Bay Leaves: ಬೇ ಎಲೆ( ಪಲಾವ್ ಎಲೆ) ಆರೋಗ್ಯದ ಜೊತೆಗೆ ರುಚಿಗೆ ವರದಾನ, ಹಲವು ರೋಗಗಳಿಗೆ ರಾಮಬಾಣ

ಈಗಿನ ಫಾಸ್ಟ್ ಫುಡ್ ( Fast Food) ಯುಗದಲ್ಲಿ ಆರೋಗ್ಯದ ಕಡೆ ಗಮನ ಹರಿಸ ಲಾಗದೆ ಒದ್ದಾಡುವವರೆ ಹೆಚ್ಚು. ಆರೋಗ್ಯವೇ ಭಾಗ್ಯ ಎಂದು ಆರೋಗ್ಯದ ಬಗ್ಗೆ ಗಮನ ಹರಿಸುವವರಿಗೆ ಇಲ್ಲಿದೆ ದಾಲ್ಚಿನ್ನಿ ಎಲೆಯಿಂದ ನಿಮಗರಿಯದ ಪ್ರಯೋಜನಗಳು.

ಅಡುಗೆಗಳಲ್ಲಿ ಬಳಸುವ ಬೇ ಎಲೆ, ದಾಲ್ಚಿನ್ನಿ ಎಲೆ ( Bay Leaf) ಸುವಾಸನೆಯಿಂದಲೆ ಹೆಚ್ಚು ಜನಪ್ರಿಯವಾಗಿದ್ದರೂ ಅದರ ಔಷಧಿಯ ಗುಣಗಳಿಂದ ಸಮೃದ್ಧವಾಗಿರುವುದರರ ಬಗ್ಗೆ ಎಷ್ಟೋ ಮಂದಿಗೆ ಇನ್ನೂ ಹೆಚ್ಚು ತಿಳಿದಿಲ್ಲ.

ದಾಲ್ಚಿನ್ನಿ ಎಲೆ/ ಪಲಾವ್ ಎಲೆ ಮಸಾಲೆ ಪದಾರ್ಥವಾಗಿದ್ದು ರುಚಿ, ಸುವಾಸನೆ ಹೆಚ್ಚಿಸುವುದರ ಜೊತೆಗೆ ಆರೋಗ್ಯವರ್ಧನೆಗೂ ಸಹಕಾರಿಯಾಗಿದೆ. ಪಲಾವ್ ಎಲೆಯ ನಿಯಮಿತ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೇ ಹೃದಯ ಸಂಬಂಧಿತ ಸಮಸ್ಯೆಗಳಿಗೂ ಈ ಎಲೆ ರಾಮಬಾಣವಾಗಿದೆ. ಇದರ ಸೇವನೆಯಿಂದ ಅನೇಕ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು. ಬಿರಿಯಾನಿ ( Biriyani), ಪಲಾವ್ ಮಾಡುವಾಗ ಅದರಲ್ಲಿ ಬೇ ಎಲೆಗಳನ್ನು ಸೇರಿಸಲೇಬೇಕು. ಸಸ್ಯಹಾರ ಮಾತ್ರವಲ್ಲದೆ ಮಾಂಸಾಹಾರದಲ್ಲೂ ಬಳಸುವ ಖಾದ್ಯಗಳಿಗೆ ಸುವಾಸನೆ ನೀಡುವುದರ ಜೊತೆಗೆ ದೇಹಕ್ಕೆ ಉತ್ತಮ ಪೋಷಕಾಂಶಗಳನ್ನು ನೀಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

