ಭಾರತದ ಮೊದಲ ಎಲೆಕ್ಟ್ರಿಕ್‌ ಡಬ್ಬಲ್ ಡೆಕ್ಕರ್ ಬಸ್‌ ಇಂದಿನಿಂದ ಆರಂಭ- ಏನಿದರ ವಿಶೇಷತೆ?

ದೇಶದ ಮೊದಲ ಡಬ್ಬಲ್ ಡೆಕ್ಕರ್ ಹವಾನಿಯಂತ್ರಿತ (ಎಸಿ) ಬಸ್ ಸೇರಿದಂತೆ 2 ಎಲೆಕ್ಟ್ರಿಕ್‌ ಬಸ್‌ಗಳು ಮುಂಬೈನಲ್ಲಿ ಇಂದಿನಿಂದ ಕಾರ್ಯಾರಂಭ ಮಾಡಲಿವೆ.

ಈ ಬಸ್‌ಗಳು ಉತ್ತಮ ಆಕರ್ಷಣೆಯಾಗಿದ್ದು, ಪ್ರವಾಸೋದ್ಯಮಕ್ಕೂ ಸಹ ಉತ್ತೇಜನ ನೀಡಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಬಸ್‌ಗಳಲ್ಲಿ 1 ಆ್ಯಪ್ ನಿಯಂತ್ರಿತ ಆಗಿದ್ದು, ಮತ್ತೊಂದು ನಿಯಂತ್ರಿತ ಎಲೆಕ್ಟಿಕ್ ಡಬ್ಬಲ್ ಡೆಕ್ಕರ್ ಬಸ್ ಆಗಿದೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಹಾಗೂ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಈ ಬಸ್‌ಗಳಿಗೆ ಚಾಲನೆ ನೀಡಲಿದ್ದಾರೆ. ಮುಂಬೈ ನಗರ ಸಾರ್ವಜನಿಕ ಸಾರಿಗೆ ನಗರದಾದ್ಯಂತ ಆಪ್ ಆಧಾರಿತ ಬಸ್ ಸೇವೆ ನೀಡಲು ಯೋಜನೆ ರೂಪಿಸಿದೆ.

ಇತ್ತೀಚೆಗೆ ದೆಹಲಿಯ ಕೇಜ್ರಿವಾಲ್ ಅವರ ನೇತೃತ್ವದ ಸರ್ಕಾರ ಸುಮಾರು 200 ಎಲೆಕ್ಟ್ರಿಕ್‌ ಬಸ್‌ಗಳು ರಸ್ತೆಗೆ ಇಳಿದಿತ್ತು .

ಭಾರತದಲ್ಲಿ ಹೆಚ್ಚುತ್ತಿರುವ ಪೆಟ್ರೋಲ್ ಡೀಸೆಲ್ ಬೆಲೆ ಎಲ್ಲ ಸಾರಿಗೆ ಸಂಸ್ಥೆಗಳು ಸಾಲದ ಸುಳಿಯಲ್ಲಿ ನಷ್ಟ ಅನುಭವಿಸಿರುವ ಸಂದರ್ಬದಲ್ಲಿ ಎಚ್ಚೆತ ಭಾರತ ಸರ್ಕಾರ ಎಲೆಕ್ಟ್ರಿಕ್ ವಾಹನಗಳು ಪರಿಚಯಿಸುತ್ತಿದೆ.

Leave A Reply

Your email address will not be published.