ಬರೋಬ್ಬರಿ 3.30 ಲಕ್ಷ ಬಿಪಿಎಲ್ ಅಂತ್ಯೋದಯ ರೇಷನ್ ಕಾರ್ಡ್ ರದ್ದುಗೊಳಿಸಿದ ಸರಕಾರ!!!

ಬಡವರ ರೇಷನ್ ಕಾರ್ಡ್‌ (ಬಿಪಿಎಲ್) ನ್ನು ಅನಧಿಕೃತವಾಗಿ ಹೊಂದಿರುವ ಎಲ್ಲರ ಕಾರ್ಡನ್ನು ರದ್ದುಪಡಿಸಲಾಗಿದೆ. ಐಷಾರಾಮಿ ಕಾರ್ ಹೊಂದಿದವರು ಕೂಡ ಬಿಪಿಎಲ್ ಕಾರ್ಡ್ ಪಡೆದುಕೊಂಡಿರುವುದು ಪತ್ತೆಯಾಗಿದ್ದು 12,584 ಕಾರ್ ಮಾಲೀಕರ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ. ರಾಜ್ಯದಲ್ಲಿ ಕಾರ್ ಹೊಂದಿದವರು ಕೂಡ ಪಡಿತರ ಚೀಟಿ ಪಡೆದುಕೊಂಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಸಾರಿಗೆ ಇಲಾಖೆಯ ಸಹಕಾರ ಪಡೆದುಕೊಂಡಿದ್ದಾರೆ.

ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದ ಸದಸ್ಯರು ಕಾರ್ ಖರೀದಿಸಿ ನೋಂದಣಿ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, 12,584 ಕುಟುಂಬಗಳು ಕಾರ್ ಗಳನ್ನು ಹೊಂದಿದ್ದರೂ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ ಗಳನ್ನು ಪಡೆದಿರುವುದು ಪತ್ತೆಯಾಗಿದೆ. ಅಂತಹ ಕಾರ್ಡ್ಗ ಳನ್ನು ರದ್ದು ಮಾಡಲಾಗಿದೆ. ಈ 12,584 ಕುಟುಂಬಗಳು ಸೇರಿದಂತೆ ಸುಮಾರು 3.30 ಲಕ್ಷ ಕುಟುಂಬಗಳ ಬಿಪಿಎಲ್, ಅಂತ್ಯೋದಯ ಪಡಿತರ ಕಾರ್ಡ್ ಗಳನ್ನು ಆಹಾರ ಇಲಾಖೆ ರದ್ದುಪಡಿಸಿದೆ ಎಂದು ಹೇಳಲಾಗಿದೆ.

21,679 ಅಂತ್ಯೋದಯ, 3,08,345 ಬಿಪಿಎಲ್ ಪಡಿತರ ಚೀಟಿ ಸೇರಿದಂತೆ ಸುಮಾರು 3.30 ಲಕ್ಷ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದ್ದು, ಕೆಲವು ಪಡಿತರ ಚೀಟಿಗಳನ್ನು ಎಪಿಎಲ್ ಕಾರ್ಡ್ ಗೆ ಬದಲಾಯಿಸಿ ಕೊಡಲಾಗಿದೆ.

ಬಿಎಂಡಬ್ಲ್ಯು, ಟಯೋಟ, ಫಾರ್ಚೂನರ್, ಟಯೋಟ, ಫೋರ್ಡ್, ವೋಲ್ಸ್ ವ್ಯಾಗನ್ ಸೇರಿದಂತೆ ಐಷಾರಾಮಿ ಕಾರುಗಳನ್ನು ಹೊಂದಿರುವ ಕುಟುಂಬಗಳ ಬಳಿಯೂ ಅಂತ್ಯೋದಯ, ಬಿಪಿಎಲ್ ಕಾರ್ಡ್ ಪತ್ತೆಯಾಗಿದೆ.

ಲಕ್ಷಾಂತರ ರು. ಮೌಲ್ಯದ ಕಾರುಗಳನ್ನು ಹೊಂದಿರುವ ಈ ಕುಟುಂಬಗಳು ಹಲವು ವರ್ಷಗಳಿಂದ ಪ್ರತಿ ತಿಂಗಳು ಬಡವರ ಪಾಲಿನ ಉಚಿತ ಅಕ್ಕಿ, ರಾಗಿ, ಜೋಳವನ್ನು ಪಡೆಯುತ್ತಿರುವುದು ಬೆಳಕಿಗೆ ಬಂದಿದ್ದು, ಸುಳ್ಳು ಮಾಹಿತಿ ನೀಡಿ ಅನ್ನಭಾಗ್ಯದ ಪಡಿತರ ಚೀಟಿಗಳನ್ನು (ಬಿಪಿಎಲ್, ಅಂತ್ಯೋದಯ) ಪಡೆದಿದ್ದ ಇಂತಹ (ಐಷಾರಾಮಿ ಕಾರು ಹೊಂದಿದ್ದವರು) 12 ಸಾವಿರ ಕುಟುಂಬಗಳು ಸೇರಿದಂತೆ 3.22 ಲಕ್ಷ ಕುಟುಂಬಗಳ ಕಾರ್ಡುಗಳನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ರದ್ದುಪಡಿಸಿದೆ.

ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿಗಳನ್ನು ಪಡೆದುಕೊಂಡಿದ್ದವರ ಜಿಲ್ಲಾವಾರು ಮಾಹಿತಿ ಇಂತಿದೆ : ಕಲಬುರಗಿ -2114, ಚಿಕ್ಕಮಗಳೂರು 1912, ಬೆಂಗಳೂರು 1312, ರಾಮನಗರ 922, ಉತ್ತರ ಕನ್ನಡ 553, ಯಾದಗಿರಿ 517, ಶಿವಮೊಗ್ಗ 522, ಬೀದರ್ 554, ಬೆಂಗಳೂರು ಗ್ರಾಮಾಂತರ 547, ಬೆಂಗಳೂರು ಪಶ್ಚಿಮ 485, ತುಮಕೂರು 307, ಚಿಕ್ಕಬಳ್ಳಾಪುರ 296, ಹಾವೇರಿ
220, ಬಾಗಲಕೋಟೆ 216, ವಿಜಯಪುರ 214, ಬೆಂಗಳೂರು ಉತ್ತರ 201, ಮಂಡ್ಯ 137, ದಕ್ಷಿಣ ಕನ್ನಡ 130, ಬಳ್ಳಾರಿ 67, ಬೆಂಗಳೂರು ಪೂರ್ವ 53, ಬೆಂಗಳೂರು ದಕ್ಷಿಣ 91, ಚಾಮರಾಜನಗರ 89, ಚಿತ್ರದುರ್ಗ 43, ದಾವಣಗೆರೆ 62, ಧಾರವಾಡ 15, ಗದಗ 15, ಹಾಸನ 86, ಕೊಡಗು 21, ಕೋಲಾರ 65, ಕೊಪ್ಪಳ 29, ಮೈಸೂರು 123, ರಾಯಚೂರು 39, ಉಡುಪಿ 42, ಕಾರ್ಡುಗಳನ್ನು ರದ್ದು ಮಾಡಲಾಗಿದೆ.

Leave A Reply

Your email address will not be published.