ವಾಸ್ತು ಪ್ರಕಾರ ನೀವೆಷ್ಟು ಎಚ್ಚರವಿದ್ದೀರಿ? | ಸ್ಥಳ ಮಹಾತ್ಮೆಯ ಸಂಕ್ಷಿಪ್ತ ವಿವರಣೆಯೇ ಇಲ್ಲಿದೆ !!!

‘ಮನೆ ಕಟ್ಟಿ ನೋಡು ಒಮ್ಮೆ ಮನೆ ಕಟ್ಟಿ ನೋಡು’ ಎಂಬ ಹಾಡಿನ ಸಾಲುಗಳು ಎಷ್ಟು ಅರ್ಥವನ್ನು ನೀಡುತ್ತದೆ ಎಂಬುದು ಹಾಡನ್ನು ಕೇಳಿದವರಿಗೆ ಗೊತ್ತೇ ಇರುತ್ತದೆ. ತಮ್ಮದೇ ಆದಂತಹ ಒಂದು ಸ್ವಂತ ಮನೆ ಇರಬೇಕು. ಅದು ಎಷ್ಟೇ ಸಣ್ಣದಾಗಿರಲಿ, ಅಚ್ಚುಕಟ್ಟಾಗಿ ಜೀವನವನ್ನ ಸಾಗಿಸಬೇಕು ಎಂಬುದು ಮಹದಾಸೆ ನಮ್ಮಲ್ಲಿ ಇರುತ್ತದೆ. ಸುಂದರವಾದ ಅಂತಹ ಚೊಕ್ಕವಾದಂತಹ ಮನೆ ಎಷ್ಟು ಮುಖ್ಯವೋ ಅದೇ ರೀತಿ ಅದರಲ್ಲಿ ನಾವು ಉಪಯೋಗಿಸುವ ವಸ್ತುಗಳು ಆಯಾ ದಿಕ್ಕಿನಲ್ಲಿ ಇಡುವುದು ಕೂಡ ಅಷ್ಟೇ ಮುಖ್ಯ. ಹಾಗಾಗಿ, ನಾವು ಜ್ಯೋತಿಷ್ಯರಲ್ಲಿ ಹೋಗುತ್ತೇವೆ. ಆಗ ಅವರು ಯಾವ ಯಾವ ವಸ್ತುಗಳು ಇಲ್ಲಿ ಇಟ್ಟರೆ ಸೂಕ್ತ, ಮನಸ್ಸಿಗೆ ನೆಮ್ಮದಿ ಕೊಡುವ ನೂರಾರು ಸಲಹೆಗಳನ್ನು ಅವರು ನೀಡುತ್ತಾರೆ. ಇದೀಗ ಮನೆಯಲ್ಲಿ ಯಾವ ಯಾವ ವಸ್ತುಗಳು ಯಾವ ಯಾವ ದಿಕ್ಕಿನಲ್ಲಿದ್ದರೆ ಒಳಿತು ಎಂಬುದರ ಬಗ್ಗೆ ತಿಳಿಯೋಣ ಬನ್ನಿ.


Ad Widget

Ad Widget

ವಿವಿಧ ರೀತಿಯ ಪೀಠೋಪಕರಣಗಳು ಮನೆಯಲ್ಲಿ ಎಲ್ಲಿ ಇಡಬೇಕು?
ಮನೆಯಲ್ಲಿ ಹಗುರವಾದ ಮತ್ತು ಭಾರವಾದ ಬೀಡೋಪಕರಣಗಳನ್ನು ಜೋಡಿಸಲು ವಾಸ್ತು ಶಾಸ್ತ್ರವು ಕೆಲವು ನಿಯಮಗಳನ್ನು ಒಳಪಟ್ಟಿವೆ. ಬೆಳಕು ಚೆಲ್ಲುವ ಪೀಠೋಪಕರಣಗಳನ್ನು ಪೂರ್ವ ದಿಕ್ಕಿನಲ್ಲಿ ಇಡಬೇಕು. ದೊಡ್ಡ ಗಾತ್ರದ ದೊಡ್ಡ ಪೀಠೋಪಕರಣಗಳನ್ನು ದಕ್ಷಿಣ ಅಥವಾ ಪಶ್ಚಿಮ ಭಾಗದಲ್ಲಿ ಇಡಬೇಕು. ಡ್ರಾಯಿಂಗ್ ರೂಮ್ನಲ್ಲಿ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಸೋಫಾ ದಿವಾನ್ ವ್ಯವಸ್ಥೆ ಮಾಡಬೇಕು. ಈ ರೀತಿಯಾಗಿ ಪೀಠೋಪಕರಣಗಳನ್ನು ಜೋಡಿಸಿದ್ದಲ್ಲಿ ಮನೆಯಲ್ಲಿ ನೆಮ್ಮದಿ ದೊರೆಯಲು ಸಾಧ್ಯ.


