ಬಿಯರ್ ಕುಡಿಯುವವರೇ ಎಚ್ಚರ | ಸೊಳ್ಳೆ ನಿಮ್ಮಲ್ಲಿಗೆ ಹೆಚ್ಚು ಆಕರ್ಷಿತರಾಗುತ್ತವೆ | ಯಾಕೆಂದು ಇಂಟೆರೆಸ್ಟಿಂಗ್ ಕಾರಣವೊಂದಿದೆ!!

‘ಈಗ’ ಅಂತಾ ಒಂದು ಸಿನಿಮಾ ಬಂದಿದ್ದು, ಎಲ್ಲರಿಗೂ ತಿಳಿದೇ ಇದೆ. ಒಂದು ಸೊಳ್ಳೆ ಸೇಡು ತೀರಿಸುವ ಕಥಾ ಹಂದರವನ್ನು ಒಳಗೊಂಡಿರುವ ಸಿನಿಮಾ ಇದು. ಆದರೆ ನಾವು ಇಲ್ಲಿ ಮಾತಾಡೋಕೆ ಹೊರಟಿರುವುದು ಸೊಳ್ಳೆ ಕೆಲವನ್ನು ಮಾತ್ರವೇ ಆರಿಸಿ, ಆರಿಸಿ ಹೆಚ್ಚು ಕಚ್ಚುವ ವಿಷಯದ ಬಗ್ಗೆ. ಆಶ್ಚರ್ಯ ಅಂದರೆ ಕೆಲವರ ತಂಟೆಗೆ ಅದು ಹೋಗುವುದಿಲ್ಲ. ನಿಮಗೂ ಆಶ್ಚರ್ಯವಾಯಿತಾ? ಹಾಗಾದರೆ ಬನ್ನಿ ಏನಿದರ ಮರ್ಮ…

ಪ್ರತಿ ಮನೆಯಲ್ಲೂ ಸೊಳ್ಳೆಗಳು ಕಂಡುಬರುತ್ತವೆ. ಸೊಳ್ಳೆಗಳು ಕೆಲವು ರಕ್ತದ ಗುಂಪುಗಳಿಗೆ ಆಕರ್ಷಿತವಾಗುತ್ತವೆ. ವಾಸ್ತವವಾಗಿ, ಹೆಣ್ಣು ಸೊಳ್ಳೆಗಳು ಮಾತ್ರ ಮನುಷ್ಯರನ್ನು ಕಚ್ಚುತ್ತವೆ. ಅವು ನಮ್ಮ ದೇಹದಿಂದ ರಕ್ತದ ಮೂಲಕ ಪ್ರೋಟೀನುಗಳನ್ನು ಸಂಗ್ರಹಿಸುತ್ತವೆ. ಹಾಗಾಗಿ ಕೆಲವು ನಿರ್ದಿಷ್ಟ ರಕ್ತದ
ಗುಂಪುಗಳ ಜನರನ್ನು ಅವು ಹೆಚ್ಚು ಕಚ್ಚುತ್ತವೆ ಎನ್ನುತ್ತವೆ ಅಧ್ಯಯನಗಳು.

A-ಗುಂಪಿನ ರಕ್ತ ಹೊಂದಿರುವ ಜನರು ವಿಶೇಷವಾಗಿ ಸೊಳ್ಳೆ ಕಡಿತಕ್ಕೆ ತುತ್ತಾಗುತ್ತಾರೆ. ಆದರೆ 0-ಬ್ಲಡ್ ಗ್ರೂಪ್ ಇರುವವರನ್ನು ಅದಕ್ಕಿಂತ ಎರಡು ಪಟ್ಟು ಹೆಚ್ಚು ರಕ್ತ ಹೀರುತ್ತದೆ. ಸೊಳ್ಳೆಗಳು ಮನುಷ್ಯರ ಉಸಿರಾಟದ ವಾಸನೆಯ ಮೂಲಕ ಜನರ ರಕ್ತದ ಗುಂಪುಗಳನ್ನು ಕಂಡುಹಿಡಿಯುತ್ತದೆ.