ವಿಟಮಿನ್ C ಮತ್ತು ವಿಟಮಿನ್ A ಈ ಪಲಾವ್ ಎಲೆಯಲ್ಲಿ ಕಂಡುಬರುವುದರಿಂದ ಈ ಎರಡೂ ಜೀವಸತ್ವಗಳು ನಮ್ಮ ದೇಹದ ಬೆಳವಣಿಗೆಯಲ್ಲಿ ಅತಿ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ವಿಟಮಿನ್ C ನಮ್ಮ ದೇಹದಲ್ಲಿ ಬಿಳಿ ರಕ್ತ ಕಣಗಳನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಅದೇ ರೀತಿ ವಿಟಮಿನ್ A ನಮ್ಮ ಕಣ್ಣುಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಬೇ ಎಲೆಯ ಪ್ರಯೋಜನಗಳನ್ನು ಗಮನಿಸುವುದಾದರೆ,
ಪಲಾವ್ ಎಲೆಯಲ್ಲಿ ತಾಮ್ರ, ಪೊಟ್ಯಾಷಿಯಮ್, ಕ್ಯಾಲ್ಸಿಯಂ, ಮೆಗ್ನೀಷಿಯಮ್, ಸೆಲೆನಿಯಮ್ ಮತ್ತು ಕಬ್ಬಿಣದ ಅಂಶವನ್ನು ಒಳಗೊಂಡಿರುವುದರಿಂದ ಉತ್ಕರ್ಷಣ ನಿರೋಧಕ ವಾಗಿ ಕಾರ್ಯನಿರ್ವಹಿಸುವುದಲ್ಲದೇ ಕ್ಯಾನ್ಸರ್, ರಕ್ತ ಹೆಪ್ಪುಗಟ್ಟುವಿಕೆ ಮತ್ತು ಹೃದಯ ಸಂಬಂಧಿತ ಸಮಸ್ಯೆಗಳನ್ನು ಸಹ ತೆಗೆದುಹಾಕುತ್ತದೆ.
ಈಗಿನ ಒತ್ತಡಯುತ ಕೆಲಸ, ಮನೆ ಜವಾಬ್ದಾರಿಯ ನಿರ್ವಹಿಸುವ ಯುವ ಪೀಳಿಗೆ ಯಿಂದ ಹಿಡಿದು ವಯಸ್ಸಾದ ವರಿಗೂ ಕಂಡು ಬರುವ ಬೆನ್ನು ನೋವಿಗೆ ಬೇ ಎಲೆಗಳ ಕಷಾಯ ರಾಮ ಬಾಣವಾಗಿದೆ.
ತಜ್ಞರು ಹೇಳುವ ಪ್ರಕಾರ ಒತ್ತಡದಿಂದ ಮುಕ್ತಿ ಹೊಂದಲು ಮಲಗುವ ಮುನ್ನ 2 ಎಲೆಗಳನ್ನು ತೆಗೆದುಕೊಂಡು ಅದನ್ನು ಕೋಣೆಯಲ್ಲಿ ಸುಟ್ಟು ಇಟ್ಟುಕೊಳ್ಳುವುದರಿಂದ ಅದರಿಂದ ಬರುವ ಹೊಗೆ ಒತ್ತಡವನ್ನು ಕಡಿಮೆ ಮಾಡುತ್ತದೆ. ಉಸಿರಾಟಕ್ಕೆ ತೊಂದರೆ ಉಂಟಾದರೆ ಈ ಬಿರಿಯಾನಿ ಎಲೆಗಳನ್ನು ತಿನ್ನುವುದು ಉತ್ತಮ ಎಂದು ಹೇಳಲಾಗುತ್ತದೆ. ಈ ಎಲೆಗಳನ್ನು ನೀರಿನಲ್ಲಿ ಕುದಿಸಿ ಎದೆಗೆ ಕರವಸ್ತ್ರದಂತಹ ಬಟ್ಟೆಯನ್ನು ಹಾಕಿದರೆ ಉಸಿರಾಟದ ಸಮಸ್ಯೆ ದೂರವಾಗುತ್ತದೆ.
ಬೇ ಎಲೆಯ ಕಷಾಯವು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.
ಮನೆಯಲ್ಲಿ ಬೇ ಎಲೆಗಳ ಸಹಾಯದಿಂದ ಅನೇಕ ರೋಗಗಳನ್ನು ತೊಡೆದುಹಾಕಬಹುದು.

ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುವವರು
ರಾತ್ರಿ ಮಲಗುವ ಮುನ್ನ ಈ ಎಲೆಯನ್ನು ಉಪಯೋಗಿಸಿದರೆ ನಿದ್ರಾಹೀನತೆಯಿಂದ ಮುಕ್ತಿ ಪಡೆಯಬಹುದು.ಇದಲ್ಲದೇ ಬೆಚ್ಚನೆಯ ನೀರಿನಲ್ಲಿ ಕೆಲವು ಹನಿ ಎಲೆಯ ಎಣ್ಣೆಯನ್ನು ಬೆರೆಸಿ ಕುಡಿಯುವುದರಿಂದ ಉತ್ತಮ ನಿದ್ರೆ ಬರುತ್ತದೆ.
ಶುಗರ್ ರೋಗಿಗಳಿಗೆ ಪಲಾವ್ ಎಲೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಇದರ ಸೇವನೆಯು ಮಧುಮೇಹ ರೋಗಿಗಳಲ್ಲಿ ಹೆಚ್ಚುತ್ತಿರುವ ಅಥವಾ ಕಡಿಮೆಯಾಗುತ್ತಿರುವ ಇನ್ಸುಲಿನ್ ಪ್ರಮಾಣವನ್ನು ನಿಯಂತ್ರಿಸಲು ಕೆಲಸ ಮಾಡುತ್ತದೆ. ನೀವು ಆಹಾರದಲ್ಲಿ ಸಂಪೂರ್ಣ ಎಲೆ ಅಥವಾ ಇದರ ತುಂಡುಗಳನ್ನು ಹಾಕಿ ಅಡುಗೆ ಮಾಡಿ ಸೇವಿಸಬಹುದು.

