ತಾಯಿಯ ಕಾಲುಂಗುರ ನುಂಗಿದ ಎಂಟು ತಿಂಗಳ ಮಗು!

ಎಂಟು ತಿಂಗಳ ಮಗುವೊಂದು ತಾಯಿಯ ಕಾಲುಂಗುರ ನುಂಗಿ, ಶ್ವಾಸಕೋಶದಲ್ಲಿ ಸಿಲುಕಿಕೊಂಡ ಘಟನೆ ಬಾರಾಮತಿಯಲ್ಲಿ ನಡೆದಿದೆ.

ಕಾಲುಂಗಿರ ನುಂಗಿದ ಮಗುವನ್ನು ಎಂಟು ತಿಂಗಳ ಕಾರ್ತಿಂಗ್ ಸಿಂಗ್ ಎಂದು ಗುರುತಿಸಲಾಗಿದೆ.

ಕಾರ್ತಿಕ್ ತಾಯಿಯ ಎದೆಹಾಲು ಕುಡಿಯುವುದನ್ನು ನಿಲ್ಲಿಸಿದ್ದೂ ಅಲ್ಲದೆ, ಯಾವುದೇ ಆಹಾರವನ್ನೂ ಮಾಡದೆ ಹಸಿವಿನಿಂದ ಅಳುತ್ತಿದ್ದ. ಜೊತೆಗೆ ನೋವಿನಿಂದ ಬಳಲುತ್ತಿದ್ದ. ಇದರಿಂದ ಗಾಬರಿಗೊಂಡ ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ವೈದ್ಯರು ಮಾತ್ರೆ ನೀಡಿದ್ದಾರೆ.

ಆದರೆ ಬಾಲಕನ ಪರಿಸ್ಥಿತಿ ಮಾತ್ರ ಸುಧಾರಿಸಲಿಲ್ಲ. ಕೂಡಲೇ ಇನ್ನೊಂದು ವೈದ್ಯರ ಬಳಿ ತೆರಳಿ ಎಕ್ಸ್‌ರೇ ಮಾಡಿಸಿದ್ದಾರೆ. ಆಗ ಪೋಷಕರಿಗೆ ಆತಂಕದ ಮಾಹಿತಿ ದೊರಕಿದ್ದು, ಶ್ವಾಸಕೋಶದಲ್ಲಿ ಗೋಲಾಕಾರದವ ವಸ್ತುವೊಂದು ಸಿಲುಕಿಕೊಂಡಿರುವುದು ಗೊತ್ತಾಗಿದೆ. ಕೂಡಲೇ ಶಸ್ತ್ರಚಿಕಿತ್ಸೆ ನಡೆಸಿ ಶ್ವಾಸನಾಳದಿಂದ ಹೊರ ತೆಗೆದಿದ್ದಾಗ, ಅದು ತಾಯಿಯ ಕಾಲುಂಗುರ ಎಂದು ತಿಳಿದು ಬಂದಿದೆ.

ಮಗುವಿನ ತಾಯಿಯ ಕಾಲುಂಗುರ ಕಾಣೆಯಾಗಿದ್ದು, ಎಲ್ಲೂ ಸಿಕ್ಕಿರಲಿಲ್ಲ. ಎಲ್ಲೋ ಕಳೆದು ಹೋಗಿರಬಹುದೆಂದು ಸುಮ್ಮನಾಗಿದ್ದರು. ಆದರೆ ಮಗು ಅದನ್ನು ಬಾಯೊಳಗೆ ಹಾಕಿಕೊಂಡಿದ್ದು ಗೊತ್ತೇ ಆಗಿರಲಿಲ್ಲ ಎಂದು ತಾಯಿ ಹೇಳಿದ್ದಾರೆ. ಸದ್ಯ ಬಾಲಕ ಚೇತರಿಸಿಕೊಳ್ಳುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಚೂರು ಲೇಟ್ ಆಗಿದ್ದರು ಬಾಲಕನ ಪ್ರಾಣಕ್ಕೇ ಕುತ್ತು ಉಂಟಾಗುತ್ತಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

Leave A Reply

Your email address will not be published.