ಇಲ್ಲಿದೆ ಸೂಪರ್ ಹೆಲ್ತ್ ಟಿಪ್ಸ್!! | ಇದನ್ನು ನೋಡಿದರೆ ಪಕ್ಕಾ ಅಳವಡಿಸಿಕೊಳ್ತೀರ

ಆರೋಗ್ಯ ಚೆನ್ನಾಗಿರುವುದು ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಹುಡುಗಿಯರಿಗೆ ತನ್ನ ಸೌಂದರ್ಯ ಕಾಪಾಡಿಕೊಳ್ಳುವುದು ಎಂದರೆ ಬಲು ಪ್ರಿಯ. ಅದಕ್ಕಾಗಿ ಆರೋಗ್ಯಕರ ಚರ್ಮಕ್ಕಾಗಿ ವಿಟಮಿನ್ ಎ ಇರುವ ವಸ್ತುಗಳನ್ನು ತಮ್ಮ ಆಹಾರದಲ್ಲಿ ಸೇರಿಸಿಬೇಕು. ಇದು ಚರ್ಮದ ಕೋಶಗಳನ್ನು ಸರಿಪಡಿಸುತ್ತದೆ ಮತ್ತು ಸೋರಿಯಾಸಿಸ್ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಒಬ್ಬ ವ್ಯಕ್ತಿ ಆರೋಗ್ಯವಾಗಿರಬೇಕಾದರೆ ದೇಹದಲ್ಲಿ ಹಲವಾರು ರೀತಿಯ ವಿಟಮಿನ್‌ಗಳು ಬೇಕಾಗುತ್ತದೆ. ದೇಹದ ಅಂಗಾಂಗಗಳ ಕಾರ್ಯಚಟುವಟಿಕೆಗೆ ಹಲವಾರು ರೀತಿಯ ವಿಟಮಿನ್‌ಗಳು ಅಗತ್ಯವಿರುತ್ತದೆ. ಉದಾಹರಣೆಗೆ, ಕಣ್ಣಿನ ಆರೋಗ್ಯಕ್ಕಾಗಿ ವಿಟಮಿನ್ ಎ ಬೇಕಿರುತ್ತದೆ ಹಾಗೂ ಮೂಳೆಗಳ ಆರೋಗ್ಯಕ್ಕಾಗಿ ವಿಟಮಿನ್ ಡಿ ಅವಶ್ಯಕತೆ ಇರುತ್ತದೆ. ಹೀಗೆ ವಿಟಮಿನ್ ಗಳ ಉಪಯೋಗ ಹಲವಾರು. ದೇಹಕ್ಕೆ ಅಗತ್ಯವಾದಷ್ಟು ವಿಟಮಿನ್‌ಗಳ ಪೂರೈಕೆ ಆಗದಿದ್ದಲ್ಲಿ ನಾವು ಹಲವಾರು ತೊಂದರೆಗಳನ್ನು ಅನುಭವಿಸುತ್ತೇವೆ.
ಕೆಲವೊಮ್ಮೆ ಚರ್ಮದಲ್ಲಿ ಕಾಣಿಸಿಕೊಳ್ಳುವ ಬಿರುಕುಗಳನ್ನು ತಡೆಯುತ್ತದೆ. ಕಾಲಕ್ಕೆ ತಕ್ಕಂತೆ ಚರ್ಮವನ್ನು ನೈಸರ್ಗಿಕವಾಗಿ ತೇವಗೊಳಿಸುವಂತೆ ಮಾಡುತ್ತದೆ. ವಿಟಮಿನ್ ಎ ಚರ್ಮವನ್ನು ಹಿಡಿದಿಟ್ಟುಕೊಳ್ಳುತ್ತದೆ, ಇದು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಅಂತಹ ಆಹಾರ ನಿಮ್ಮದಾಗಿಸಬೇಕಾದರೇ ನೀವು ಸೇವಿಸಬೇಕಾದ ವಸ್ತುಗಳ್ಯಾವುದು ಗೊತ್ತಾ ಇಲ್ಲಿದೆ ಓದಿ

