ಆಟವಾಡುತ್ತಿದ್ದ ಬಾಲಕನ ಮೇಲೆ ದಾಳಿ ಮಾಡಿದ ಪಿಟ್ ಬುಲ್ ನಾಯಿ | ಮುಖದ ಭಾಗವನ್ನೇ ಕಚ್ಚಿರುವ ದಾಳಿಯ ವೀಡಿಯೋ ವೈರಲ್

ಪಿಟ್ ಬುಲ್ ನಾಯಿ ಅದೆಷ್ಟು ಡೇಂಜರಸ್ ಅದ್ರೆ ಮನೆ ಮಾಲೀಕರನ್ನು ಬಿಡುವುದಿಲ್ಲ ಎನ್ನುವುದಕ್ಕೆ ಈ ಹಿಂದೆ ಲಖನೌದ ಕೈಸರ್​ಬಾಘ್​ನಲ್ಲಿ ಸುಶೀಲಾ ತ್ರಿಪಾಠಿ ಎಂಬುವವರನ್ನು ಕೊಂದಿದ್ದೆ ಸಾಕ್ಷಿ. ಇದೀಗ ಮತ್ತೊಂದು ಪಿಟ್ ಬುಲ್ ದಾಳಿಗೆ ಬಾಲಕನೋರ್ವ ತುತ್ತಾಗಿದ್ದಾನೆ.

ದಾಳಿಗೊಳಗಾದ ಬಾಲಕನನ್ನು ಪುಷ್ಪ್​ ತ್ಯಾಗಿ ಎಂದು ಗುರುತಿಸಲಾಗಿದೆ.

ಹೌದು. ಲಖನೌ ಪಾರ್ಕ್​ನಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ಪಿಟ್​ಬುಲ್​ ನಾಯಿಯೊಂದು ದಾಳಿ ಮಾಡಿದ್ದು, ಬಾಲಕನ ಮುಖದ ಮೇಲೆ ಸುಮಾರು 200 ಗಾಯಗಳಾಗಿವೆ.

ಹುಡುಗಿಯೊಬ್ಬಳು ಪಿಟ್​ಬುಲ್​ ನಾಯಿಯೊಂದಿಗೆ ಪಾರ್ಕ್​ನಲ್ಲಿ ವಾಕಿಂಗ್​ ಮಾಡುವಾಗ ಅಲ್ಲಿಯೇ ಆಟವಾಡುತ್ತಿದ್ದ ಬಾಲಕನ ಮೇಲೆ ಪಿಟ್​ಬುಲ್​ ದಾಳಿ ಮಾಡಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಘಟನೆ ಕಳೆದ ವಾರ ಘಾಜಿಯಾಬಾದ್​ನಲ್ಲಿ ನಡೆದಿದೆ.

ಒಬ್ಬ ವ್ಯಕ್ತಿ ಬಾಲಕನನ್ನು ರಕ್ಷಿಸುತ್ತಿರುವುದು ವಿಡಿಯೋದಲ್ಲಿದೆ. ಅಷ್ಟರಲ್ಲಾಗಲೇ ಪುಷ್ಪ್ ಮುಖದ ಒಂದು ಭಾಗವನ್ನು ನಾಯಿ ಕಚ್ಚಿತ್ತು. ಯಾವುದೇ ಪರವಾನಗಿ ಅಥವಾ ನೋಂದಣಿ ಇಲ್ಲದೆ ಪ್ರಾಣಿಯನ್ನು ಸಾಕಿದ ನಾಯಿಯ ಮಾಲೀಕರಿಗೆ 5000 ರೂ ದಂಡ ವಿಧಿಸಲಾಗಿದೆ. ಈಗಾಗಲೇ ಹಲವು ದೇಶಗಳಲ್ಲಿ ನಿಷೇಧ ಹೇರಿರುವ ನಾಯಿಯನ್ನು ಎಲ್ಲಾ ದೇಶಗಳಲ್ಲಿ ಬ್ಯಾನ್ ಮಾಡುವುದು ಅವಶ್ಯವಾಗಿದೆ.

Leave A Reply

Your email address will not be published.