ಪುತ್ತೂರು : ಆಂಧ್ರಪ್ರದೇಶದ ಕಾರಲ್ಲಿ ಮುಸ್ಲಿಂ ವ್ಯಕ್ತಿಯ ಓಡಾಟ | ವ್ಯಕ್ತಿ ಪೊಲೀಸರ ವಶಕ್ಕೆ

ಪುತ್ತೂರು : ಬಿಜೆಪಿ ಕಾರ್ಯಕರ್ತ ಬೆಳ್ಳಾರೆ ಪ್ರವೀಣ್‌ ಹತ್ಯೆ ಬಳಿಕ ಪುತ್ತೂರು ತಾಲೂಕಿನಾದ್ಯಂತ ಜನರಲ್ಲಿ ಭಯ ಮಾಸಿ ಹೋಗಿಲ್ಲ. ಈ ಬೆನ್ನಲ್ಲೇ ರಾಜ್ಯದಲ್ಲೂ ಕೋಮುಗಲಭೆಯ ಪ್ರಕರಣಗಳು ಒಂದಲ್ಲ ಒಂದು ರೀತಿಯಲ್ಲಿ ನಡೆಯುತ್ತಿರುತ್ತದೆ.


Ad Widget

ಈ ಘಟನೆಗೆ ಪೂರಕವೆಂಬಂತೆ ಇಂದು ಬೆಳ್ಳಂಬೆಳಗ್ಗೆ ಎರಕ್ಕಳ ಎಂಬಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಆಂಧ್ರಪ್ರದೇಶ ನೋಂದಣಿಯ ಕಾರೊಂದರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ತಿರುಗಾಡಿದ್ದು, ಇದನ್ನು ಸಾರ್ವಜನಿಕರು ಗಮನಿಸಿ ಪುತ್ತೂರು ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಕೂಡಲೇ ಈತನನ್ನು ವಶಕ್ಕೆ ಪಡೆದಿದ್ದಾರೆ. ಈ ನಿಟ್ಟಿನಲ್ಲಿ ಪುತ್ತೂರು ತಾಲೂಕಿನಿಂದ ಬೆಳ್ಳಾರೆ ಸುಳ್ಯ ಸುತ್ತಮುತ್ತ ಪೊಲೀಸರು ಮತ್ತಷ್ಟು ಗಸ್ತು ತಿರುಗುತ್ತಿದ್ದಾರೆ.

ಮಾಹಿತಿಯ ಪ್ರಕಾರ ಎರಕ್ಕಳ ಪರಿಸರದಲ್ಲಿ ಈ ವ್ಯಕ್ತಿ ವಿಳಾಸ ಹುಡುಕುವ ನೆಪದಲ್ಲಿ ಓಡಾಡಿಕೊಂಡಿದ್ದಾಗಿ ತಿಳಿದು ಬಂದಿದೆ. ಈ ವ್ಯಕ್ತಿಯ ಈ ನಡವಳಿಕೆ ಗಮನಿಸಿ ಜನರು ಅನುಮಾನಗೊಂಡಿದ್ದಾರೆ. ಪೊಲೀಸರು ಈತನನ್ನು ವಶಕ್ಕೆ ಪಡದು ವಿಚಾರಣೆ ನಡೆಸುತ್ತಿದ್ದು ಮೇಲ್ನೋಟಕ್ಕೆ ಈತ ಅನೈತಿಕ ಚಟುವಟಿಕೆಗಾಗಿ ಬಂದಿರುವ ಶಂಕೆಯಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ.


Ad Widget
error: Content is protected !!
Scroll to Top
%d bloggers like this: