ಮನುಷ್ಯರಂತೆಯೇ ಉಸಿರಾಡುತ್ತಿರುವ ಮರದ ಅಪರೂಪದ ವೀಡಿಯೋ ವೈರಲ್

ಮನುಷ್ಯರು,ಪ್ರಾಣಿ-ಪಕ್ಷಿಗಳು ಉಸಿರಾಡುವುದನ್ನು ನಾವು ನೋಡಿದ್ದೇವೆ. ಆದ್ರೆ ಮರ ಉಸಿರಾಡುವುದನ್ನು ನೋಡಿದ್ದೀರಾ. ಪ್ರಕೃತಿಯ ಪ್ರಕಾರ ಪ್ರತಿಯೊಂದು ವಸ್ತುವೂ ಉಸಿರಾಡುತ್ತದೆ. ಅದರಂತೆ ಮರವೂ ಕೂಡ. ಆದ್ರೆ, ನಾವು ನೋಡಿಲ್ಲ ಅಷ್ಟೇ.. ಆದ್ರೆ, ಇದೀಗ ವೈರಲ್ ಆದ ವೀಡಿಯೋದಲ್ಲಿ ಜೀವಿಗಳಂತೆಯೇ ಮರವೂ ಉಸಿರಾಡುವುದನ್ನು ನೋಡಬಹುದು.


Ad Widget

ಹೌದು. ಒಂದು ಕ್ಷಣ ನಿಮ್ಮ ಕಣ್ಣುಗಳನ್ನು ನೀವೇ ನಂಬಲು ಅಸಾಧ್ಯವಾದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮರ ಉಸಿರಾಡುವುದನ್ನು ನೋಡಬಹುದಾಗಿದೆ. ಉಸಿರಾಡುವಾಗ ಜೀವಿಗಳ ಎದೆಯ ಏರಿಳಿತ ಯಾವ ರೀತಿ ಇರುತ್ತದೋ ಅದೇ ಮಾದರಿಯಲ್ಲಿ ಮರದ ಉಸಿರಾಟವು ಇದೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಮರದ ಮಧ್ಯ ಭಾಗದಲ್ಲಿ ಬಿರುಕು ಮೂಡಿದೆ. ಮನುಷ್ಯರು ಉಸಿರಾಡುವಂತೆಯೇ,  ಮರವು ಬಿರುಕನ್ನು ಮುಚ್ಚುವ ಮತ್ತು ತೆರೆಯುವ ಮೂಲಕ ಉಸಿರಾಡುವುದನ್ನು ಮತ್ತು ಉಸಿರು ಬಿಡುವುದನ್ನು ವೀಡಿಯೊ ತೋರಿಸುತ್ತದೆ. ಇಂತಹ ಒಂದು ದೃಶ್ಯ ಕೆನಡಾದ ಕಾಲ್ಗರಿಯಲ್ಲಿ ನಡೆದಿದೆ.


Ad Widget

ಈ ವಿಡಿಯೋವನ್ನು ವೈರಲ್​ ಹಗ್​ ಪೇಜ್​ನಲ್ಲಿ ಶೇರ್​ ಮಾಡಿಕೊಂಡಿದ್ದು, ಲಕ್ಷಾಂತರ ಮಂದಿ ಈಗಾಗಲೇ ವೀಕ್ಷಣೆ ಮಾಡಿದ್ದಾರೆ. ಭಾರಿ ಮಳೆ ಮತ್ತು ಗಾಳಿಯ ನಂತರ ಮರದಲ್ಲಿ ಬಿರುಕು ಉಂಟಾಗುತ್ತದೆ ಮತ್ತು ಗಾಳಿ ಬೀಸುವ ಸಮಯದಲ್ಲಿ ಈ ಬಿರುಕು ತೆರೆದು ಮುಚ್ಚುತ್ತದೆ. ಹೀಗಾಗಿ ಮರವು ಉಸಿರಾಡುತ್ತಿರುವಂತೆ ಭಾಸವಾಗುತ್ತದೆ. 


Ad Widget
error: Content is protected !!
Scroll to Top
%d bloggers like this: