Kidney problem : ನಿಮ್ಮ ದೇಹದಲ್ಲೇನಾದರೂ ಬದಲಾವಣೆ ಕಾಣಿಸುತ್ತಿದೆಯಾ ? ಹಾಗಾದರೆ ಎಚ್ಚರ!!!

ನಮ್ಮ ದೇಹದ ಅತಿ ಪ್ರಮುಖ, ವೈಟಲ್ ಅನ್ನುವ ಅಂಗಗಳಲ್ಲಿ ಹೃದಯ ಮತ್ತು ಮೆದುಳಿನಂತೆಯೇ ಇನ್ನೊಂದು ಅಂಗ ಅಂದರೆ ಅದು ಮೂತ್ರಪಿಂಡ. ಸಾಮಾನ್ಯವಾಗಿ ಕಿಡ್ನಿ ಎಂದು ಇಂಗ್ಲಿಷಿನಲ್ಲಿ ಕರೆಯಲ್ಪಡುವ ಈ ಅಂಗದ ಸಮಸ್ಯೆ ದಿನನಿತ್ಯ ಪದೇ ಪದೇ ಕಂಡು ಕೇಳಿಬರುತ್ತಿರುವ ಸಮಸ್ಯೆ.

ಅನೇಕ ಬಾರಿ ನಮ್ಮ ಕಿಡ್ನಿಯಲ್ಲಿ ಸಮಸ್ಯೆ ಇದೆ ಮತ್ತು ಅದರ ಬಗ್ಗೆ ನಮಗೆ ತಿಳಿದಿಲ್ಲ, ಆದರೆ ಅದರ ಲಕ್ಷಣಗಳು ಹೆಚ್ಚಾದಾಗ ಅದು ಭಯಾನಕ ನೋವಿಗೆ ಕಾರಣವಾಗುತ್ತದೆ. ಈ ನೋವು ಸಹಿಸಿಕೊಳ್ಳುವುದು ಸುಲಭವಲ್ಲ. ಕಿಡ್ನಿಯಲ್ಲಿ ಯಾವುದೇ ಸಮಸ್ಯೆ ಉಂಟಾದಾಗ, ನಮ್ಮ ದೇಹದಲ್ಲಿ ಅನೇಕ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ, ಅದನ್ನು ಗುರುತಿಸಬೇಕು.

ಏಷ್ಟೋ ಬಾರಿ ರೋಗ ಉಲ್ಬಣ ಆದ ನಂತರ ಮಾತ್ರ ಮೂತ್ರ ಪಿಂಡ ವಿಫಲ ಆದುದು ಕೇಳಿಬರುತ್ತದೆ. ಆದರೆ ಅಷ್ಟರಲ್ಲಿ ರೋಗಿಯು ಸಾವು ಬದುಕಿನ ನಡುವೆ ಹೊರಾಡಬೇಕಾಗುತ್ತದೆ. ಕೊನೆಗೆ, ‘ ಕಿಡ್ನಿ ಫೇಲ್ಯೂರ್ ‘ ಆಯ್ತಂತೆ ಅಂತ ಜನರು ಮಾತಾಡುವಂತಾಗುತ್ತದೆ.
ಕಿಡ್ನಿ ವೈಫಲ್ಯ ಆಗಲು ಕಾರಣಗಳು:

ಅತಿಯಾದ ಉಪ್ಪಿನ ಸೇವನೆ, ರಕ್ತದೊತ್ತಡವನ್ನು ಅಧಿಕಗೊಳಿಸುವ ಸಾದ್ಯತೆ ಇದೆ. ಅಲ್ಲದೇ ಮೂತ್ರಪಿಂಡಗಳ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡುತ್ತದೆ.ಧೂಮಪಾನ ಮತ್ತು ಮದ್ಯಪಾನ ಮಾಡುವ ಅಭ್ಯಾಸವು ಮೂತ್ರಪಿಂಡಗಳಿಗೆ ಅಪಾಯಕಾರಿ.  ಧೂಮಪಾನ ಮತ್ತು ಮದ್ಯಪಾನ ಮಾಡುವ ಜನರಲ್ಲಿ ಮೂತ್ರಪಿಂಡದ ಕಾಯಿಲೆಗಳ   ಅಪಾಯವು ಹೆಚ್ಚಾಗಿ ಕಂಡು ಬರುತ್ತದೆ.
ನೀರನ್ನು ಹೆಚ್ಚಾಗಿ ಕುಡಿಯುವುದರಿಂದ ಮೂತ್ರಪಿಂಡವು ಸೋಡಿಯಂ ಮತ್ತು ಜೀವಾಣುಗಳನ್ನು ಸುಲಭವಾಗಿ ಹೊರಹಾಕಲು ಸಾಧ್ಯವಾಗುತ್ತದೆ.