Ad Widget

ಫ್ರಿಜ್ ಎಲ್ಲಿ ಇಟ್ಟರೆ ಉತ್ತಮ?
ವಾಸ್ತು ಪ್ರಕಾರ ಮನೆಯಲ್ಲಿಯೇ ಫ್ರೀಜ್ಹಿಡಲು ಉತ್ತಮವಾದ ದಿಕ್ಕು ಎಂದರೆ ವಾಯುವ್ಯ ದಿಕ್ಕು. ಜೊತೆಗೆ ಆಗ್ನೇಯ ದಿಕ್ಕು ಕೂಡ ಸೂಕ್ತ. ಟಿವಿ ಮತ್ತು ದೂರವಾಣಿ ಆಗ್ನೇಯ ದಿಕ್ಕಿನಲ್ಲಿ ಇಡಬೇಕು. ಎರಡು ವಸ್ತುಗಳು ಒಂದೇ ದಿಕ್ಕಿನಲ್ಲಿದ್ದರೆ ಕಷ್ಟವನ್ನ ಅನುಭವಿಸುವಂತಹ ಸಂಭವ ಎದುರಾಗಬಹುದು.

ಇನ್ನು ಪ್ರತಿಯೊಬ್ಬರ ಮನೆಯಲ್ಲೂ ಕನ್ನಡಿಯೂ ಇದ್ದೇ ಇರುತ್ತದೆ. ಕನ್ನಡಿಯನ್ನು ಮನೆಯ ಉತ್ತರ ಭಾಗಕ್ಕೆ ಅಥವಾ ಪೂರ್ವ ದಿಕ್ಕಿನಲ್ಲಿ ಇಡಬೇಕು. ಮಲಗುವ ಕೋಣೆಯಲ್ಲಿ ಕನ್ನಡಿ ಹಾಕಬಾರದಿತ್ತು ಎಂದು ತಜ್ಞರು ತಿಳಿಸಿದ್ದಾರೆ. ಒಂದು ಕನ್ನಡಿಯ ಮುಂದೆ ಇನ್ನೊಂದು ಕನ್ನಡಿಯನ್ನು ಯಾವುದೇ ಕಾರಣಕ್ಕೂ ಇಡಲೇಬಾರದು.

Ad Widget

Ad Widget

Ad Widget

ಔಷಧಿಯನ್ನು ಎಲ್ಲಿಡಬೇಕು?
ಈಶಾನ್ಯ ದಿಕ್ಕಿನಲ್ಲಿ ಔಷಧಿಗಳನ್ನ ಇಡುವುದು ಅಥವಾ ಅಡಿಗೆ ಮನೆಯಲ್ಲಿ ಔಷಧಿಗಳನ್ನು ಇಡುವುದು ಸೂಕ್ತ. ಅದು ಬಿಟ್ಟು ಆಸೆಯ ಪಕ್ಕದಲ್ಲಿ ಇಡಲೇಬಾರದು. ವಾಸ್ತು ಪ್ರಕಾರ ಯಾವ ರೀತಿಯಾಗಿ ಮನೆಯಲ್ಲಿ ವಸ್ತುಗಳನ್ನು ಇಡಬೇಕು ಎಂಬುದು ತಿಳಿದುಕೊಂಡಿದ್ದೀರಿ. ಇದನ್ನೇ ಪಾಲಿಸಿ ಕೂಡ.

error: Content is protected !!
Scroll to Top
%d bloggers like this: