Bigg Boss Kannada season 9 : ಇನ್ನು ಮುಂದೆ ಟಿವಿಯಲ್ಲಿ ಬಿಗ್ ಬಾಸ್ | ಯಾವಾಗ? ಕಂಪ್ಲೀಟ್ ಡಿಟೇಲ್ ಇಲ್ಲಿದೆ

ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್’ ( Bigg Boss Kannada) ಎಂದರೆ ತಪ್ಪಾಗಲಾರದು. ಈಗಾಗಲೇ ಕನ್ನಡದಲ್ಲಿ ‘ಬಿಗ್ ಬಾಸ್’ ಕಾರ್ಯಕ್ರಮದ ಎಂಟು ಸೀಸನ್ ನಡೆದು, ಭರ್ಜರಿ ಯಶಸ್ವಿಯಾಗಿದ್ದು ಎಲ್ಲರಿಗೂ ಗೊತ್ತು. ವೂಟ್ (Voot) ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಕನ್ನಡದ ಮೊದಲ ‘ಬಿಗ್ ಬಾಸ್ ಕನ್ನಡ ಓಟಿಟಿ 1’ ಕಾರ್ಯಕ್ರಮ ಆಗ್ತಾ ಇದೆ. ಇಲ್ಲಿ ಶೋ ಮುಗಿದ ಕೂಡಲೆ ಟಿವಿಯಲ್ಲಿ ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮ ಶುರುವಾಗಲಿದೆ.

‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದ ಪ್ರೋಮೋ ಬಿಡುಗಡೆಯಾಗಿದೆ. ಕಲರ್ಸ್ ಕನ್ನಡ ವಾಹಿನಿಯ ಅಫೀಶಿಯಲ್ ಫೇಸ್‌ಬುಕ್ ಪುಟದಲ್ಲಿ ‘ಬಿಗ್ ಬಾಸ್ ಕನ್ನಡ 9’ ಪ್ರೋಮೋ ಔಟ್ ಆಗಿದೆ.ಬಿಡುಗಡೆಯಾಗಿರುವ ಪ್ರೋಮೋದಲ್ಲಿ ‘ಶುರುವಾಗುತ್ತಿದೆ ಟಿವಿ ಸೀಸನ್ ‘ಬಿಗ್ ಬಾಸ್ ಕನ್ನಡ 9 ಅಂತ ಹೇಳಲಾಗಿದೆ ಹೊರತು ಯಾವಾಗಲಿಂದ ‘ಬಿಗ್ ಬಾಸ್ ಕನ್ನಡ 9’ ಶುರುವಾಗಲಿದೆ ಎಂಬುದನ್ನ ಬಹಿರಂಗಪಡಿಸಿಲ್ಲ.

‘ಬಿಗ್ ಬಾಸ್ ಕನ್ನಡ ಓಟಿಟಿ 1’ ಕಾರ್ಯಕ್ರಮ ಮುಗಿದ ಕೂಡಲೆ ‘ಬಿಗ್ ಬಾಸ್ ಕನ್ನಡ 9’ ಆರಂಭವಾಗುವುದಂತೂ ಪಕ್ಕಾ.

Leave A Reply