Breaking News | ‘ ತಾಂಟ್ರೆ…ನೀ ಬಾ ತಾಂಟ್ ‘ ಖ್ಯಾತಿಯ SDPI ನಾಯಕ ರಿಯಾಜ್ ಪರಂಗಿಪೇಟೆ ಮನೆ ಮೇಲೆ NIA ದಾಳಿ

Share the Article

ದಕ್ಷಿಣ ಕನ್ನಡದಲ್ಲಿ ಪ್ರಚೋದನಕಾರಿ ಹೇಳಿಕೆಯನ್ನು ನೀಡುತ್ತಾ ಬಂದಿರುವ ರಿಯಾಜ್ ಪರಂಗಿಪೇಟೆ ಇವರ ಮನೆ ಮೇಲೆ ಮುಂಜಾನೆ ಕೋಳಿ ಎದ್ದು ಕೂಗು ಹಾಕುವ ಮುನ್ನವೇ NIA ಶಾಕ್ ನೀಡಿದೆ. ನಸುಕಿನಲ್ಲೇ ರಿಯಾಜ್ ಪರಂಗಿಪೇಟೆ ಮನೆಯ ಕದ ತಟ್ಟಿದ್ದಾರೆ NIA ತಂಡ.

ಪ್ರವೀಣ್ ನೆಟ್ಟಾರು ಪ್ರಕರಣವನ್ನು ರಾಜ್ಯ ಸರಕಾರ NIA ಗೆ ವಹಿಸಿದೆ. ಈಗ NIA ಪೂರ್ಣ ಪ್ರಮಾಣದಲ್ಲಿ ದಾಳಿಗೆ ಇಳಿದಿದೆ. ದ.ಕ ಜಿಲ್ಲೆಯಲ್ಲಿ NIA ದಾಳಿ ಮುಂದುವರಿದಿದ್ದು SDPI ನಾಯಕ ರಿಯಾಝ್ ಫರಂಗಿಪೇಟೆ ಮನೆಗೆ ಇಂದು ಗುರುವಾರ ಬೆಳಗ್ಗೆ NIA ದಾಳಿ ಮಾಡಿದೆ.

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ NIA ಸಪ್ಟೆಂಬರ್ 7 ರಂದು 33 ಕಡೆಗಳಲ್ಲಿ ದಾಳಿ ನಡೆಸಿತ್ತು.

ಇದರ ಮುಂದುವರಿದ ಭಾಗವಾಗಿ ಇಂದು ಬೆಳಿಗ್ಗೆ SDPI ರಾಷ್ಟ್ರೀಯ ನಾಯಕ ರಿಯಾಝ್ ಫರಂಗಿಪೇಟೆ ಮನೆಗೆ NIA ದಾಳಿ ನಡೆಸಿದ್ದು, ಇದನ್ನು ವಿರೋಧಿಸಿ ಮನೆ ಮುಂದೆ SDPI ಕಾರ್ಯಕರ್ತರು ಸೇರಿದ್ದಾರೆ.

ರಾಜ್ಯದಲ್ಲಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಾ, ವಿರುದ್ಧ ಧರ್ಮದವರನ್ನು ಜಗಳಕ್ಕೆ ಆಹ್ವಾನಿಸುತ್ತಾ, ಇದ್ದ ರಿಯಾಜ್ ಪರಂಗಿಪೇಟೆ ಅವರ ಮೇಲೆ ಈಗ ದಾಳಿ ನಡೆದಿರುವುದು ಮತ್ತು ಪ್ರವೀಣ್ ನೆಟ್ಟಾರ್ ಹತ್ಯಾ ಕೇಸಿನ ಸನ್ನಿವೇಶದಲ್ಲಿ ಎಂಬ ಮಾಹಿತಿ ಲಭ್ಯವಾಗಿದೆ. ಪ್ರವೀಣ್ ಅವರ ಹತ್ಯೆ ನಡೆದದ್ದು ರಾಜ್ಯದಲ್ಲಿ ಭಯದ ವಾತಾವರಣವನ್ನು ಸೃಷ್ಟಿ ಮಾಡಲು ಎನ್ನುವುದು ಇದೀಗ ಪ್ರಾಥಮಿಕ ತನಿಖೆಗಳಿಂದ ಗೊತ್ತಾಗಿದೆ.

ದಾಳಿಯ ಸಂದರ್ಭ ಯಾವೆಲ್ಲ ದಾಖಲೆಗಳು, ಮಾಹಿತಿಗಳು ಲಭ್ಯ ಆಗಿವೆ ಎಂಬ ಬಗ್ಗೆ ಮಾಹಿತಿ ಇಲ್ಲ. ಇದು ಬ್ರೇಕಿಂಗ್ ಸುದ್ದಿ. ನ್ಯೂಸ್ ಅಂಡರ್ ಡೆವೆಲಪ್ ಮೆಂಟ್…..!

Leave A Reply