ಹೆಚ್ಚು ಸಕ್ಕರೆ ತಿನ್ನುವವರಿಗೆ, ಬೊಜ್ಜು, ಅಧಿಕ ರಕ್ತದೊತ್ತಡ ಮತ್ತು ಮಧುಮೇಹಕ್ಕೆ ತುತ್ತಾಗುವ ಸಾಧ್ಯತೆ ಅಧಿಕವಾಗಿದೆ.ಅಲ್ಲದೇ ಇದರಿಂದ ಮೂತ್ರಪಿಂಡ ವೈಫಲ್ಯಕ್ಕೆ ಎಡೆ ಮಾಡಿಕೊಡುವ ಸಂಭವ ಹೆಚ್ಚಾಗಿರುತ್ತದೆ.ನೋವು ನಿವಾರಕ ಮಾತ್ರೆಗಳ ಅತಿಯಾದ ಸೇವನೆಯು ಕೂಡ ಕೆಲವೊಮ್ಮೆ ಕಿಡ್ನಿ ವೈಫಲ್ಯಕ್ಕೆ ಕಾರಣವಾಗಲೂ ಬಹುದು.
ರಕ್ತದಲ್ಲಿ ಕಲ್ಮಶಗಳು ಹೆಚ್ಚಾದಂತೆಯೇ ಚರ್ಮದಡಿಯಲ್ಲಿಯೂ ಕಲ್ಮಶಗಳು ಹೆಚ್ಚುತ್ತಾ ಹೋಗುತ್ತವೆ. ಇದು ಚರ್ಮದಲ್ಲಿ ತುರಿಕೆಗೆ ಕಾರಣವಾಗುತ್ತದೆ. ಚರ್ಮ ಹೆಚ್ಚು ಹೆಚ್ಚು ಒಣಗುತ್ತಾ ಹೋಗುತ್ತದೆ. ಅಲ್ಲಲ್ಲಿ ವೃತ್ತಾಕಾರದ ಗುರುತುಗಳು ಮೂಡುತ್ತವೆ

ಕಿಡ್ನಿ ಸಮಸ್ಯೆಮೊದಲೇ ತಿಳಿದರೆ , ಮೂತ್ರಪಿಂಡಕ್ಕೆ ಸಂಬಂಧಿಸಿದ ಯಾವುದೇ ದೊಡ್ಡ ಸಮಸ್ಯೆ ಮುಂದೆ ಎದುರಾಗದಂತೆ ತಪ್ಪಿಸಬಹುದು.
ರಕ್ತದಲ್ಲಿ ಕಲ್ಮಶಗಳು ಹೆಚ್ಚು ಸಂಗ್ರಹವಾದಾಗ ವಾಕರಿಕೆ ಪ್ರಾರಂಭವಾಗುತ್ತದೆ. ಕಲ್ಮಶಗಳು ಹೆಚ್ಚಾದಷ್ಟೂ ವಾಕರಿಕೆಯೂ ಹೆಚ್ಚಾಗುತ್ತಾ ಕಡೆಗೊಮ್ಮೆ ಹೊಟ್ಟೆಯಲ್ಲಿದ್ದುದೆಲ್ಲಾ ವಾಂತಿಯ ಮೂಲಕ ಹೊರದಬ್ಬಲ್ಪಡುತ್ತದೆ.ಆದರೆ ವಾಂತಿ ಮೂತ್ರಪಿಂಡದ ವೈಫಲ್ಯದ ಕಡೆಯ ಹಂತದಲ್ಲಿ ಕಾಣಬರುವ ಕಾರಣ ಪ್ರಾರಂಭದ ವಾಕರಿಕೆಯನ್ನೇ ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಪರೀಕ್ಷೆಗೊಳಪಡಬೇಕು.