ಕ್ಯಾರೆಟ್
ಕ್ಯಾರೆಟ್ ಒಂದು ವಿಟಮಿನ್‌ಗಳ ಆಗರ ಎಂದು ನಾವು ಈಗಾಗಲೇ ತಿಳಿಸಿದ್ದೇವೆ. ಆದರೆ, ಕ್ಯಾರೆಟ್ ನಲ್ಲಿರುವ ಹಲವು ಪೋಷಕಾಂಶಗಳು ನಿಮ್ಮ ದೇಹಕ್ಕೆ ಸಿಗಬೇಕು ಎಂದರೆ ಅಲ್ಲಿ ಒಂದು ಸಕ್ರಿಯವಾಗಿರುವ ಕಿಣ್ವಗಳು ಇರಲೇಬೇಕು ಎಂದು ಅಧ್ಯಯನಗಳು ಹೇಳುತ್ತವೆ.

ಪಪ್ಪಾಯಿ
ಈಗಿನ ಪೀಳಿಗೆಯ ಜನರಲ್ಲಿ ಕೊಲೆಸ್ಟ್ರಾಲ್ ಅಂಶ ಜನರ ಆರೋಗ್ಯಕ್ಕೆ ಒಂದು ಶಾಪ ಎಂದು ಹೇಳಬಹುದು. ಏಕೆಂದರೆ ಸೇವನೆ ಮಾಡುವ ಹಲವಾರು ಆಹಾರ ಪದಾರ್ಥಗಳಲ್ಲಿ ಎಣ್ಣೆಯ ಜಿಡ್ಡಿನಂಶ ಸೇರಿರುತ್ತದೆ. ಇದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಹೆಚ್ಚು ಮಾಡುತ್ತದೆ ಎಂದು ಹೇಳಲಾಗಿದೆ.
ಹೃದಯದ ಅಪಧಮನಿಗಳ ಭಾಗದಲ್ಲಿ ಕೊಲೆಸ್ಟ್ರಾಲ್ ಅಂಶ ಸೇರಿಕೊಂಡು ರಕ್ತ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತದೆ. ಇದರಿಂದ ಯಾವುದೇ ಸಂದರ್ಭದಲ್ಲಿ ಬೇಕಾದರೂ ಹೃದಯಘಾತ ಸಂಭವಿಸಬಹುದು. ಹೃದಯರಕ್ತನಾಳದ ಹಲವಾರು ಕಾಯಿಲೆಗಳಿಗೂ ಕೂಡ ಇದೇ ಕೆಟ್ಟ ಕೊಲೆಸ್ಟ್ರಾಲ್ ಅಂಶ ಕಾರಣವಾಗುತ್ತದೆ.
ವಿಜ್ಞಾನಿಗಳು ತಮ್ಮ ಪ್ರಯೋಗಾಲಯದಲ್ಲಿ ಇಲಿಗಳ ಮೇಲೆ ಪರಂಗಿಹಣ್ಣಿನ ಆಹಾರಪದ್ಧತಿಯ ಮೂಲಕ ಅಧ್ಯಯನ ನಡೆಸಿ ಒಂದು ವಿಚಾರವನ್ನು ಬಯಲು ಮಾಡಿದ್ದಾರೆ.
ಅದೇನೆಂದರೆ ದೇಹದ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಿಕೊಳ್ಳಲು ಜನರು ತಮ್ಮ ಆಹಾರ ಪದ್ಧತಿಯಲ್ಲಿ ಆಗಾಗ ಪರಂಗಿಹಣ್ಣನ್ನು ಸೇರಿಸಿ ಸೇವನೆ ಮಾಡುವುದು ಒಳ್ಳೆಯ ಆರೋಗ್ಯದ ಬೆಳವಣಿಗೆ ಆಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಮಧುಮೇಹ, ಕೊಲೆಸ್ಟ್ರಾಲ್ ಇನ್ನೂ ನಾನಾ ಸಮಸ್ಯೆಗಳಿಗೆ ಮೆಂತೆ ನೆನೆಸಿಟ್ಟ ನೀರು ರಾಮಬಾಣ.

ಸೊಪ್ಪು
ಪಾಲಕ್,ಚಕ್ರಮೂಯಂತ ಸೊಪ್ಪಿನಿಂದ ಸೊಪ್ಪಿನ ಬಳಕೆಯಿಂದ ಮೂತ್ರಪಿಂಡಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಬಹುದಾಗಿದೆ. ಈ ಸೊಪ್ಪಿನಲ್ಲಿರುವ ಜೀವಸತ್ವಗಳು ಮೂತ್ರಪಿಂಡದ ಸಮಸ್ಯೆಗಳನ್ನು ಪರಿಹರಿಸಲು ಸಹಾಯಕವಾಗಿದೆ. ಬೇಸಿಗೆಯಲ್ಲಿ ಹೆಚ್ಚಾಗಿ ಕಾಡುವ ಮೂತ್ರಪಿಂಡದ ಕಲ್ಲು ಸೇರಿದಂತೆ ಹಲವು ಸಮಸ್ಯೆಗಳಿಗೆ ರಾಮಬಾಣವಾಗಿದೆ. ಹೀಗಾಗಿ ಚಕ್ರಮುನಿ ಸೊಪ್ಪನ್ನು ದಿನನಿತ್ಯದ ಅಡುಗೆಯಲ್ಲಿ ಬಳಸುವುದು ಹೆಚ್ಚು ಉಪಯುಕ್ತವಾಗಿದೆ.

ಸಿಹಿ ಆಲೂಗಡ್ಡೆ

ಸಿಹಿ ಆಲೂಗಡ್ಡೆ ತನ್ನಲ್ಲಿ ಹೆಚ್ಚಿನ ಪ್ರಮಾಣದ ದೇಹಕ್ಕೆ ಅಗತ್ಯವಾಗಿ ಬೇಕಾದ ಒಳ್ಳೆಯ ನಾರಿನ ಅಂಶ, ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ ಮತ್ತು ವಿಟಮಿನ್ ಬಿ6 ಅಂಶಗಳನ್ನು ಒಳಗೊಂಡಿದೆ. ಇವುಗಳು ನಿಮ್ಮ ಹೃದಯಕ್ಕೆ ತುಂಬಾ ಒಳ್ಳೆಯದು.
ಇದರಲ್ಲಿರುವ ನಾರಿನ ಅಂಶವು ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಿಸಲು ಮತ್ತು ನಿಮ್ಮ ಕೆಟ್ಟ ಕೊಬ್ಬಿನ ಅಂಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಅಧ್ಯಯನದ ಪ್ರಕಾರ, ಆಲೂಗಡ್ಡೆ ತಿನ್ನುವುದರಿಂದ ರಕ್ತಹೀನತೆಯ ಸಮಸ್ಯೆ ದೂರವಾಗಿ ಹೃದ್ರೋಗ ಸಮಸ್ಯೆಯನ್ನು ದೂರ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ, ನೀವು ಆಲೂಗಡ್ಡೆಯನ್ನು ಸರಿಯಾದ ಮಿತ ಪ್ರಮಾಣದಲ್ಲಿ ಸೇವನೆ ಮಾಡಿದರೆ ನಿಮ್ಮ ಹೃದಯಕ್ಕೆ ಸಂಬಂಧಪಟ್ಟ ಇರುವ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು.

ನೋಡಿದ್ರಲ್ಲ ಎಷ್ಟೇಲ್ಲ ಒಳ್ಳೆ ರೀತಿಯ ತರಕಾರಿ, ಹಣ್ಣುಗಳು ನಮ್ಮ ದೇಹಕ್ಕೆ ಆರೋಗ್ಯವನ್ನು ಒದಗಿಸುತ್ತವೆ ಎಂದು. ನೀವು ಕೂಡ ಇದನ್ನೇ ಫಾಲೋ ಮಾಡಿ.

Leave A Reply

Your email address will not be published.