ಪ್ರವೀಣ್ ನೆಟ್ಟಾರ್ ಸಹಿತ ಹಿಂದೂಗಳು ಹತ್ಯೆಯಾದಾಗ ರಾಹುಲ್ ಗಾಂಧಿ ಯಾಕೆ ಮಾತಾಡಿಲ್ಲ ? – ಸ್ಮೃತಿ ಇರಾನಿ ಆಕ್ರೋಶ !

0 5

ಪುತ್ತೂರಿನ ಬಿಜೆಪಿ ಕಾರ್ಯಕರ್ತ ಪ್ರವೀಣ ನೆಟ್ಟಾರ್ ರವರನ್ನು ಎರಡೆರಡು ಬಾರಿ ಬಿಜೆಪಿ ಜನಸ್ಪಂದನಾ ಕಾರ್ಯಕ್ರಮದಲ್ಲಿ ನೆನಪು ಮಾಡಿಕೊಳ್ಳಲಾಯಿತು. ಸರ್ಕಾರದ ಮೂರು ವರ್ಷಗಳ ಸಾಧನೆಯನ್ನು ಮುಂದಿಟ್ಟುಕೊಂಡು ಇಂದು ರಾಜ್ಯ ಸರ್ಕಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಜನಸ್ಪಂದನ ಸಮಾವೇಶವನ್ನು ಮಾಡುತ್ತಿದೆ. ಈ ನಡುವೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಿದ್ದಗಂಗಾ ಶ್ರೀ, ಕೋಲಾರ ದೇವತೆ ಸೇರಿದಂಥೆ ಇತರೆ ಗಣ್ಯರನ್ನು ನೆನಪು ಮಾಡಿಕೊಂಡ್ರು. ಜತೆಗೆ ಅವರಿಗೆ ಪ್ರವೀಣ್ ನೆಟ್ಟಾರ್ ನೆನಪಾದರು.

ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆಗೀಡಾಗಿದ್ದಾರೆ. ಈ ಮೂಲಕ ಭಯೋತ್ಪಾದನೆ ಹರಡಲು ಯತ್ನಿಸುತ್ತಿದ್ದಾರೆ. ಹಿಂದೂಗಳನ್ನು ಹತ್ಯೆ ಮಾಡಿದಾಗ ರಾಹುಲ್‌ ಗಾಂಧಿ ಮಾತನಾಡಿಲ್ಲ. ಪ್ರವೀಣ್ ನೆಟ್ಟಾರ್ ಹತ್ಯೆ ಆದಾಗ ಕೂಡ ರಾಹುಲ್ ಗಾಂಧಿ ಘಟನೆಯನ್ನು ಖಂಡಿಸಿಲ್ಲ, ಘಟನೆಯ ಬಗ್ಗೆ ಒಂದು ಪ್ರತಿಭಟನೆಯ ನುಡಿ ಬಿಚ್ಚಿಲ್ಲ. ಒಂದೇ ಒಂದು ಪ್ರಶ್ನೆಯನ್ನು ಕೇಳಿಲ್ಲ. ಆತಂಕವಾದಿಗಳ ಪರ ಕಾಂಗ್ರೆಸ್‌ ನಿಲ್ಲುತ್ತಿದೆ ಅನ್ನುವುದು ಇಲ್ಲಿಗೆ ಸ್ಪಷ್ಟ. ರಾಷ್ಟ್ರದ ಹಿತಕ್ಕಾಗಿ ಗಾಂಧಿ ಕುಟುಂಬ ಏನು ಮಾಡಿದೆ. ಕೋವಿಡ್‌ ವೇಳೆ ಬಡವರಿಗೆ ನೆರವಿಗೆ ನಿಂತಿದೆ. ಮೋದಿ ಸರ್ಕಾರ ಬಡವರಿಗೆ ಉಚಿತ ರೇಷನ್‌ ನೀಡಿದೆ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರನ್ನು ಅವಹೇಳನ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇದೇ ವೇಳೆ ಅವರು ಮಾತನಾಡುತ್ತ ಈ ಬಾರಿ ಈ ರಾಜ್ಯದಲ್ಲಿ ಮತ್ತೆ ಕರ್ನಾಟಕವನ್ನು ಮತ್ತೆ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರುವುದಾಗಿ ಪ್ರಮಾಣ ಮಾಡಿ ಅಂತ ಹೇಳಿದರು. ಕಾಂಗ್ರೆಸ್‌ ದೇಶವನ್ನು ಒಡೆದು ಆಳೋದಕ್ಕೆ ಮುಂದಾಗಿದೆ ಅಂತ ಭಾರತ ಜೋಡೋ ಕಾರ್ಯಕ್ರಮದ ವಿರುದ್ದ ಕಿಡಿಕಾರಿದರು.

Leave A Reply