ಮನವಿ ಸಲ್ಲಿಸಲು ಬಂದ ಮಹಿಳೆಗೆ ಜೋರು ಮಾಡಿ ಕಳುಹಿಸಿದ ಶಾಸಕ!!

ಅಧಿಕಾರಿಗಳು ಅಂದರೆ ಜನರ ಕಷ್ಟಗಳನ್ನು ಆಲಿಸಿ ಪರಿಹಾರ ನೀಡಬೇಕಾದವರು. ಆದ್ರೆ, ಕೆಲವೊಂದಷ್ಟು ಅಧಿಕಾರಿಗಳು ಜನರ ಮಾತಿಗೆ ಕಿವಿ ಕೊಡದೆ ಚುನಾವಣೆ ಬಂದಾಗ ಮಾತ್ರ ಮನೆ ಮನೆಗೆ ಬಂದು ಅಂಗಲಾಚುತ್ತಾರೆ. ಅದರಂತೆ ಇಲ್ಲೊಂದು ಕಡೆ ಮನವಿ ಸಲ್ಲಿಸಲು ಬಂದ ಮಹಿಳೆಗೆ ಶಾಸಕರು ಗದರಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮಳೆ ಅನಾಹುತ ಪ್ರದೇಶವಾದ ವರ್ತೂರು ಕೆರೆ ಕೋಡಿ ವೀಕ್ಷಿಸಲು ಅಧಿಕಾರಿಗಳ ಜೊತೆ ಶಾಸಕ ಅರವಿಂದ ಲಿಂಬಾವಳಿ ಬಂದಿದ್ದರು. ಈ ವೇಳೆ ಸಮಸ್ಯೆ ಹೇಳಲು ಬಂದ ಮಹಿಳೆಗೆ, ನಿನಗೆ ಮಾನ ಮರ್ಯಾದೆ ಇದ್ಯಾ? ನಿನಗೆ ನಾಚಿಕೆ ಆಗಲ್ವಾ ಎಂದು ಏರು ದನಿಯಲ್ಲಿ ಅವಾಜ್ ಹಾಕಿದ್ದಾರೆ. ನಂತರ ಮಹಿಳೆಯನ್ನು ಸ್ಟೇಷನ್‍ಗೆ ಕರೆದುಕೊಂಡು ಹೋಗಿ ಕೂರಿಸಿ ಎಂದು ಕಿಡಿಕಾರಿದ್ದಾರೆ.

ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಎಂಬುದು ಇಲ್ಲಿ ನೋಡಿ. ಮಹಿಳೆ ಸರ್ ಒಂದು ನಿಮಿಷ ಸರ್ ಎನ್ನುತ್ತಾ ಬರುತ್ತಾರೆ. ಆದ್ರೆ ಶಾಸಕರು ಮಹಿಳೆಯ ಬಳಿಯಿದ್ದ ಡಾಕ್ಯುಮೆಂಟ್ಸ್ ಕೇಳುತ್ತಾರೆ. ಆಗ ಮಹಿಳೆ ಸ್ವಲ್ಪ ಇರಿ ಸರ್. ಕೇಳಿಸ್ಕೊಳಿ.. ಎನ್ನುತ್ತಾರೆ. ಆದರೂ ಶಾಸಕರು,ಇವಳನ್ನು ಪೊಲೀಸ್ ಕರೆಸಿ ಕಳಿಸು. ಏನ್ ಕೇಳಿಸ್ಕೊಳೋದು. ಮುಚ್ಚುಬಾಯಿ ಎನ್ನುತ್ತಾರೆ. ಏನ್ ಮರ್ಯಾದೆ ನಿಂಗೆ.. ಒತ್ತುವರಿ ಮಾಡಿದ್ದಲ್ಲದೇ, ಮರ್ಯಾದೆ ಬೇರೆ ಕೊಡಬೇಕಾ ನಿಂಗೆ ಎನ್ನುತ್ತಾರೆ.

ಸ್ವಲ್ಪ ಡಾಂಕ್ಯುಮೆಂಟ್ ಪರಿಶೀಲಿಸಿ ನೋಡಿ ಸರ್.ಆಮೇಲೆ ತೀರ್ಮಾನ ಮಾಡಿ. ನಾನೆಲ್ಲಿ ಒತ್ತುವರಿ ಮಾಡಿದ್ದೀನಿ ಎನ್ನುತ್ತಾರೆ. ಮರ್ಯಾದೆ ಅಲ್ಲ.. ನಂಗೆ ಬೇರೆ ಭಾಷೆ ಬರುತ್ತದೆ.. ಬೇರೆ ಭಾಷೆ ಬಳಸಬೇಕಾಗುತ್ತದೆ. ನಾನು ಬಿಡಲ್ಲ ನಿನ್ನ. ನಡಿ ಪೊಲೀಸ್ ಸ್ಟೇಷನ್‍ಗೆ…ಕತ್ತು ಹಿಡಿದು ಒಳಗೆ ಹಾಕಿಸುತ್ತೇನೆ..ಒತ್ತುವರಿ ಮಾಡಿ ನ್ಯಾಯ ಕೇಳ್ತಿಯಾ? ನಾಚಿಕೆ ಆಗಲ್ವಾ ನಿನಗೆ ಎನ್ನುತ್ತಾರೆ.

ಇದೀಗ ಶಾಸಕ ಅರವಿಂದ ಲಿಂಬಾವಳಿಯಿಂದ ನಿಂದನೆಗೆ ಒಳಗಾಗಿದ್ದ ಮಹಿಳೆಯ ಮೇಲೆ ಬಿಬಿಎಂಪಿ ಎಂಜಿನಿಯರ್ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಒತ್ತುವರಿ ವಿಚಾರಕ್ಕೆ ಕ್ರಮ ಕೈಗೊಳ್ಳಲು ಹೋದಾಗ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಮಹಿಳೆ ವಿರುದ್ಧ ಆರೋಪಿಸಲಾಗಿದೆ.

ಮತ್ತೊಂದೆಡೆ ಶಾಸಕ ಅರವಿಂದ ಲಿಂಬಾವಳಿ ವರ್ತನೆಯನ್ನು ಮಹಾದೇವಪುರ ಕ್ಷೇತ್ರದ ಆಮ್ ಆದ್ಮಿ ಪಾರ್ಟಿ ಅಧ್ಯಕ್ಷ ಅಶೋಕ್ ಮೃತ್ಯುಂಜಯ ಖಂಡಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ತಪ್ಪು ಮಾಡಿದ್ರೆ ಶಿಕ್ಷಿಸಲು ಕಾನೂನು ಇದೆ. ಬಯ್ಯೋದಕ್ಕೆ ನೀವ್ಯಾರು ಅಂತಾ ತರಾಟೆಗೆ ತೆಗೆದುಕೊಂಡಿದ್ದಾರೆ. ಒಟ್ಟಾರೆ ಇವರ ವೀಡಿಯೋ ವೈರಲ್ ಆಗಿದೆ.

Leave A Reply

Your email address will not be published.