“ಫಸ್ಟ್ ನೈಟ್ ಆಗಬೇಕುಂತ ಇಲ್ಲ, ಫಸ್ಟ್ ಡೇ ಕೂಡಾ ಆಗುತ್ತೆ” – ಕತ್ರಿನಾಳ ಹಾಟ್ ಹೇಳಿಕೆ

ಬಾಲಿವುಡ್ ಕಿರುತೆರೆಯ ಜನಪ್ರಿಯ ಶೋ ಕಾಫಿ ವಿತ್ ಕಿರಣ್ ಶೋ ನಲ್ಲಿ ಈ ಬಾರಿ ಕತ್ರಿನಾ ಕೈಫ್, ಸಿದ್ಧಾಂತ್ ಚತುರ್ವೇದಿ ಹಾಗೂ ಇಶಾನ್ ಖಟ್ಟರ್ ಒಟ್ಟಾಗಿ ಬಂದಿದ್ದಾರೆ. ಈ ವೇಳೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗಿದೆ.


Ad Widget

Ad Widget

ಸಾಕಷ್ಟು ಬೋಲ್ಡ್ ಮಾತುಗಳೇ ತುಂಬಿದ ‘ಕಾಫಿ ವಿತ್
ಕರಣ್’ (Koffee With Karan) ಶೋ ಗೆ ಅನೇಕ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಬಂದ ಎಲ್ಲ ಅತಿಥಿಗಳಿಗೂ ನಿರೂಪಕ ಕರಣ್ ಜೋಹರ್ (Karan Johar) ಅವರು ನೇರವಾದ ಪ್ರಶ್ನೆಗಳನ್ನು ಕೇಳುತ್ತಾರೆ. ಈಗ ಈ ಕಾರ್ಯಕ್ರಮ 7ನೇ ಸೀಸನ್ ಪ್ರಸಾರ ಆಗುತ್ತಿದೆ. ಇಷ್ಟು ವರ್ಷಗಳ ಕಾಲ ಟಿವಿಯಲ್ಲಿ ಪ್ರಸಾರವಾದ ಈ ಶೋ ಇದೇ ಮೊದಲ ಬಾರಿಗೆ ಒಟಿಟಿಯಲ್ಲಿ (ಡಿಸ್ನಿ ಪ್ಲಸ್ ಹಾಟ್ ಸ್ಟಾರ್) ನೇರವಾಗಿ ಪ್ರಸಾರ ಕಾಣುತ್ತಿದೆ. ಹಾಗಾಗಿ ಬೋಲ್ಡ್ ಮಾತುಕಥೆಗಳು ಕೊಂಚ ಜಾಸ್ತಿಯೇ ಇವೆ ಎನ್ನಬಹುದು. ಈಗ ನಟಿ ಕತ್ರಿನಾ ಕೈಫ್ (Katrina Kaif) ಅವರಿಗೂ ಕರಣ್ ಜೋಹರ್ ಅವರು ಆ ರೀತಿಯ ಪ್ರಶ್ನೆ ಕೇಳಿದ್ದಾರೆ.


Ad Widget

ಕತ್ರಿನಾ ಕೂಡಾ ಅಷ್ಟೇ ಬೋಲ್ಡ್ ಆದಂತಹ ಉತ್ತರ ನೀಡಿದ್ದಾರೆ. ‘ಕಾಫಿ ವಿತ್ ಕರಣ್’ 7ನೇ ಸೀಸನ್‌ನ ಮೊದಲ ಎಪಿಸೋಡ್‌ನಲ್ಲಿ ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ಭಾಗವಹಿಸಿದ್ದರು. ಆಗ ಫಸ್ಟ್ ನೈಟ್ ಬಗ್ಗೆ ಪ್ರಸ್ತಾಪ ಆಗಿತ್ತು. ‘ಮೊದಲ ರಾತ್ರಿ ಅಂತ ಏನೂ ಇರಲ್ಲ. ಯಾಕೆಂದರೆ ಮದುವೆ ದಿನ ನಾವು ಸುಸ್ತಾಗಿರುತ್ತೇನೆ’ ಎಂದು ಆಲಿಯಾ ಭಟ್ ಬೋಲ್ಡ್ ಹೇಳಿಕೆಯನ್ನು ನೀಡಿದ್ದರು. ಆ ಮಾತನ್ನೇ ಇಟ್ಟುಕೊಂಡು ಈಗ ಕತ್ರಿನಾ ಕೈಫ್ ಬಳಿಯೂ ಕರಣ್ ಜೋಹರ್ ಅದೇ ಪ್ರಶ್ನೆ ಮಾಡಿದ್ದಾರೆ.

”ಯಾವಾಗಲೂ ಮೊದಲ ರಾತ್ರಿಯೇ ಆಗಬೇಕೆಂದೇನೂ ಇಲ್ಲ ಮೊದಲ ದಿನ ಕೂಡ ಆಗಬಹುದು’ ಎಂದು ಕತ್ರಿನಾ ಕೈಫ್ ಅವರು ಹೇಳಿದ್ದಾರೆ. ‘ಆಹ್.. ನನಗೆ ಇದು ಇಷ್ಟ’ ಎಂದು ಕರಣ್ ಜೋಹರ್ ಉದ್ಘಾರ ತೆಗೆದಿದ್ದಾರೆ. ಸದ್ಯ ಈ ಸಂಚಿಕೆಯ ಪ್ರೋಮೋ ಹಂಚಿಕೊಳ್ಳಲಾಗಿದೆ.

Ad Widget

Ad Widget

Ad Widget

ಸೆಪ್ಟೆಂಬರ್ 8ರಂದು ಈ ಎಪಿಸೋಡ್ ಪ್ರಸಾರ ಆಗಲಿದೆ.
ಕತ್ರಿನಾ ಕೈಫ್ ಜೊತೆ ಇಶಾನ್ ಖಟ್ಟರ್, ಸಿದ್ಧಾಂತ್ ಚತುರ್ವೇದಿ ಕೂಡ ಭಾಗಿ ಆಗಿದ್ದಾರೆ. ‘ಫೋನ್ ಭೂತ್’ ಸಿನಿಮಾದಲ್ಲಿ ಕತ್ರಿನಾ ಕೈಫ್ ಸಿದ್ಧಾಂತ್ ಚತುರ್ವೇದಿ ಹಾಗೂ ಇಶಾನ್ ಖಟ್ಟರ್ ಅವರು ನಟಿಸಿದ್ದಾರೆ. ಹಾಗಾಗಿ ಮೂವರೂ ಒಟ್ಟಾಗಿ ‘ಕಾಫಿ ವಿತ್ ಕರಣ್’ ಶೋಗೆ ಬಂದಿದ್ದಾರೆ.

error: Content is protected !!
Scroll to Top
%d bloggers like this: