ಬಲವಂತದಿಂದ ಕಾಂಗ್ರೆಸ್ ತೊರೆಯುವಂತೆ ಮಾಡಲಾಗಿದೆ – ಮಾಜಿ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್

ನವದೆಹಲಿ: ಕಾಂಗ್ರೆಸ್​ನ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಕಾಂಗ್ರೆಸ್​ ಪಕ್ಷಕ್ಕೆ ರಾಜೀನಾಮೆ ನೀಡಿದ ಬಳಿಕ ಅವರ ಮುಂದಿನ ನಡೆಯ ಬಗ್ಗೆ ಭಾರೀ ಚರ್ಚೆಗಳು ನಡೆದಿದ್ದವು. ಕಾಂಗ್ರೆಸ್ ತೊರೆದು ಅವರು ಬಿಜೆಪಿ ಸೇರಲಿದ್ದಾರೆ ಎಂದು ಕೂಡ ಹೇಳಲಾಗಿತ್ತು. ಆದರೆ, ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ ದಿನವೇ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ಪಕ್ಷ ಕಟ್ಟುವ ನಿರ್ಧಾರವನ್ನು ಘೋಷಿಸಿದ್ದರು. ಇದೀಗ ನನ್ನನ್ನು ಬಲವಂತದಿಂದ ಕಾಂಗ್ರೆಸ್ ತೊರೆಯುವಂತೆ ಮಾಡಲಾಗಿದೆ ಎಂದು ಮಾಜಿ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಸೋಮವಾರ ಹೇಳಿದ್ದಾರೆ.

ಕಾಂಗ್ರೆಸ್ ನಲ್ಲಿ ಹಲವು ಬಾರಿ ಸಭೆ ನಡೆದಿದೆ. ಆದರೆ, ಒಂದು ಸಲಹೆ ಕೂಡಾ ನೀಡಲಿಲ್ಲ. ನನನ್ನು ಬಲವಂತದಿಂದ ಕಾಂಗ್ರೆಸ್ ತೊರೆಯುವಂತೆ ಮಾಡಲಾಗಿದೆ ಎಂದು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿದೆ.

ಪ್ರಧಾನಮಂತ್ರಿ, ನಾನು ನಿಮ್ಮನ್ನು ನಿವೃತ್ತಿ ಮಾಡಲು ಬಿಡುವುದಿಲ್ಲ, ನಾನು ನಿಮ್ಮ ಸಲಹೆಯನ್ನು ಮುಂದುವರಿಸುತ್ತೇನೆ. ನಮ್ಮ ಬಾಗಿಲು ಯಾವಾಗಲೂ ನಿಮಗಾಗಿ ತೆರೆದಿರುತ್ತದೆ ಎಂದಿದ್ದರು. ನಂತರ ಆಜಾದ್ ಕೂಡ ಜಮ್ಮುವಿನಲ್ಲಿ ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿಯನ್ನು ಹೊಗಳಿದ್ದರು. ಇದೀಗ ಮಾತನಾಡುತ್ತಾ,  ಮೋದಿ ಮನ್ನಿಸುವವರು,  ಜಿ-23 ನಾಯಕರು ಪತ್ರ ಬರೆದಾಗಿನಿಂದಲೂ ಅವರು ನನ್ನೊಂದಿಗೆ ಸಂಪರ್ಕ ಹೊಂದಿದ್ದರು. ಆದರೆ, ಕಾಂಗ್ರೆಸ್ ಸಲಹೆ ಕೂಡ ನೀಡಿಲ್ಲ ಎಂದಿದ್ದಾರೆ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಇಂದು ಅರ್ಥಹೀನವಾಗಿದೆ ಎಂದ ಆಜಾದ್, ಪ್ರಧಾನಿ ಮೇಲೆ ವಾಗ್ದಾಳಿ ನಡೆಸುವ ರಾಹುಲ್ ಗಾಂಧಿ ಅವರ ನೀತಿಯನ್ನು ಟೀಕಿಸಿದರು. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಹೆಚ್ಚಾಗಿ ಸಮಾಲೋಚನಾತ್ಮಕ ರಾಜಕಾರಣದಲ್ಲಿ ನಂಬಿಕೆ ಹೊಂದಿದ್ದರು. ಆದರೆ, ಇದನ್ನು ರಾಹುಲ್ ಗಾಂಧಿ ಹಾಳು ಮಾಡಿದರು ಎಂದು ಆಜಾದ್ ಆರೋಪಿಸಿದರು. ಅಲ್ಲದೆ, ಬಿಜೆಪಿ ಸೇರ್ಪಡೆಯನ್ನು ಅವರು ತಳ್ಳಿ ಹಾಕಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.

Leave A Reply

Your email address will not be published.