ಗಣೇಶನ ನೋಡಲಿಕ್ಕೆ ಬಂದ ರಶ್ಮಿಕ ಮಂದಣ್ಣ | ಯಾವ ಬಟ್ಟೆ ತೊಟ್ಟಿದ್ದಳು ಗೊತ್ತಾ?
ರಶ್ಮಿಕಾ ಮಂದಣ್ಣ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಹೀರೋಯಿನ್ ಅಂತಾನೆ ಹೇಳಬಹುದು. ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಯಲ್ಲಿ ಕೂಡ ಸಾಲು ಸಾಲಾಗಿ ಹಿಟ್ ಸಿನಿಮಾಗಳನ್ನು ನೀಡಿದ ಹೀರೋಯಿನ್ ರಶ್ಮಿಕ ಮಂದಣ್ಣ.
ಕಿರಿಕ್ ಪಾರ್ಟಿಯಿಂದ ಪರಿಚಯವಾದ ಕೊಡಗಿನ ಬೆಡಗಿ ಇದೀಗ ಕನ್ನಡ ಮಾತ್ರವಲ್ಲದೆ ಇನ್ನಿತರ ಭಾಷೆಯಲ್ಲು ತನ್ನದೇ ಆದ ಛಾಪನ್ನ ಮೂಡಿಸುತ್ತಿದ್ದಾರೆ.
ಉದಾಹರಣೆಗೆ ರಶ್ಮಿಕಾ ಮಂದಣ್ಣ ಟಾಲಿವುಡ್ನ ನಂಬರ್ ಒನ್ ನಾಯಕಿಯಾಗಿದ್ದಾರೆ. ಪುಷ್ಪ ಚಿತ್ರದ ಮೂಲಕ ನ್ಯಾಷನಲ್ ಕ್ರಶ್ ಆದರು. ಚಲೋ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಯುವ ಪ್ರೇಕ್ಷಕರ ಹೃದಯ ಕದ್ದಿದ್ದಾರೆ.
ಆ ನಂತರ ಗೀತಾ ಗೋವಿಂದಂ ಸಿನಿಮಾದ ಮೂಲಕ ಉತ್ತಮ ಹಿಟ್ ಸಿಕ್ಕಿತ್ತು. ಇದೀಗ ಬಾಲಿವುಡ್ ನಲ್ಲಿ ಗಾಡ್ ಫಾದರ್ ಎಂಬ ಹೊಸ ಸಿನಿಮಾವನ್ನೂ ಕೊಡಲು ಸಜ್ಜಾಗಿದ್ದಾರೆ. ಮುಂಬೈನಲ್ಲಿ ನಡೆದ ಗುಡ್ ಬೈ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ರಶ್ಮಿಕಾ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸೌತ್ ನಟಿ ಮನಮೋಹಕ ಉಡುಗೆಯಲ್ಲಿ ಮಸಾಲೆಯುಕ್ತವಾಗಿ ಕಾಣಿಸಿಕೊಂಡು ಎಲ್ಲರು ಗಮನ ಸೆಳೆದರು. ಕೋಟ್ ಮಾದರಿಯ ಶ್ರಗ್ ಟಾಪ್ನೊಂದಿಗೆ ಮಲ್ಟಿ-ಕಲರ್ ಪ್ರಿಂಟೆಡ್ ಲೆಹೆಂಗಾವನ್ನು ಧರಿಸಿ ಅವರು ಅದ್ಭುತವಾಗಿ ಕಾಣುತ್ತಿದ್ದರು. ರಶ್ಮಿಕಾ ಅವರ ಇತ್ತೀಚಿನ ಫೋಟೋಗಳು ಈಗ ವೈರಲ್ ಆಗುತ್ತಿವೆ.
ಟ್ರೇಲರ್ ಬಿಡುಗಡೆ ಕಾರ್ಯಕ್ರಮದ ನಂತರ, ರಶ್ಮಿಕಾ ನಗರದ ಐತಿಹಾಸಿಕ ಲಾಲ್ ಬಗ್ಚಾ ರಾಜಾ ಪಾಂಡಲ್ನಲ್ಲಿ ಗಣಪತಿಯ ದರ್ಶನ ಪಡೆದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಖತ್ ವೈರಲ್ ಆಗಿದೆ.