ಸೊಳ್ಳೆಗಳು, ಕಾರ್ಬನ್ ಡೈಆಕ್ಸೆಡ್ , ಲ್ಯಾಕ್ಟಿಕ್ ಆಮ್ಲ ಯೂರಿಕ್ ಆಸಿಡ್, ಅಮೋನಿಯಾ ಮತ್ತು ಬೆವರಿನ ಮೂಲಕ ಬಿಡುಗಡೆಯಾಗುವ ಇತರ ವಸ್ತುಗಳನ್ನು ವಾಸನೆ ಮೂಲಕ ಗ್ರಹಿಸುತ್ತದೆ. ಲ್ಯಾಕ್ಟಿಕ್ ಆಮ್ಲವು ದೇಹದಲ್ಲಿ ಶಾಖವನ್ನು ಉತ್ಪಾದಿಸುವುದರಿಂದ, ಸೊಳ್ಳೆಗಳು ಅದನ್ನು ಬೇಗ ಪತ್ತೆ ಮಾಡಬಹುದು. ರಕ್ತದಲ್ಲಿ ಯೂರಿಕ್ ಆಸಿಡ್ ಅಧಿಕವಾಗಿರುವ ಜನರನ್ನು ಸೊಳ್ಳೆಗಳು ಹೆಚ್ಚು ಕಚ್ಚುತ್ತವೆ.

ಸಂಶೋಧಕರು 2011 ರ ಅಧ್ಯಯನದಲ್ಲಿ ಈ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಕೆಲವು ಜನರು ಬ್ಯಾಕ್ಟಿರಿಯಾದ ಸೋಂಕಿಗೆ ಹೆಚ್ಚು ಒಳಗಾಗುತ್ತಾರೆ ಎಂದು ಅವರ ಸಂಶೋಧನೆಯಿಂದ ತಿಳಿದುಬಂದಿದೆ. ಹೆಚ್ಚು ಬಿಯರ್ ಕುಡಿಯುವವರಿಗೂ ಸೊಳ್ಳೆಗಳು ಕಚ್ಚುತ್ತವೆ. ಪ್ರತಿನಿತ್ಯ ಬಿಯರ್ ಕುಡಿಯುವವರ ಬೆವರಿನ ಮೂಲಕ ಎಥೆನಾಲ್ ಬಿಡುಗಡೆಯಾಗುತ್ತದೆ. ಹಾಗಾಗಿ ಬಿಯರ್ ಪ್ರಿಯರಿಗೆ ಸೊಳ್ಳೆಗಳ ಕಾಟ ಹೆಚ್ಚೇ ಎಂದು ಹೇಳಬಹುದು.

ಅಲ್ಲದೆ, ಗರ್ಭಿಣಿಯರನ್ನು ಸಹ ಸೊಳ್ಳೆಗಳು ಹೆಚ್ಚು
ಕಚ್ಚುತ್ತವೆ ಎಂದು ಅನೇಕ ಅಧ್ಯಯನಗಳು ತೋರಿಸಿವೆ. ಕಾರಣ ಗರ್ಭಿಣಿಯರ ದೇಹದ ಉಷ್ಣತೆ ಹೆಚ್ಚಾಗಿರುತ್ತದೆ. ಅಲ್ಲದೆ ಅವರ ದೇಹದಿಂದ ಹೆಚ್ಚು ಇಂಗಾಲದ ಡೈಆಕ್ಸೆಡ್ ಬಿಡುಗಡೆಯಾಗುತ್ತದೆ. ಅದಕ್ಕಾಗಿ ಕೂಡಾ
ಸೊಳ್ಳೆಗಳು ಹೆಚ್ಚು ಆಕರ್ಷಿತವಾಗುತ್ತವೆ

Leave A Reply

Your email address will not be published.