ನ್ಯಾಷನಲ್ ಪೆನ್ಷನ್ ಸಿಸ್ಟಮ್‌ನಿಂದ ಉದ್ಯೋಗ: ಗ್ರೇಡ್‌ ಎ, ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಆಸಕ್ತರು ಅರ್ಜಿ ಸಲ್ಲಿಸಿ

ನ್ಯಾಷನಲ್ ಪೆನ್ಷನ್ ಸಿಸ್ಟಮ್ ಟ್ರಸ್ಟ್‌ ( NPS Trust) ಇವರಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು.

ಗ್ರೇಡ್‌ ಎ ಮತ್ತು ಗ್ರೇಡ್‌ ಬಿ ಹುದ್ದೆಗಳ ನೇಮಕಾತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿ. ವಿವಿಧ ವಿಭಾಗಗಳಲ್ಲಿ ಈ ಹುದ್ದೆಗಳನ್ನು ನೇಮಕ ಮಾಡಲಾಗುತ್ತದೆ. ಮಿಡಿಯಾ ಮಾರ್ಕೆಟಿಂಗ್ ಮತ್ತು ಸಬ್‌ಸ್ಕ್ರೈಬರ್ ಎಜುಕೇಷನ್, ರಾಜ್‌ಭಾಷಾ, ಇನ್‌ವೆಸ್ಟ್‌ಮೆಂಟ್‌ ಮತ್ತು ರಿಸರ್ಚ್‌, ಐಟಿ ಲೀಗಲ್ ವಿಭಾಗಗಳಲ್ಲಿ ಈ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 30-08-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20-09-2022
ಅಪ್ಲಿಕೇಶನ್‌ ತಿದ್ದುಪಡಿಗೆ ಕೊನೆ ದಿನಾಂಕ: 20-09-2022
ಅಪ್ಲಿಕೇಶನ್‌ ಪ್ರಿಂಟ್ ತೆಗೆದುಕೊಳ್ಳಲು ಕೊನೆ ದಿನಾಂಕ: 05-01-2022
ಆನ್‌ಲೈನ್‌ ಮೂಲಕ ಶುಲ್ಕ ಪಾವತಿಗೆ ಕೊನೆ ದಿನಾಂಕ: 20-09-2022

ಹುದ್ದೆಗಳ ವಿವರ
ಅಸಿಸ್ಟಂಟ್ ಮ್ಯಾನೇಜರ್ ಇನ್ ಮಿಡಿಯಾ ಮಾರ್ಕೆಟಿಂಗ್ ಮತ್ತು ಸಬ್‌ಸ್ಕ್ರೈಬರ್ ಎಜುಕೇಷನ್‌ : 1
ಅಸಿಸ್ಟಂಟ್ ಮ್ಯಾನೇಜರ್ ಇನ್ ರಾಜ್‌ಭಾಷಾ: 1
ಅಸಿಸ್ಟಂಟ್ ಮ್ಯಾನೇಜರ್ ಇನ್ ಇನ್‌ವೆಸ್ಟ್‌ಮೆಂಟ್‌ ಮತ್ತು ರಿಸರ್ಚ್ : 02
ಅಸಿಸ್ಟಂಟ್‌ ಮ್ಯಾನೇಜರ್ ಇನ್ಫಾರ್ಮೇಷನ್ ಟೆಕ್ನಾಲಜಿ ಐಟಿ: 1
ಅಸಿಸ್ಟಂಟ್ ಮ್ಯಾನೇಜರ್ ಲೀಗಲ್ : 1
ಮ್ಯಾನೇಜರ್ ಮಿಡಿಯಾ ಮಾರ್ಕೆಟಿಂಗ್ ಮತ್ತು ಸಬ್‌ಸ್ಕೈಬರ್ ಎಜುಕೇಷನ್ : 1
ಮ್ಯಾನೇಜರ್ ಇನ್‌ವೆಸ್ಟ್‌ಮೆಂಟ್ ಮತ್ತು ಸಂಶೋಧನೆ : 1

ವೇತನ : ಗ್ರೇಡ್‌ ಎ (ಅಸಿಸ್ಟಂಟ್ ಮ್ಯಾನೇಜರ್ ) : ರೂ.44,500 -ರೂ. 89,150.
ಗ್ರೇಡ್‌ ಎ (ಮ್ಯಾನೇಜರ್ ) : ರೂ.55,200 – ರೂ.99,750.

ವಿದ್ಯಾರ್ಹತೆ : ಕಾನೂನು / ಹಿಂದಿ ಭಾಷೆ / ಸಂಸ್ಕೃತ ಭಾಷೆ / ಹಣಕಾಸು / ವ್ಯವಹಾರ / ಐಟಿ ಕ್ಷೇತ್ರದ ವಿಷಯಗಳಲ್ಲಿ ಪದವಿ / ಸ್ನಾತಕೋತ್ತರ ಪದವಿ ಪಾಸ್ ಮಾಡಿರಬೇಕು.

ಅನುಭವ : ಮ್ಯಾನೇಜರ್ ಹುದ್ದೆಗಳಿಗೆ ವಿದ್ಯಾರ್ಹತೆ ನಂತರದಲ್ಲಿ ಕನಿಷ್ಠ 3 ವರ್ಷ ಕಾರ್ಯಾನುಭವ ಹೊಂದಿರಬೇಕು. ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಗಳಿಗೆ ವಿದ್ಯಾರ್ಹತೆ ನಂತರ ಕನಿಷ್ಠ 2 ವರ್ಷ ಕಾರ್ಯಾನುಭವ ಹೊಂದಿರಬೇಕು. ವಯೋಮಿತಿ ಅರ್ಹತೆ : ಗರಿಷ್ಠ 30 ವರ್ಷ ಮೀರಿರಬಾರದು.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

Leave A Reply

Your email address will not be published.