ಇಂದು ಮತ್ತೆ ಸಂಭವಿಸಿದ ಭಾರೀ ಭೂಕಂಪ | 6.1 ತೀವ್ರತೆಯ ಭೂಕಂಪನ

ಈ ವರ್ಷ ಉಂಟಾದಷ್ಟು ಭೂಕಂಪ ನಿಜಕ್ಕೂ ಬೇರೆ ಯಾವ ವರ್ಷನೂ ಉಂಟಾಗಿಲ್ವೇನೋ ಅನ್ನೋ ಮಟ್ಟಿಗೆ ಭಯದ ವಾತಾವರಣ ಇದೆ. ಏಕೆಂದರೆ ಪದೇ ಪದೇ ಹಲವಾರು ಕಡೆ ಭೂಕಂಪ ಆಗಿರುವ ವರದಿ ಆಗ್ತಾ ಇದೆ. ಈಗ ಇಂಡೋನೇಷ್ಯಾದಲ್ಲಿ ಇಂದು ಬೆಳಗ್ಗೆ ಭಾರಿ ಭೂಕಂಪನ ಉಂಟಾಗಿದ್ದು, ರಾಜಧಾನಿ ಸುಮಾತ್ರಾದ ಪಶ್ಚಿಮದಲ್ಲಿರುವ ಪರಿಮನ್ ಬಳಿ ಈ ಭೂಕಂಪನದ ಅನುಭವ ಆಗಿದ್ದು, ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ.

ಸೋಮವಾರದ ಮುಂಜಾನೆಯಿಂದ ಮೂರು ಬಾರಿ ಸತತ ಭೂಕಂಪಗಳು ಉಂಟಾಗಿದೆ. ಮುಂಜಾನೆಯ ಮೊದಲು 5.2 ತೀವ್ರತೆಯ ಭೂಕಂಪ ದಾಖಲಾಗಿದೆ. ಆ ಬಳಿಕ ಒಂದು ಗಂಟೆಯ ನಂತರ 5.4 ತೀವ್ರತೆಯ ಭೂಕಂಪನ ಸಂಭವಿಸಿದೆ.

6.1 ತೀವ್ರತೆಯ ಭೂಕಂಪವನ್ನು ಮೆಂಟವಾಯ್ ದ್ವೀಪಗಳಲ್ಲಿ, ಪ್ರಾಂತೀಯ ರಾಜಧಾನಿ ಪಡಂಗ್‌ನಲ್ಲಿ ಮತ್ತು ಬುಕಿಟುಗ್ಗಿಯ ಸುತ್ತಮುತ್ತಲಿನ ಪರ್ವತ ಪ್ರದೇಶದಲ್ಲಿ ನಿವಾಸಿಗಳು ಹಲವಾರು ಸೆಕೆಂಡುಗಳ ಭಾರೀ ತೀವ್ರತೆಯೊಂದಿಗೆ ಬಂದಿದೆ ಎನ್ನಲಾಗಿದೆ. ಮತ್ತು ಈ ಕುರಿತು ಇಂಡೋನೇಷ್ಯಾದ ಹವಾಮಾನ ಮತ್ತು ಭೂಭೌತಶಾಸ್ತ್ರ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಭೂಕಂಪದ ಕೇಂದ್ರವು ಭೂಮಿಯ ಒಳಭಾಗದಲ್ಲಿ 119 ಕಿಲೋ ಮೀಟರ್ ಆಳದಲ್ಲಿ ದಾಖಲಾಗಿದೆ. ಆದರೆ, ಹೆಚ್ಚು ತೀವ್ರವಾದ ಕಂಪನವು ಸಮುದ್ರದೊಳಗೆ ಸಂಭವಿಸಿದ್ದರೂ ಸುನಾಮಿ ಅಪಾಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Leave A Reply

Your email address will not be published.