ಅನೇಕ ಜನರು ಆಹಾರವನ್ನು ಜೀರ್ಣಿಸಿಕೊಳ್ಳುವಲ್ಲಿ ತೊಂದರೆಯನ್ನು ಎದುರಿಸಬೇಕಾಗುತ್ತದೆ. ಆಹಾರ ಸೇವಿಸಿದ ತಕ್ಷಣ ಮಲಬದ್ಧತೆ, ಸೆಳೆತ ಅಥವಾ ಅಸಿಡಿಟಿಯಂತಹ ಸಮಸ್ಯೆಗಳು ಕಾಣಿಸಿಕೊಂಡಾಗ ಎಲೆಯನ್ನು ಬಳಸಿ ತರಕಾರಿಗಳೊಂದಿಗೆ ಸೇವಿಸಿದರೆ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಿಂದ ಪರಿಹಾರ ಪಡೆಯಬಹುದು.
ಮೂತ್ರಪಿಂಡದ ಸಮಸ್ಯೆ ಕಂಡುಬಂದಾಗಲೂ ಕೂಡ, ಬೇ ಎಲೆಯ ಬಳಕೆಯಿಂದ ಮೂತ್ರಪಿಂಡದಲ್ಲಿ ಕಲ್ಲುಗಳು ರೂಪುಗೊಳ್ಳುವುದನ್ನು ನಿಯಂತ್ರಿಸಿ ತನ್ನ ಕಾರ್ಯವನ್ನು ಸರಾಗವಾಗಿ ನಿರ್ವಹಿಸಲು ಸಹಕಾರಿಯಾಗಿದೆ. ಇದರಿಂದ ಮೂತ್ರ ವಿಸರ್ಜನೆಗೆ ಸಂಬಂಧಿಸಿದ ಸಮಸ್ಯೆಗಳೂ ಶಾಶ್ವತವಾಗಿ ದೂರವಾಗುತ್ತವೆ.

ಬೇ ಎಲೆ ಕಷಾಯ ಮಾಡುವುದು ಹೇಗೆ? ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದ್ದರೆ ಇಲ್ಲಿದೆ ಉತ್ತರ;

ಕಷಾಯ ತಯಾರಿಸಲು 10 ಗ್ರಾಂ ಬೇ ಎಲೆಗಳು, 10 ಗ್ರಾಂ ಓಮ ಕಾಳು ಮತ್ತು 5 ಗ್ರಾಂ ಫೆನ್ನೆಲ್ ಸೋಂಪು ಅನ್ನು ಒಟ್ಟಿಗೆ ರುಬ್ಬುವ ಮೂಲಕ ಮಿಶ್ರಣವನ್ನು ತಯಾರಿಸಿ.ಈಗ ಈ ಪೇಸ್ಟ್ ಅನ್ನು 1 ಲೀಟರ್ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಕುದಿ ಬಂದ ನಂತರ ನೀರು100- 150 ಮಿಲಿ ಉಳಿದಿರುವಾಗ, ಗ್ಯಾಸ್ ಆಫ್ ಮಾಡಿ. ಸ್ವಲ್ಪ ಸಮಯದ ನಂತರ, ಮಿಶ್ರಣವು ತಣ್ಣಗಾದಾಗ, ಕಷಾಯ ಕುಡಿಯಲು ಸಿದ್ಧವಾಗುತ್ತದೆ.
ದಿನದಲ್ಲಿ 2 ಬಾರಿ ಕುಡಿದರೆ ನೋವು ನಿವಾರಣೆಯ ಜೊತೆಗೆ ಆರೋಗ್ಯವನ್ನು ಕೂಡ ಕಾಪಾಡಲು ನೆರವಾಗುತ್ತದೆ.

ಸಾಸಿವೆ ಎಣ್ಣೆಯಲ್ಲಿ ಬೇ ಎಲೆಗಳನ್ನು ಕಾಯಿಸಿ ಎಣ್ಣೆಯನ್ನು ತಯಾರಿಸಬಹುದು. ಬೇ ಎಣ್ಣೆಯನ್ನು ಸೊಂಟದ ಮೇಲೆ ಮಸಾಜ್ ಮಾಡುವುದರಿಂದ ಹೆಚ್ಚು ಪ್ರಯೋಜನ ಪಡೆಯಬಹುದು.
ಗಾಯ ಅಥವಾ ಉಳುಕಿನ ಸಂದರ್ಭದಲ್ಲಿ, ಬೇ ಎಲೆಗಳ ಕಷಾಯ ಕುಡಿಯಬೇಕು ಮತ್ತು ಈ ಬೇ ಎಲೆಗಳನ್ನು ಪುಡಿಮಾಡಿ ಉಳುಕಿದ ಜಾಗಕ್ಕೆ ಎಣ್ಣೆಯನ್ನು ಹಚ್ಚುವುದರಿಂದ ಉಳುಕಿನಿಂದ ಉಂಟಾಗುವ ಊತ ಮತ್ತು ನೋವಿನಿಂದ ಪರಿಹಾರ ಪಡೆಯಬಹುದು. ಅಷ್ಟೇ ಅಲ್ಲದೆ ಶೀತ ,ಕೆಮ್ಮು ಇದ್ದಾಗಲೂ ಈ ಕಷಾಯ ಸೇವನೆ ರೋಗ ನಿಯಂತ್ರಣವಾಗಲು ನೆರವಾಗುತ್ತದೆ.

Leave A Reply

Your email address will not be published.