ದೇಹದಲ್ಲಿನ ಸಣ್ಣ ಬದಲಾವಣೆಗಳನ್ನು ನಿರ್ಲಕ್ಷಿಸುವುದು ಕೆಟ್ಟ ಪರಿಣಾಮಗಳನ್ನು ಉಂಟುಮಾಡಬಹುದು. ಅಷ್ಟೇನೂ ಕೆಲಸ ಮಾಡದಿದ್ದರೂ ಆಯಾಸ , ಸುಸ್ತು ಉಂಟಾಗಿ ದೇಹದಲ್ಲಿ ವಿಷಕಾರಿ ಅಂಶಗಳ ಪ್ರಮಾಣವು ಹೆಚ್ಚಾಗುತ್ತದೆ. ಅಷ್ಟೇ ಮುಖ್ಯ ರಕ್ತದಲ್ಲಿನ ಅಶುದ್ಧ ವಸ್ತುಗಳ ಪ್ರಮಾಣವು ಹೆಚ್ಚಾಗಿ ಮೂತ್ರಪಿಂಡವು ಹಾನಿಗೊಳಗಾಗಲು ಪ್ರಾರಂಭಿಸುತ್ತದೆ.
ಕಾಲುಗಳಲ್ಲಿ ಊತವು ಮೂತ್ರಪಿಂಡದ ಕಾಯಿಲೆಯನ್ನು ಸಹ ಸೂಚಿಸುತ್ತದೆ.
ನಿದ್ರಾಹೀನತೆ, ಚರ್ಮದ ತುರಿಕೆ , ಉಸಿರುಕಟ್ಟುವಿಕೆ
ಮೂತ್ರದ ಬಣ್ಣದಲ್ಲಿನ ಬದಲಾವಣೆ , ಅತಿಯಾದ ಮೂತ್ರ ವಿಸರ್ಜನೆ, ಉರಿಮೂತ್ರ , ರಕ್ತಸ್ರಾವ ಅಥವಾ ಮೂತ್ರದಲ್ಲಿ ಕೀವು ಬರುವುದು ಈ ರೀತಿಯ ಸಮಸ್ಯೆಗಳು ಮೂತ್ರಪಿಂಡದ ಕಾಯಿಲೆಗಳೊಂದಿಗೆ ಸಂಬಂಧಿಸಿವೆ.

ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯು ದೇಹದಲ್ಲಿ ಅಪಾಯಕಾರಿ ಮಟ್ಟದ ದ್ರವ, ವಿದ್ಯುದ್ವಿಚ್ಛೇದ್ಯಗಳು ಮತ್ತು ತ್ಯಾಜ್ಯಗಳನ್ನು ಸೃಷ್ಟಿಸಲು ಕಾರಣವಾಗಬಹುದು.
ಕಿಡ್ನಿ ವೈಫಲ್ಯ ಇರುವವರು ಪಾಲಿಸಬೇಕಾದ ಕೆಲವು ಟಿಪ್ಸ್ ಗಳು:

ಆಹಾರದಲ್ಲಿನ ರಂಜಕದ ಪ್ರಮಾಣವು ತುಂಬಾ ಕಡಿಮೆಯಾಗಿರಬೇಕು. ರಂಜಕ ಭರಿತ ಆಹಾರಗಳಾದ ಮಾಂಸ, ಡೈರಿ ಉತ್ಪನ್ನಗಳು, ಫಾಸ್ಟ್ ಫುಡ್, ಬೇಕರಿ ವಸ್ತುಗಳು, ಕೋಲಾ‌ ಇವುಗಳ ಸೇವನೆ ಮಾಡದಿರುವುದು ಒಳಿತು.

ಮದ್ಯಪಾನ, ಧೂಮಪಾನ ಮಾಡದಿರುವುದು ,ಅತಿಯಾದ ನೋವು ನಿವಾರಕ ಮಾತ್ರೆಗಳನ್ನು ಸೇವಿಸದಿರುವುದು, ಸಕ್ಕರೆ ಕಾಯಿಲೆ ಇಲ್ಲವೇ ಇತರೆ ಸಮಸ್ಯೆ ಕಂಡರೆ ಆರೋಗ್ಯ ತಪಾಸಣೆ ಮಾಡಿಸುವುದು .ದಿನನಿತ್ಯ ವಾಕಿಂಗ್, ಯೋಗ ಅಥವಾ ವ್ಯಾಯಾಮ ರೂಢಿಸಿಕೊಳ್ಳುವುದು,ಕೋಪ ನಿಯಂತ್ರಣ,
ಬಿಪಿ, ಶುಗರ್ ನಿಯಂತ್ರಣದಲ್ಲಿಟ್ಟುಕೊಳ್ಳುವುದು.
ಉದರ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ದೀರ್ಘಕಾಲದವರೆಗೆ ನಿರ್ಲಕ್ಷಿಸದೆ ಇರುವುದು.
ಈ ಎಲ್ಲ ಸಣ್ಣ ಪುಟ್ಟ ಮುಂಜಾಗ್ರತೆ ಕ್ರಮಗಳನ್ನು ವಹಿಸಿ ಆರೋಗ್ಯ ರಕ್ಷಣೆ ಮಾಡಬಹುದು.

Leave A Reply