ನೋಡಿದ್ದೇವೆ. ಈಗ ದೇಶಕ್ಕೆ ದುರ್ಬಲ ಪ್ರಧಾನಿ ಅಗತ್ಯವಿದೆ. ಇದರಿಂದ ದುರ್ಬಲ ಜನರಿಗೆ ಅನುಕೂಲವಾಗಲಿದೆ. ಅಂತೆಯೇ ದೇಶಕ್ಕೆ ಬಹು ಪಕ್ಷಗಳ ಕಿಚಡಿ ಸರ್ಕಾರದ ಅಗತ್ಯವಿದೆ. ಇದಕ್ಕಾಗಿ ಮುಂಬರುವ ಚುನಾವಣೆಯಲ್ಲಿ ಪ್ರಯತ್ನಿಸಬೇಕಾಗಿದೆ ಎಂದರು.

ದೇಶಕ್ಕೆ ದುರ್ಬಲ ಪ್ರಧಾನಿ ಬೇಕಿದೆ ಅನ್ನುವ ಓವೈಸಿ ಹೇಳಿಕೆ ಕೇಳಿ ಟ್ರೊಳಿಗರು ಕೆಲಸ ಕೈಗೆತ್ತಿ ಕೊಂಡಿದ್ದಾರೆ. ವಿರೋಧ ಪಕ್ಷಗಳಲ್ಲಿ ಸಾಲು ಸಾಲು ದುರ್ಬಲ ಪ್ರಧಾನಿಗಳ ಅಭ್ಯರ್ಥಿಗಳೇ ಇದ್ದಾರೆ, ಕ್ಯಾಂಡಿಡೇಚರ್ ಸಮಸ್ಯೆ ಇಲ್ಲ ಎಂದು ಕಾಲೆಲಿದಿದ್ದಾರೆ.

error: Content is protected !!
Scroll to Top
%d bloggers like this: