ಶಿವಮೊಗ್ಗದಲ್ಲಿ ರಾಷ್ಟ್ರ ಲಾಂಛನದ ಮೇಲೆ ಕೇಸರಿ ಧ್ವಜ

ಹಿಂದೂ ಮಹಾಗಣಪತಿ ಶೋಭಾಯಾತ್ರೆ ನಡೆಸಲು ದೊರಕಿದ ಅನುಮತಿ ಬೆನ್ನಲ್ಲೇ ಕೇಸರಿ ಧ್ವಜಗಳನ್ನು ಹಾರಿಸುವ ಮೂಲಕ ಅದ್ದೂರಿಯಾಗಿ ಗಣೇಶ ಮೆರವಣಿಗೆ ಮಾಡೋದಕ್ಕೆ ಶಿವಮೊಗ್ಗದಲ್ಲಿ ಸಕಲ ಸಿದ್ಧತೆ ನಡೆಸಲಾಗಿತ್ತು.

ಹಾಗಾಗಿ ಈ ಹಿನ್ನೆಲೆಯಲ್ಲಿ ಇದೀಗ ನಗರದಾದ್ಯಂತ ಪ್ರತಿ ಬೀದಿ ಬೀದಿಯಲ್ಲೂ ಕೇಸರಿ ಧ್ವಜಗಳನ್ನು ಕಟ್ಟಿದ್ದು, ಎಲ್ಲಾ ಕಡೆನೂ ಕೇಸರಿಮಯವಾಗಿದೆ. ಅದರಲ್ಲೂ ಕೇಸರಿ ಮಯಗೊಳಿಸೋ ಬರದಲ್ಲಿ ಬಿಜೆಪಿ ಕಾರ್ಯಕರ್ತರು ಮಹಾ ಯಡವಟ್ಟು ಮಾಡಿದ್ದಾರೆ. ರಾಷ್ಟ್ರಲಾಂಛನದ ಮೇಲೂ ಕೇಸರಿ ಧ್ವಜ ಹಾರಿಸಿದ್ದಾರೆ. ಈ ಬಗ್ಗೆ ಇದೀಗ ರಾಷ್ಟ್ರಲಾಂಛನಕ್ಕೆ ಅಗೌರವ ತೋರಿದ್ದಾರೆ ಎಂದು ತಿಳಿದಿದೆ.

ರಾಷ್ಟ್ರಲಾಂಛನದ ಮೇಲೆ ರಾಷ್ಟ್ರ ಧ್ವಜ ಹಾರಿಸುವ ಬದಲು ಕೇಸರಿ ಧ್ವಜ ಹಾರಿಸಿರುವುದು ಭಾರೀ ವಿವಾದವೇ ಸೃಷ್ಟಿಯಾಗಿದೆ. ಹಿಂದೂ ಮಹಾಗಣಪತಿ ಶೋಭಾಯಾತ್ರೆ ಭರದಲ್ಲಿ ಈ ವಿವಾದ ನಡೆದಿದೆ.

Leave A Reply

Your email address will not be published.